ETV Bharat / sports

ಕೊನೆಯ ಪಿಎಸ್ಎಲ್ ಆಡಲಿರುವ 44ರ ಶಾಹೀದ್ ಅಫ್ರಿದಿ​: ನಿವೃತ್ತಿ ಸುಳಿವು!

2021ರ ಆವೃತ್ತಿಯಲ್ಲಿ ಅಫ್ರಿದಿ ಮುಲ್ತಾನ್​ ಸುಲ್ತಾನ್​ನಲ್ಲಿ ಆಡಿದ್ದರು. ಪಿಸಿಬಿ ಮಾಹಿತಿಯ ಪ್ರಕಾರ ಇಂಗ್ಲೆಂಡ್ ಬ್ಯಾಟರ್​ ಜೇಮ್ಸ್​ ವಿನ್ಸ್​ ಜೊತೆಗೆ ಅಫ್ರಿದಿ ಗ್ಲಾಡಿಯೇಟರ್​ ತಂಡಕ್ಕೆ ಡೈಮಂಡ್​ ಮತ್ತು ಸಿಲ್ವರ್​ ಸುತ್ತಿನಲ್ಲಿ ವರ್ಗಾವಣೆಗೊಂಡಿದ್ದಾರೆ.

Shahid Afridi to play for Quetta Gladiators in his farewell PSL season
ಶಾಹೀದ್​ ಅಫ್ರಿದಿ ನಿವೃತ್ತಿ
author img

By

Published : Dec 9, 2021, 8:44 PM IST

ಲಾಹೋರ್: ಪಾಕಿಸ್ತಾನದ ಮಾಜಿ ಆಲ್​ರೌಂಡರ್​ ಶಾಹೀದ್ ಅಫ್ರಿದಿ 2022ರ ಪಿಎಸ್​ಎಲ್​ ಲೀಗ್​ ತಮ್ಮ ಕೊನೆಯ ಆವೃತ್ತಿ ಎಂದು ಘೋಷಿಸಿದ್ದಾರೆ. ಮುಲ್ತಾನ್​ ಸುಲ್ತಾನ್​​ನಿಂದ ಕ್ವೆಟ್ಟಾ ಗ್ಲಾಡಿಯೇಟರ್​ ತಂಡಕ್ಕೆ ವರ್ಗಾವಣೆಗೊಂಡ ನಂತರ ಈ ವಿಷಯ ತಿಳಿಸಿದ್ದಾರೆ.

2021ರ ಆವೃತ್ತಿಯಲ್ಲಿ ಅಫ್ರಿದಿ ಮುಲ್ತಾನ್​ ಸುಲ್ತಾನ್​ನಲ್ಲಿ ಆಡಿದ್ದರು. ಪಿಸಿಬಿ ಮಾಹಿತಿಯ ಪ್ರಕಾರ ಇಂಗ್ಲೆಂಡ್ ಬ್ಯಾಟರ್​ ಜೇಮ್ಸ್​ ವಿನ್ಸ್​ ಜೊತೆಗೆ ಅಫ್ರಿದಿ ಗ್ಲಾಡಿಯೇಟರ್​ ತಂಡಕ್ಕೆ ಡೈಮಂಡ್​ ಮತ್ತು ಸಿಲ್ವರ್​ ಸುತ್ತಿನಲ್ಲಿ ವರ್ಗಾವಣೆಗೊಂಡಿದ್ದಾರೆ.

2019ರಲ್ಲಿ ಕೊನೆಯ ಹೆಚ್​ಬಿಎಲ್​ ಟ್ರೋಫಿ ಗೆದ್ದ ನಂತರ ಹಲವಾರು ಏಳು ಬೀಳನ್ನು ಕಂಡಿರುವ ಕ್ವೆಟ್ಟಾ ಗ್ಲಾಡಿಯೇಟರ್​ ತಂಡ ಸೇರಿಕೊಳ್ಳುವುದಕ್ಕೆ ಉತ್ಸುಕನಾಗಿದ್ದೇನೆ. ಇದು ನನ್ನ ಕೊನೆಯ ಪಿಎಸ್​ಎಲ್ ಆಗಿದ್ದು, ಪ್ರಶಸ್ತಿ ಜಯಿಸಿ ನಿವೃತ್ತಿಯಾಗುವುದು ನನ್ನ ಕನಸಾಗಿದೆ. 2017ರಲ್ಲಿ ಪೇಜಾವರ್ ಜಾಲ್ಮಿಯ ಪರ ಕೊನೆಯ ಬಾರಿ ಪ್ರಶಸ್ತಿ ಪಡೆದಿದ್ದು, ಮತ್ತೊಂದು ಟ್ರೋಫಿ ಎತ್ತಿ ಹಿಡಿಯಲು ಬಯಸಿದ್ದೇನೆ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

44 ವರ್ಷದ ಶಾಹೀದ್​ ಅಫ್ರಿದಿ 2010ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ, 2015ರ ವಿಶ್ವಕಪ್​ ನಂತರ ಏಕದಿನ ಹಾಗೂ 2017ರಲ್ಲಿ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇನ್ನೂ ಫ್ರಾಂಚೈಸಿ ಲೀಗ್​ಗಳಲ್ಲಿ ಆಡುವುದನ್ನು ಮುಂದುವರಿಸಿದ್ದರು. ಇದೀಗ ಕೊನೆಯ ಪಿಎಸ್​ಎಲ್​ನಲ್ಲಿ ಆಡುತ್ತೇನೆಂದು ಘೋಷಿಸುವ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿಯಾಗುವುದಾಗಿ ಸುಳಿವು ನೀಡಿದ್ದಾರೆ.

ಇದನ್ನೂ ಓದಿ:ಬೋರ್ಡ್​ ನೀಡಿದ್ದ 48 ಗಂಟೆ ಸಮಯದಲ್ಲಿ ನಾಯಕತ್ವ ತ್ಯಜಿಸದ ಕೊಹ್ಲಿ, ಬಲವಂತದಿಂದ ಕೆಳಗಿಳಿಸಿದ ಬಿಸಿಸಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.