ಢಾಕಾ: ಬಾಂಗ್ಲಾದೇಶದ ಆಲ್ರೌಂಡರ್ ಶಕಿಬ್ ಅಲ್ ಹಸನ್ ಟಿ-20 ಕ್ರಿಕೆಟ್ನಲ್ಲಿ 100 ವಿಕೆಟ್ ಮತ್ತು 1000 ರನ್ ಪೂರೈಸಿದ ಮೊದಲ ಮತ್ತು ಏಕೈಕ ಕ್ರಿಕೆಟರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್ ಪಡೆಯುವ ಮೂಲಕ ಟಿ-20 ಕ್ರಿಕೆಟ್ನಲ್ಲಿ 100(102) ವಿಕೆಟ್ ಪಡೆದ ವಿಶ್ವದ 2ನೇ ಬೌಲರ್ ಹಾಗೂ ಮೊದಲ ಸ್ಪಿನ್ನರ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಶ್ರೀಲಂಕಾದ ಲಸಿತ್ ಮಾಲಿಂಗ್ (107) ಈ ಸಾಧನೆ ಮಾಡಿದ ಮೊದಲ ಬೌಲರ್ ಆಗಿದ್ದಾರೆ. ಕಿವೀಸ್ ಬೌಲರ್ ಟಿಮ್ ಸೌಥಿ 99 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.
ಇನ್ನು ಶಕಿಬ್ ಅಲ್ ಹಸನ್ ಟಿ-20 ಕ್ರಿಕೆಟ್ನಲ್ಲಿ 1718 ರನ್ಗಳಿಸಿದ್ದಾರೆ. ಈ ಮೂಲಕ ಚುಟುಕು ಮಾದರಿಯಲ್ಲಿ 100 ವಿಕೆಟ್ ಮತ್ತು 1000ಕ್ಕೂ ಹೆಚ್ಚು ರನ್ ಪೂರೈಸಿರುವ ಏಕೈಕ ಕ್ರಿಕೆಟಿಗರ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
-
First man to claim 100 wickets and score 1000 runs in T20Is 🔥
— ICC (@ICC) August 9, 2021 " class="align-text-top noRightClick twitterSection" data="
Shakib Al Hasan 👏#BANvAUS pic.twitter.com/mRYo4DxfIZ
">First man to claim 100 wickets and score 1000 runs in T20Is 🔥
— ICC (@ICC) August 9, 2021
Shakib Al Hasan 👏#BANvAUS pic.twitter.com/mRYo4DxfIZFirst man to claim 100 wickets and score 1000 runs in T20Is 🔥
— ICC (@ICC) August 9, 2021
Shakib Al Hasan 👏#BANvAUS pic.twitter.com/mRYo4DxfIZ
ಕೊನೆಯ ಟಿ-20 ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾಕ್ಕೆ 123 ರನ್ಗಳ ಸುಲಭದ ಟಾರ್ಗೆಟ್ ನೀಡಿತ್ತು. ಆದರೆ, ಬಾಂಗ್ಲಾ ಬೌಲಿಂಗ್ ದಾಳಿಗೆ ತತ್ತರಿಸಿದ ಕಾಂಗರೂ ಬಳಗ ಕೇವಲ 62 ರನ್ಗಳಿಗೆ ಆಲೌಟ್ ಆಗಿ 4-1ರಲ್ಲಿ ಸರಣಿ ಸೋಲು ಕಂಡಿತು.
ಇದನ್ನು ಓದಿ:ಟಿ-20 ಇತಿಹಾಸದಲ್ಲೇ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ, 4-1ರಲ್ಲಿ ಸರಣಿ ಗೆದ್ದ ಬಾಂಗ್ಲಾ