ETV Bharat / sports

ಮಾಧ್ಯಮ ಪ್ರಸಾರದ ಹಕ್ಕಿನಲ್ಲಿ ಬೃಹತ್​ ಲಾಭಕ್ಕೆ ಬಿಸಿಸಿಐ ಲೆಕ್ಕಾಚಾರ.. ಮುಂದಿನ ಐದು ವರ್ಷ ಇಂಗ್ಲೆಂಡ್​, ಆಸ್ಟ್ರೇಲಿಯಾ ಮೇಲೆ ಸಿಂಹಪಾಲು ಪಂದ್ಯ

ಮುಂದಿನ ಐದು ವರ್ಷದ ಮಾಧ್ಯಮ ಪ್ರಸಾರ ಹಕ್ಕಿನ ಬಿಡ್ಡಿಂಗ್​ಗೂ ಮುನ್ನ ಬಿಸಿಸಿಐ ಭಾರತದಲ್ಲಿ ಆಡುವ ಪಂದ್ಯಗಳ ಡ್ರಾಫ್ಟ್​ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಹೆಚ್ಚಿನ ಪಂದ್ಯಗಳನ್ನು ಆಡಲಿದೆ.

media rights bid
ಮಾಧ್ಯಮ ಪ್ರಸಾರದ ಹಕ್ಕಿನಲ್ಲಿ ಬೃಹತ್​ ಲಾಭಕ್ಕೆ ಬಿಸಿಸಿಐ ಲೆಕ್ಕಾಚಾರ
author img

By

Published : Aug 5, 2023, 7:30 PM IST

ನವದೆಹಲಿ: ಭಾರತದಲ್ಲಿ ನಡೆಯಲಿರುವ ಪಂದ್ಯಗಳ ಪ್ರಸಾರದ ಐದು ವರ್ಷಗಳ ಹಕ್ಕುಗಳನ್ನು ಪಡೆಯಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಟೆಂಡರ್​ ಕರೆದಿದೆ. 2023 ರಿಂದ 2027ರ ವರೆಗಿನ ಪಂದ್ಯಗಳ ಡ್ರಾಫ್ಟ್​ನ್ನು ಈ ವೇಳೆ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾವನ್ನು ಹೆಚ್ಚಿನ ಪಂದ್ಯಗಳಲ್ಲಿ ಎದುರಿಸಲಿದೆ. ಭಾರತ ತವರು ನೆಲದಲ್ಲಿ ಆಡಲಿರುವ 88 ಪಂದ್ಯಗಳಲ್ಲಿ 39ನ್ನು ಆಸಿಸ್​ ಮತ್ತು ಇಂಗ್ಲೆಂಡ್​ ವಿರುದ್ಧವೇ ಆಡಲಿದೆ.

ವಿಶ್ವಕಪ್​ಗೆ ಮುನ್ನ ಭಾರತಕ್ಕೆ ಆಸ್ಟ್ರೇಲಿಯಾ ತಂಡ ಬರಲಿದ್ದು, 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ನಂತರ ಅಕ್ಟೋಬರ್​ 5ರಿಂದ ನವೆಂಬರ್​ 19ರ ವರೆಗೆ ಏಕದಿನ ವಿಶ್ವಕಪ್​ ನಡೆಯಲಿದೆ. ವಿಶ್ವಕಪ್​ ನಂತರ ಆಸ್ಟ್ರೇಲಿಯಾದ ವಿರುದ್ಧ ಭಾರತ 2024ರ ಟಿ20 ವಿಶ್ವಕಪ್​ ಹಿನ್ನೆಲೆಯಲ್ಲಿ 5 ಟಿ20 ಪಂದ್ಯಗಳನ್ನು ಆಡಲಿದೆ. ಈ ಐದು ಪಂದ್ಯಗಳು ನವೆಂಬರ್​ 23 ರಿಂದ ಡಿಸೆಂಬರ್​ 3ರ ವರೆಗೆ ನಡೆಯಲಿದೆ. 2027ರ ಜನವರಿ-ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಐದು ಟೆಸ್ಟ್‌ ಪಂದ್ಯಕ್ಕಾಗಿ ಭಾರತಕ್ಕೆ ಬರಲಿದೆ.

