ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ಶುರುವಾಗುವ ಮೂರು ಪಂದ್ಯಗಳ ಟಿ20 ಸರಣಿಗೆ ವೇಗಿ ಮೊಹಮದ್ ಶಮಿ, ಬ್ಯಾಟರ್ ದೀಪಕ್ ಹೂಡಾ ಅಲಭ್ಯರಾಗಲಿದ್ದಾರೆ. ಆಸ್ಟ್ರೇಲಿಯಾ ಸರಣಿಗೂ ಮೊದಲು ಕೊರೊನಾಗೆ ತುತ್ತಾಗಿದ್ದ ಮೊಹಮದ್ ಶಮಿ ಇನ್ನೂ ಚೇತರಿಸಿಕೊಂಡಿಲ್ಲ. ದೀಪಕ್ ಹೂಡಾ ಆಸೀಸ್ ಸರಣಿಯ ಮೂರನೇ ಪಂದ್ಯಕ್ಕೂ ಮುನ್ನ ಬೆನ್ನು ನೋವಿಗೆ ತುತ್ತಾಗಿದ್ದು, ದಕ್ಷಿಣ ಆಫ್ರಿಕಾ ಸರಣಯಿಂದ ಹೊರಬೀಳುವ ಸಾಧ್ಯತೆ ಇದೆ.
-
Hello Thiruvananthapuram 👋
— BCCI (@BCCI) September 27, 2022 " class="align-text-top noRightClick twitterSection" data="
Time for the #INDvSA T20I series. 👍#TeamIndia | @mastercardindia pic.twitter.com/qU5hGSR3Io
">Hello Thiruvananthapuram 👋
— BCCI (@BCCI) September 27, 2022
Time for the #INDvSA T20I series. 👍#TeamIndia | @mastercardindia pic.twitter.com/qU5hGSR3IoHello Thiruvananthapuram 👋
— BCCI (@BCCI) September 27, 2022
Time for the #INDvSA T20I series. 👍#TeamIndia | @mastercardindia pic.twitter.com/qU5hGSR3Io
ಕೊರೊನಾಗೆ ತುತ್ತಾಗಿರುವ ಮೊಹಮದ್ ಶಮಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ. ಅವರ ಪಾಲ್ಗೊಳ್ಳುವಿಕೆ ಬಗ್ಗೆ ವೈದ್ಯಕೀಯ ತಂಡ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಅವರ ಬದಲಿ ಆಟಗಾರನಾಗಿ ಆಯ್ಕೆಯಾದ ಉಮೇಶ್ ಯಾದವ್ ತಂಡದೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ದೀಪಕ್ ಹೂಡಾ ಬದಲಾಗಿ ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಬೆನ್ನು ನೋವಿಗೆ ತುತ್ತಾಗಿರುವ ದೀಪಕ್ ಹೂಡಾಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ವೈದ್ಯಕೀಯ ತಂಡದ ನೆರವು ಬೇಕಿದೆ ಎಂದು ತಿಳಿದುಬಂದಿದೆ. ಹೂಡಾ ತಂಡದೊಂದಿಗೆ ತಿರುವನಂತಪುರಕ್ಕೆ ಪ್ರಯಾಣಿಸಿಲ್ಲ. ಸರಣಿಗೆ ಮೀಸಲು ಆಟಗಾರನಾಗಿ ಆಯ್ಕೆಯಾದ ಶ್ರೇಯಸ್ ಅಯ್ಯರ್ ತಂಡ ಸೇರಬಹುದಾಗಿದೆ.
ವಿಶ್ವಕಪ್ಗೆ ಹೂಡಾ ಲಭ್ಯರಾಗ್ತಾರಾ?: ಇನ್ನು ಗಾಯಗೊಂಡಿರುವ ದೀಪಕ್ ಹೂಡಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಅಕ್ಟೋಬರ್ 4 ರಂದು ಮುಗಿಯಲಿದೆ. ಬಳಿಕ ತಂಡ ವಿಶ್ವಕಪ್ನಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಅಷ್ಟೊತ್ತಿಗೆ ಹೂಡಾ ಚೇತರಿಸಿಕೊಂಡು ತಂಡದೊಂದಿಗೆ ಪಯಣ ಬೆಳೆಸಲಿದ್ದಾರಾ ಎಂಬ ಬಗ್ಗೆ ವೈದ್ಯರು ದೃಢಪಡಿಸಿಲ್ಲ.
ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವಾಡಲಿದೆ.
ಓದಿ: India and South Africa T20 Match: ತಿರುವನಂತಪುರಂಗೆ ಬಂದಿಳಿದ ಉಭಯ ತಂಡಗಳ ಆಟಗಾರರು