ಮುಂಬೈ: ವಿಶ್ವದ ನಂಬರ್ 1 ಟಿ20 ಬ್ಯಾಟರ್ ಭಾರತದ ಶೆಫಾಲಿ ವರ್ಮಾ ಮತ್ತು ಆಲ್ರೌಂಡರ್ ರಾಧ ಯಾದವ್ 2021ರ ಬಿಗ್ಬ್ಯಾಶ್ ಲೀಗ್ಗೆ ಪದಾರ್ಪಣೆ ಮಾಡಲಿದ್ದಾರೆ. ಈ ಇಬ್ಬರು ಭಾರತೀಯರು ಸಿಡ್ನಿ ಸಿಕ್ಸರ್ ತಂಡದ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಸೋಮವಾರ ಕ್ಲಬ್, ಶೆಫಾಲಿ ಮತ್ತು ರಾಧ ಅವರು ತಂಡಕ್ಕೆ ಸೇರ್ಪಡೆಯಾಗಿರುವುದಾಗಿ ಘೋಷಿಸಿದೆ. ಭಾನುವಾರವಷ್ಟೇ ಭಾರತದ ಸ್ಟಾರ್ ಓಪನರ್ ಸ್ಮೃತಿ ಮಂದಾನ ಮತ್ತು ಆಲ್ರೌಂಡರ್ ದೀಪ್ತಿ ಶರ್ಮಾ ಸಿಡ್ನಿ ಥಂಡರ್ ತಂಡಕ್ಕೆ ಸೇರಿಕೊಂಡಿದ್ದರು.
-
So the Sydney derby should be fun this year! 😅
— Weber Women's Big Bash League (@WBBL) September 26, 2021 " class="align-text-top noRightClick twitterSection" data="
The @SixersBBL have signed Indian talents Shafali Verma and Radha Yadav. Full story: https://t.co/Kg0jiRgag1 #WBBL07 pic.twitter.com/ERmGfyLl4t
">So the Sydney derby should be fun this year! 😅
— Weber Women's Big Bash League (@WBBL) September 26, 2021
The @SixersBBL have signed Indian talents Shafali Verma and Radha Yadav. Full story: https://t.co/Kg0jiRgag1 #WBBL07 pic.twitter.com/ERmGfyLl4tSo the Sydney derby should be fun this year! 😅
— Weber Women's Big Bash League (@WBBL) September 26, 2021
The @SixersBBL have signed Indian talents Shafali Verma and Radha Yadav. Full story: https://t.co/Kg0jiRgag1 #WBBL07 pic.twitter.com/ERmGfyLl4t
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಕ್ರಿಕೆಟರ್ ಆಗಿರುವ ಶೆಫಾಲಿ ವರ್ಮಾ, ಆಸ್ಟ್ರೇಲಿಯಾ ನೆಲದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಭಾರತವನ್ನು ಫೈನಲ್ಗೆ ಕೊಂಡೊಯ್ದಿದ್ದರು. ಅಲ್ಲದೆ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು, ಇತ್ತೀಚೆಗೆ ಇಂಗ್ಲೆಂಡ್ನಲ್ಲಿ ಆರಂಭವಾಗಿದ್ದ ದಿ ಹಂಡ್ರೆಡ್ ಲೀಗ್ನಲ್ಲೂ ಬರ್ಮಿಂಗ್ಹ್ಯಾಮ್ ತಂಡದಲ್ಲಿ ಆಡಿದ್ದರು.
ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಆಸೀಸ್ ಮಹಿಳೆಯರ ಸತತ 26 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನನಗೆ ಇದೊಂದು ಒಳ್ಳೆಯ ಅವಕಾಶ ಮತ್ತು ನನ್ನ ಗುರಿಯೆಂದರೆ ಆಟವನ್ನು ಎಂಜಾಯ್ ಮಾಡುವುದು, ಹೊಸ ಸ್ನೇಹಿತರನ್ನು ಗಳಿಸಿಕೊಳ್ಳುವುದು ಎಂದು ಶೆಫಾಲಿ ವರ್ಮಾ ತಿಳಿಸಿದ್ದಾರೆ.
ಇದನ್ನು ಓದಿ:WBBL: ಸಿಡ್ನಿ ಥಂಡರ್ ತಂಡದಲ್ಲಿ ಆಡಲಿದ್ದಾರೆ ಮಂಧಾನ, ದೀಪ್ತಿ ಶರ್ಮಾ