ETV Bharat / sports

ಸ್ಕಾಟ್ಲೆಂಡ್ ಶ್ರೇಷ್ಠ ಆಟಗಾರ ಕ್ಯಾಲಮ್ ಮ್ಯಾಕ್ಲಿಯೋಡ್ ವಿದಾಯ - ಸ್ಕಾಟ್ಲ್ಯಾಂಡ್ ನ ಐತಿಹಾಸಿಕ ಗೆಲುವಿಗೆ ಕಾರಣ

ಸ್ಕಾಟಿಷ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯದ್ಬುತ ಪ್ರದರ್ಶನ ನೀಡಿದ್ದ ಆಟಗಾರ ಕ್ಯಾಲಮ್ ಮ್ಯಾಕ್ಲಿಯೋಡ್ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ.

scottish cricketer announced  retirement from international cricket
ಕ್ಯಾಲಮ್ ಮ್ಯಾಕ್ಲೀಯೋಡ್
author img

By

Published : Nov 5, 2022, 2:08 PM IST

Updated : Nov 5, 2022, 5:20 PM IST

ಹೈದರಾಬಾದ್: ಸ್ಕಾಟ್ಲೆಂಡ್ ಕ್ರಿಕೆಟ್ ಆಟಗಾರ ಕ್ಯಾಲಮ್ ಮ್ಯಾಕ್ಲಿಯೋಡ್ ಕ್ರಿಕೆಟ್ ವತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

2007ರಲ್ಲಿ ಅಂತರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಿದ 33ವರ್ಷದ ಆಟಗಾರ ಕ್ಯಾಲಮ್ ಮ್ಯಾಕ್ಲಿಯೋಡ್ ಎಲ್ಲಾ ಮಾದರಿಯಲ್ಲೂ ಒಟ್ಟು 229 ಪಂದ್ಯಗಳನ್ನಾಡಿದ್ದಾರೆ. ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡಿಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲೂ ಸ್ಕಾಟ್ಲ್ಯಾಂಡ್ ಪರ ಕಣಕ್ಕಿಳಿದಿದ್ದರು.

ಮ್ಯಾಕ್ಲಿಯೋಡ್ ಅವರು 88 ಏಕದಿನ ಪಂದ್ಯಗಳನ್ನ ಆಡಿದ್ದು, 3026ರನ್ ಕಲೆ ಹಾಕಿದ್ದಾರೆ. ಇದರಲ್ಲಿ 10 ಶತಕ, 13 ಅರ್ಧಶತಕ ದಾಖಲಿಸಿದ್ದಾರೆ. ಜೊತೆಗೆ 11 ವಿಕೆಟ್ ಸಹ ಕಬಳಿಸಿದ್ದಾರೆ. 2014ರಲ್ಲಿ ನ್ಯೂಜಿಲ್ಯಾಂಡ್​​ನ ಕ್ರೈಸ್ಟ್ ಚರ್ಚ್​ನಲ್ಲಿ ಕೆನಡಾ ವಿರುದ್ಧದ ಪಂದ್ಯದಲ್ಲಿ ವೃತ್ತಿ ಜೀವನದ ಅತ್ಯಧಿಕ 175ರನ್ ಗಳಿಸಿದ್ದರು. ಆದರೆ ಅವರ ವೃತ್ತಿ ಜೀವನದ ಪ್ರಮುಖವಾದ ಆಟವೆಂದರೆ, 2018ರಲ್ಲಿ ಗ್ರಾಂಜ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಮೋಘ 140ರನ್ ಕಲೆಹಾಕುವ ಮೂಲಕ ತಂಡಕ್ಕೆ ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದರು.

ತಮ್ಮ ನಿವೃತ್ತಿ ನಿರ್ಧಾರ ಉದ್ದೇಶಿಸಿ ಮಾತನಾಡಿದ ಕ್ಯಾಲಮ್, ಕೆಲವು ದಿನಗಳ ಹಿಂದೆ ನಾನು ನಿವೃತ್ತಿ ಘೋಷಿಸಿದೆ. ಈಗ ಕುಳಿತುಕೊಂಡು ಹಿಂದಿನ ದಿನಗಳ ಬಗ್ಗೆ ಯೋಚಿಸಿದಾಗ 1999ರಲ್ಲಿ ನಡೆದ ಸ್ಕಾಟ್ಲೆಂಡ್, ಆಸ್ಟ್ರೇಲಿಯಾ ನಡುವೆ ನಡೆದ ವಿಶ್ವಕಪ್ ಪಂದ್ಯವು ಮೊದಲ ಸ್ಥಾನದಲ್ಲಿ ಇದೆ, ನನಗೆ ಕ್ರಿಕೆಟ್ ಆಡಲು ಸ್ಫೂರ್ತಿ ನೀಡಿದ ಪಂದ್ಯವದು ಎಂದು ಹೇಳಿದರು.

ಮ್ಯಾಕ್ಲಿಯೋಡ್ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಕಳೆದ ತಿಂಗಳು ಜಿಂಬಾಬ್ವೆ ವಿರುದ್ಧ ಆಡಿದ್ದರು, ಸೂಪರ್ 12 ಹಂತದ ಪಂದ್ಯದಲ್ಲಿ 25ರನ್ ಗಳಸಿ ನಿರ್ಗಮಿಸಿದ್ದರು.

ಇದನ್ನೂ ಓದಿ: India vs Zimbabwe: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟೀಂ ಇಂಡಿಯಾ ಗೆಲುವಿನ ಇತಿಹಾಸ ಹೀಗಿದೆ...

Last Updated : Nov 5, 2022, 5:20 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.