ETV Bharat / sports

ಪದಾರ್ಪಣೆ ಪಂದ್ಯದಲ್ಲೇ ಸಿಕ್ಸರ್​ನಲ್ಲಿ ವಿಶ್ವದಾಖಲೆ ಬರೆದ ಶೆಫಾಲಿ ವರ್ಮಾ - ಭಾರತ ಮಹಿಳಾ ತಂಡ vs ಇಂಗ್ಲೆಂಡ್ ಮಹಿಳಾ ತಂಡ ಟೆಸ್ಟ್​

ಶೆಫಾಲಿ ವರ್ಮಾ ಒಟ್ಟು 159(96+63)ರನ್​ಗಳಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ರನ್ ​ಗಳಿಸಿದ ಭಾರತದ ಆಟಗಾರ್ತಿ ಹಾಗೂ ವಿಶ್ವದ 3ನೇ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾದರು. ಶೆಫಾಲಿಗೂ ಮುನ್ನ 2001ರಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಗೋಸ್ಕೋ 204 ಮತ್ತು 1986ರಲ್ಲಿ ಇಂಗ್ಲೆಂಡ್​ನ ಲೆಸ್ಲೆ ಕೂಕ್ 189(72+117) ರನ್​ ಗಳಿಸಿದ್ದರು..

ಶೆಫಾಲಿ ವರ್ಮಾ
ಶೆಫಾಲಿ ವರ್ಮಾ
author img

By

Published : Jun 20, 2021, 3:20 PM IST

ಬ್ರಿಸ್ಟೋಲ್ : ಇಂಗ್ಲೆಂಡ್ ಮತ್ತು ಭಾರತ ವನಿತೆಯರ ಏಕೈಕ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಆದರೆ, ಫಾಲೋಆನ್​ಗೆ ತುತ್ತಾದರೂ ಭಾರತ ತಂಡದ ಆಟಗಾರ್ತಿಯರು ಅದ್ಭುತ ಕಮ್​ಬ್ಯಾಕ್​ ಮಾಡಿ ಸೋಲು ತಪ್ಪಿಸಿದರು. ಈ ಪಂದ್ಯದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಶೆಫಾಲಿ ವರ್ಮಾ, ಸ್ನೇಹ್​ ರಾಣಾ ಮಹತ್ವದ ದಾಖಲೆಗೆ ಪಾತ್ರರಾದರು.

ವಿಶ್ವ ಕ್ರಿಕೆಟ್​ನ ಉದಯೋನ್ಮುಖ ಕ್ರಿಕೆಟ್‌ ಆಟಗಾರ್ತಿ ಶೆಫಾಲಿ ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಆಕರ್ಷಕ 96 ರನ್​ಗಳಿಸಿದ್ದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ 63 ರನ್​ ಗಳಿಸಿದರು. ಅವರು ಮೊದಲ ಇನ್ನಿಂಗ್ಸ್​ನಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್​ ಹಾಗೂ 2ನೇ ಇನ್ನಿಂಗ್ಸ್​ನಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್​ ಸಿಡಿಸಿದ್ದರು. ಈ ಮೂಲಕ ಹಲವು ದಾಖಲೆಗಳಿಗೆ ಪಾತ್ರರಾದರು.

ಒಂದೇ ಪಂದ್ಯದಲ್ಲಿ ಹೆಚ್ಚು ಸಿಕ್ಸರ್ - ವಿಶ್ವದಾಖಲೆ

ಶೆಫಾಲಿ ಟೆಸ್ಟ್​ ಪಂದ್ಯದಲ್ಲಿ ಗರಿಷ್ಠ(3) ಸಿಕ್ಸರ್​ ಸಿಡಿಸಿದ ಮಹಿಳಾ ಕ್ರಿಕೆಟರ್​ ಎಂಬ ದಾಖಲೆಗೆ ಪಾತ್ರರಾದರು. ಈ ಮೊದಲು ಆಸ್ಟ್ರೇಲಿಯಾ ಅಲೀಸಾ ಹೀಲೀ 2017ರಲ್ಲಿ 2 ಸಿಕ್ಸರ್​ ಸಿಡಿಸಿರೋದು ಈವರೆಗೆ ವಿಶ್ವದಾಖಲೆಯಾಗಿತ್ತು.

ಪದಾರ್ಪಣೆ ಟೆಸ್ಟ್​ ಪಂದ್ಯದಲ್ಲಿ ಗರಿಷ್ಠ ರನ್ ಬಾರಿಸಿದ 3ನೇ ಆಟಗಾರ್ತಿ

ಶೆಫಾಲಿ ವರ್ಮಾ ಒಟ್ಟು 159(96+63)ರನ್​ಗಳಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ರನ್ ​ಗಳಿಸಿದ ಭಾರತದ ಆಟಗಾರ್ತಿ ಹಾಗೂ ವಿಶ್ವದ 3ನೇ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾದರು. ಶೆಫಾಲಿಗೂ ಮುನ್ನ 2001ರಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಗೋಸ್ಕೋ 204 ಮತ್ತು 1986ರಲ್ಲಿ ಇಂಗ್ಲೆಂಡ್​ನ ಲೆಸ್ಲೆ ಕೂಕ್ 189(72+117) ರನ್​ ಗಳಿಸಿದ್ದರು.

ಇದನ್ನು ಓದಿ:ಪದಾರ್ಪಣೆ ಪಂದ್ಯದಲ್ಲೇ ವಿನೂತನ ದಾಖಲೆ ಬರೆದ ಸ್ನೇಹ್​ ರಾಣಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.