ETV Bharat / sports

ಇಂಗ್ಲೆಂಡ್ ಮಹಿಳಾ ತಂಡ ವಿರುದ್ಧದ ಏಕದಿನ ಪಂದ್ಯ : ದಾಖಲೆ ಬರೆದ ಶೆಫಾಲಿ ವರ್ಮಾ

2019ರಲ್ಲಿ ತನ್ನ 15ನೇ ವರ್ಷದಲ್ಲಿ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಶೆಫಾಲಿ ವರ್ಮಾ ಕಳೆದ ವಾರ ಇಂಗ್ಲೆಂಡ್ ವನಿತೆಯರ ವಿರುದ್ಧದ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಇದೀಗ 17 ವರ್ಷ 150 ದಿನಗಳಿಗೆ ಏಕದಿನ ಕ್ರಿಕೆಟ್​ಗೂ ಪದಾರ್ಪಣೆ ಮಾಡುವ ಮೂಲಕ ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕಿರಿಯ ಭಾರತೀಯ ಮಹಿಳಾ ಕ್ರಿಕೆಟರ್​ ಎನಿಸಿಕೊಂಡಿದ್ದಾರೆ.

ಶೆಫಾಲಿ ವರ್ಮಾ
ಶೆಫಾಲಿ ವರ್ಮಾ
author img

By

Published : Jun 27, 2021, 7:38 PM IST

ಬ್ರಿಸ್ಟೋಲ್ : ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 131 ಏಕದಿನ ಆಟಗಾರ್ತಿಯಾಗಿ ಭಾರತ ಮಹಿಳಾ ತಂಡದ ಕ್ಯಾಪ್ ಪಡೆದರು. ಈ ಮೂಲಕ 17 ವರ್ಷದ ಶೆಫಾಲಿ ವರ್ಮಾ ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಭಾರತದ (ಪುರುಷ ಮತ್ತು ಮಹಿಳಾ)ಅತ್ಯಂತ ಕಿರಿಯ ಕ್ರಿಕೆಟರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

2019ರಲ್ಲಿ ತನ್ನ 15ನೇ ವರ್ಷದಲ್ಲಿ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಶೆಫಾಲಿ ವರ್ಮಾ ಕಳೆದ ವಾರ ಇಂಗ್ಲೆಂಡ್ ವನಿತೆಯರ ವಿರುದ್ಧದ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಇದೀಗ 17 ವರ್ಷ 150 ದಿನಗಳಿಗೆ ಏಕದಿನ ಕ್ರಿಕೆಟ್​ಗೂ ಪದಾರ್ಪಣೆ ಮಾಡುವ ಮೂಲಕ ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕಿರಿಯ ಭಾರತೀಯ ಮಹಿಳಾ ಕ್ರಿಕೆಟರ್​ ಎನಿಸಿದ್ದಾರೆ.

ಮೂರು ಮಾದರಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ವಿಶ್ವದ ಮೂರನೇ ಕಿರಿಯ ಮಹಿಳಾ ಕ್ರಿಕೆಟರ್​ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ(ಪುರುಷ ಮತ್ತು ಮಹಿಳಾ) 5ನೇ ಕ್ರಿಕೆಟರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಆಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕಿರಿಯ ಕ್ರಿಕೆಟರ್ (ಪುರುಷ ಮತ್ತು ಮಹಿಳಾ) ಎಂದ ದಾಖಲೆ ಹೊಂದಿದ್ದಾರೆ. ಅವರು 17 ವರ್ಷ ಮತ್ತು 78 ದಿನಗಳಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಮಹಿಳಾ ಕ್ರಿಕೆಟಿಗರಲ್ಲಿ ಇಂಗ್ಲೆಂಡ್​ನ ಮಾಜಿ ವಿಕೆಟ್ ಕೀಪರ್ ಸಾರಾ ಟೇಲರ್ ಮತ್ತು ಆಸ್ಟ್ರೇಲಿಯಾದ ಎಲಿಸ್​ ಪೆರ್ರಿ ಶೆಫಾಲಿಗಿಂತ ಚಿಕ್ಕ ವಯಸ್ಸಿನಲ್ಲಿ ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ದಾಖಲೆ ಹೊಂದಿದ್ದಾರೆ. ಆದರೆ, ಇಂದಿನ ಪಂದ್ಯದಲ್ಲಿ ಶೆಫಾಲಿ ಕೇವಲ 14 ಎಸೆತಗಳಲ್ಲಿ 15 ರನ್​ಗಳಿಸಿ ವಿಕೆಟ್ ಒಪ್ಪಿಸಿ ನಿರಾಶೆ ಅನುಭವಿಸಿದರು. ಭಾರತ ತಂಡ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್​ಗಳಿಸಿತು.

ಇದನ್ನು ಓದಿ: ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಬೌಲಿಂಗ್ ಆಯ್ಕೆ: ಶೆಫಾಲಿ ವರ್ಮಾ ಪದಾರ್ಪಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.