ಭಾರತ ಪ್ರವಾಸದಲ್ಲಿ ಇಂಗ್ಲೆಂಡ್:​ 2024ರಲ್ಲಿ ಇಂಗ್ಲೆಂಡ್ ಜನವರಿ 25 ರಿಂದ ಮಾರ್ಚ್ 11ರ ವರೆಗೆ ಭಾರತದ ವಿರುದ್ಧ ಐದು ಟೆಸ್ಟ್‌ಗಳನ್ನು ಆಡಲು ಬರಲಿದೆ, ಇವುಗಳ ಸ್ಥಳಗಳು ಹೈದರಾಬಾದ್, ವಿಶಾಖಪಟ್ಟಣಂ, ರಾಜ್‌ಕೋಟ್, ರಾಂಚಿ ಮತ್ತು ಧರ್ಮಶಾಲಾ ಎಂದು ಹೇಳಲಾಗಿದೆ. 2025 ರ ಜನವರಿ ಮತ್ತು ಫೆಬ್ರವರಿಯಲ್ಲಿ ಎಂಟು ವೈಟ್ ಬಾಲ್ ಪಂದ್ಯಗಳು ನಡೆಯಲಿದೆ. ಅದರಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳು ಇರಲಿದೆ. 2028ರ ಜನವರಿಯಿಂದ ಮಾರ್ಚ್‌ನಲ್ಲಿ ಇಂಗ್ಲೆಂಡ್ ಭಾರತದಲ್ಲಿ ಐದು ಟೆಸ್ಟ್‌ಗಳನ್ನು ಆಡುವುದರೊಂದಿಗೆ ಪ್ರಸಾರದ ಹಕ್ಕು ಮುಕ್ತಾಯವಾಗಲಿದೆ.

ಬಿಡ್ಡಿಂಗ್​ ಬಗ್ಗೆ ಆಗುತ್ತಿರುವ ವಿಶ್ಲೇಷಣೆಯಲ್ಲಿ "ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ಹೆಚ್ಚು ಗಮನಾರ್ಹವಾಗಿದೆ. ಇದು ಐದು ವರ್ಷದ ಋತುವಿನಲ್ಲಿ ಹೆಚ್ಚು ಗಮನ ಸೆಳೆಯುವ ಪಂದ್ಯಗಳು ಎಂದು ಪರಿಗಣಿಸಲಾಗುತ್ತದೆ. ವಿಶ್ವಕಪ್​ಗೂ ಮುನ್ನ ಮತ್ತು ನಂತರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗಳು ಮೊದಲು ಆಕರ್ಷಕವಾಗಿ ಕಾಣಲಿದೆ. ವಿಶ್ವಕಪ್​ನ ಪಂದ್ಯಗಳ ಪ್ರಸಾರಕ್ಕೆ ಈಗಾಗಲೇ ಮಾಧ್ಯಮಗಳು ಹೂಡಿಕೆ ಮಾಡಿರುವುದರಿಂದ ಬಿಸಿಸಿಐ ಬಿಡ್ಡಿಂಗ್​ಗೆ ಹಣ ಒದಗಿಸುವುದು ಸಂಸ್ಥೆಗಳಿಗೆ ಸವಾಲಾಗಿದೆ" ಎಂದು ಹೇಳಲಾಗುತ್ತಿದೆ.

ಶ್ರೀಲಂಕಾ, ಅಫ್ಘಾನ್​ ವಿರುದ್ಧ: ವೇಳಾಪಟ್ಟಿಯ ಪ್ರಕಾರ ಶ್ರೀಲಂಕಾವು 2026 ಡಿಸೆಂಬರ್​ನಲ್ಲಿ ಭಾರತದಲ್ಲಿ ಒಂದು ಸರಣಿಯನ್ನು ಆಡಲಿದೆ. ಇದರಲ್ಲಿ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಾಗುವುದು. ಆದರೆ ಯಾವುದೇ ಟೆಸ್ಟ್​ ಪಂದ್ಯಗಳು ಈ ಸರಣಿಯಲ್ಲಿ ಇಲ್ಲ. ಜನವರಿ 11, 14, ಮತ್ತು 17 ರಂದು ಮೊಹಾಲಿ, ಇಂದೋರ್ ಮತ್ತು ಬೆಂಗಳೂರಿನಲ್ಲಿ ಮೂರು ಟಿ20 ಆಡಲಾಗುವುದು. ಜೂನ್ 2026ರಲ್ಲಿ ಅಫ್ಘಾನಿಸ್ತಾನವು ಒಂದು ಟೆಸ್ಟ್ ಮತ್ತು ಮೂರು ಎಕದಿನ ಪಂದ್ಯಕ್ಕಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ.

