ETV Bharat / sports

ಬಿಸಿಸಿಐನಲ್ಲಿ ಶಾ, ಗಂಗೂಲಿ ಮುಂದುವರಿಕೆ: ಅರ್ಜಿ ವಿಚಾರಣೆ 2 ವಾರ ಮುಂದೂಡಿದ ಸುಪ್ರೀಂ - ಬಿಸಿಸಿಐ ಅಧ್ಯಕ್ಷ ಅಧಿಕಾರವದಿ

ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರಾವಧಿ 2020ರ ಮಧ್ಯದಲ್ಲೇ ಮುಗಿದಿದೆ. ಆದರೆ ಇವರಿಬ್ಬರೇ 2025ರ ತನಕ ವಿಸ್ತರಣೆ ಮಾಡಬೇಕೆಂದು ಬಿಸಿಸಿಐ ಅರ್ಜಿ ಸಲ್ಲಿಸಿತ್ತು. ಆದರೆ, ಇದುವರೆಗೆ ಸುಪ್ರೀಂಕೋರ್ಟ್​ ಈ ವಿಚಾರವನ್ನು ವಿಚಾರಣೆ ನಡೆಸಲು ಸಾಧ್ಯವಾಗದ ಕಾರಣ ಇವರಿಬ್ಬರು ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಾ ಬರುತ್ತಿದ್ದಾರೆ.

ಸೌರವ್ ಗಂಗೂಲಿ, ಜಯ್ ಶಾ
ಸೌರವ್ ಗಂಗೂಲಿ, ಜಯ್ ಶಾ
author img

By

Published : Apr 15, 2021, 9:14 PM IST

ನವದೆಹಲಿ: ಬಿಸಿಸಿಐ ಅಧಿಕಾರವಧಿ ಸಂಬಂಧಿಸಿದ ಪ್ರಕರಣವನ್ನು ಭಾರತದ ಸುಪ್ರೀಂಕೋರ್ಟ್ ಗುರುವಾರ ಮುಂದೂಡಿದೆ. ಎರಡು ವಾರಗಳ ನಂತರ ಭಾರತ ಕ್ರಿಕೆಟ್ ಮಂಡಳಿಯ ಉನ್ನತ ಪದಾಧಿಕಾರಿಗಳಾದ ಸೌರವ್ ಗಂಗೂಲಿ ಮತ್ತು ಜಯ್ ಶಾ ಅವರನ್ನು ಹೆಚ್ಚಿನ ವಿಚಾರಣೆ ನಡೆಸಲಿದೆ.

ಬಿಸಿಸಿಐ ಸಂವಿಧಾನದ ನಿಯಮಗಳ ಪ್ರಕಾರ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ, ಖಜಾಂಚಿ, ಜಂಟಿ ಕಾರ್ಯದರ್ಶಿ ಒಮ್ಮೆ 6 ವರ್ಷಗಳ ಕಾಲ ಯಾವುದೇ ಕ್ರಿಕೆಟ್​ ಬೋರ್ಡ್​ಗಳಲ್ಲಿ ಕಾರ್ಯನಿರ್ವಹಿಸಿದರೆ, ಮತ್ತೆ 3 ವರ್ಷಗಳ ಕಾಲ ಬಿಸಿಸಿಐನಲ್ಲಿ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸುವುದಕ್ಕೆ ಅನುಮತಿಯಿಲ್ಲ.

ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರಾವಧಿ 2020ರ ಮಧ್ಯದಲ್ಲೇ ಮುಗಿದಿದೆ. ಆದರೆ, ಇವರಿಬ್ಬರೆ 2025ರ ತನಕ ವಿಸ್ತರಣೆ ಮಾಡಬೇಕೆಂದು ಬಿಸಿಸಿಐ ಅರ್ಜಿ ಸಲ್ಲಿಸಿತ್ತು. ಆದರೆ, ಇದುವರೆಗೆ ಸುಪ್ರೀಂಕೋರ್ಟ್​ ಈ ವಿಚಾರವನ್ನು ನಡೆಸಲು ಸಾಧ್ಯವಾಗದ ಕಾರಣ ಇವರಿಬ್ಬರು ಬಿಸಿಸಿಐನಲ್ಲಿ ತಮ್ಮ ಗೌರವಾನ್ವಿತ ಹುದ್ದೆಯಲ್ಲಿ ಮುಂದುವರೆದಿದ್ದರು.

2014ರಲ್ಲಿ ಗಂಗೂಲಿ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ಜಂಟಿ ಕಾರ್ಯುದರ್ಶಿ ಮತ್ತು ಮುಖ್ಯಸ್ಥನಾಗಿ 5 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಹಾಗಾಗಿ ಅವರಿಗೆ ಬಿಸಿಸಿಐನಲ್ಲಿ ಕೇವಲ 278 ದಿನಗಳು ಮಾತ್ರ ಅಧಿಕಾರ ನಿರ್ವಹಿಸಲು ಅನುಮತಿಯಿತ್ತು. ಮತ್ತು ಜಯ್ ಶಾ ಕೂಡ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ 2013ರಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಆದರೆ, ಬಿಸಿಸಿಐ ತನ್ನ ಹೊಸ ಸಂವಿಧಾನದಲ್ಲಿ ಈ ನಿಯಮವನ್ನು ಪರಿಷ್ಕರಿಸುವಂತೆ ನ್ಯಾಯಾಲಯವನ್ನು ಕೋರಿ 2020, ಏಪ್ರಿಲ್​ 21ರಂದು ಅರ್ಜಿ ಸಲ್ಲಿಸಿತ್ತು. ಆದರೆ ಈ ಅರ್ಜಿ ಮುಂದೂಡಿಕೊಂಡೇ ಬಂದಿತ್ತು. ಇದೀಗ ಮತ್ತೆ 2 ವಾರಗಳ ಕಾಲ ಮತ್ತೆ ವಿಚಾರಣೆ ಮುಂದೂಡಿಕೆಯಾಗಿದೆ.

ಇದನ್ನು ಓದಿ: ಕನ್ನಡಿಗನಿಗೆ ಒಲಿದ ಅದೃಷ್ಟ: ಶ್ರೇಯಸ್ ಅಯ್ಯರ್ ಬದಲಿಗೆ ಡೆಲ್ಲಿ ತಂಡ ಸೇರಿದ ಅನಿರುದ್ಧ ಜೋಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.