ದಕ್ಷಿಣ ಆಫ್ರಿಕಾ, ಕಿವೀಸ್​ ವಿರುದ್ಧ: ನವೆಂಬರ್ ಮತ್ತು ಡಿಸೆಂಬರ್ 2025 ರಲ್ಲಿ ದಕ್ಷಿಣ ಆಫ್ರಿಕಾ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲು ಭಾರತಕ್ಕೆ ಬರಲಿದೆ. ನ್ಯೂಜಿಲೆಂಡ್ 2024ರಲ್ಲಿ ಮತ್ತು 2026 ರ ಆರಂಭದಲ್ಲಿ ಕ್ರಮವಾಗಿ ಮೂರು ಟೆಸ್ಟ್ ಮತ್ತು ಎಂಟು ವೈಟ್ ಬಾಲ್ ಪಂದ್ಯಗಳನ್ನು ಆಡಲು ಭಾರತ ಪ್ರವಾಸವನ್ನು ಮಾಡಲಿದೆ.

ಬೃಹತ್​ ಮೊತ್ತ ಸಾಧ್ಯತೆ: ಈ ಪ್ರಸಾರದ ಹಕ್ಕನ್ನೂ ಸಹ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಟಿವಿ ಮತ್ತು ಡಿಜಿಟಲ್​ ಎಂದು ವಿಭಾಗ ಮಾಡಿ ಹರಾಜು ನಡೆಸಲಿದೆ. ಐಪಿಎಲ್​ ಅನ್ನು ಈ ರೀತಿ ಹರಾಜು ಮಾಡಿದ್ದರಿಂದ ಬಿಸಿಸಿಐ ಲಾಭವನ್ನು ಮಾಡಿತ್ತು. 2023 ರಿಂದ 2028ರ ಮಾರ್ಚ ವರೆಗಿನ ಪ್ರಸಾರದ ಹಕ್ಕಿಗೆ ಭಾರತೀಯ ಕ್ರಿಕೆಟ್ ಮಂಡಳಿಯು USD 1 ಶತಕೋಟಿ ಅಂದರೆ ಭಾರತೀಯ ರೂಪಿಯಲ್ಲಿ 8200 ಕೋಟಿ ಗಳಿಸುವ ಅಂದಾಜು ಮಾಡಲಾಗುತ್ತಿದೆ. 2018ರ ಒಪ್ಪಂದದಲ್ಲಿ ಬಿಸಿಸಿಐ ಸ್ಟಾರ್ ಇಂಡಿಯಾದಿಂದ USD 944 ಮಿಲಿಯನ್ ಅಂದರೆ ₹ 6138 ಕೋಟಿ ಗಳಿಸಿತ್ತು. ಪ್ರತಿ ಅಂತಾರಾಷ್ಟ್ರೀಯ ಪಂದ್ಯಕ್ಕೆ 60 ಕೋಟಿ ರೂ. ಪಡೆದಂತಾಗಿತ್ತು. ಈ ಬಾರಿ ಇದನ್ನು ಮೀರುವ ಸಾಧ್ಯತೆ ಇದೆ.

ಪ್ರಾಯೋಜಕತ್ವದ ಬಿಡ್:​ ಬಿಸಿಸಿಐ ಇದರ ಜೊತೆಗೆ ಮೂರು ವರ್ಷಗಳ ಸರಣಿಯ ಶೀರ್ಷಿಕೆಯ ಟೈಟಲ್​ ಅನ್ನು ಬಿಡ್​ಗೆ ಕರೆದಿದೆ. ಈ ಹಿಂದೆ ಮಾಸ್ಟರ್​ಕಾರ್ಡ್​ ಸರಣಿಗಳ ಪ್ರಾಯೋಜಕತ್ವವನ್ನು ಹೊಂದಿತ್ತು.

ಇದನ್ನೂ ಓದಿ: ಟಿ- 20ಯಲ್ಲಿ ಅಲ್ಪ ಮೊತ್ತದ ಗುರಿಯೊಂದಿಗೆ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿದ ತಂಡಗಳು ಇವೇ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.