ETV Bharat / sports

ಐಪಿಎಲ್​ನಲ್ಲಿ 30 ಶತಕೋಟಿ ಡಾಲರ್ ಹೂಡಿಕೆಗೆ ಮುಂದಾದ ಸೌದಿ ಅರೇಬಿಯಾ ದೊರೆ!

Indian Premier League: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಐಪಿಎಲ್​ನ ಮೇಲಿನ ಹೂಡಿಕೆ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು ಎನ್ನಲಾಗಿದೆ.

Indian Premier League
Indian Premier League
author img

By ETV Bharat Karnataka Team

Published : Nov 3, 2023, 7:03 PM IST

ನವದೆಹಲಿ: ಟಿ20 ಮಾದರಿಯಲ್ಲಿ ಪ್ರತೀ ದೇಶದಲ್ಲಿ ಲೀಗ್​ಗಳು ಹೆಚ್ಚಿನ ಮಹತ್ವವನ್ನು ಪಡೆಯುತ್ತಿದೆ. ಅದರಲ್ಲೂ ಇಂಡಿಯನ್​ ಪ್ರೀಮಿಯರ್​ ಲೀಗ್ (ಐಪಿಎಲ್​)​ಗೆ ಅತಿ ಹೆಚ್ಚಿನ ಬೇಡಿಕೆ ಇದೆ. ಎಲ್ಲ ದೇಶಗಳು ಲೀಗ್​ ಕ್ರಿಕೆಟ್​ನ್ನು ನಡೆಸುತ್ತಿದ್ದರೂ ಐಪಿಎಲ್​ಗೆ ಇರುವ ಬೇಡಿಕೆ ಹಾಗೂ ಖ್ಯಾತಿ ಕಡಿಮೆ ಆಗಿಲ್ಲ. ಇದಕ್ಕೆ ಇನ್ನೊಂದು ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಸೌದಿ ಅರೇಬಿಯಾ 30 ಶತಕೋಟಿ ಡಾಲರ್ ಪಾಲನ್ನು ಖರೀದಿಸಲು ಆಸಕ್ತಿಯನ್ನು ವ್ಯಕ್ತಪಡಿಸಿದೆ. ಈ ಬಗ್ಗೆ ಮಾಧ್ಯಮ ಒಂದು ವರದಿ ಮಾಡಿದೆ. ಇದು ನಿಜ ಆದಲ್ಲಿ ಬಿಸಿಸಿಐನ ಶ್ರೀಮಂತಿಕೆ ಇನ್ನಷ್ಟು ಹೆಚ್ಚಲಿದೆ.

  • 🚨 Saudi Arabia is planning to invest $5 billion in IPL which is valued at $30 billion and take the league to global. pic.twitter.com/L48aUvkSdh

    — Indian Tech & Infra (@IndianTechGuide) November 3, 2023 " class="align-text-top noRightClick twitterSection" data=" ">

ಫುಟ್‌ಬಾಲ್ ಮತ್ತು ಗಾಲ್ಫ್ ರೀತಿಯ ಕ್ರೀಡೆಗಳಿಗೆ ಹೆಚ್ಚು ಮಹತ್ವ ನೀಡುವ ಅರಬ್​ ದೇಶ ಈಗ ಕ್ರಿಕೆಟ್​ನತ್ತ ಮುಖ ಮಾಡಿದೆ. ಐಪಿಎಲ್​ನ ಖ್ಯಾತಿ ಮತ್ತು ವಿಶ್ವದಾದ್ಯಂತ ಅದಕ್ಕಿರುವ ಅಭಿಮಾನಿಗಳನ್ನು ಪರಿಗಣಿಸಿ ಬಹುಕೋಟಿ ಡಾಲರ್ ಪಾಲನ್ನು ಖರೀದಿಸಲು ಸೌದಿ ಅರೇಬಿಯಾ ಆಸಕ್ತಿ ವ್ಯಕ್ತಪಡಿಸಿದೆ. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಸಲಹೆಗಾರರು ಐಪಿಎಲ್ ಅನ್ನು 30 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಬದಲಾಯಿಸುವ ಬಗ್ಗೆ ಭಾರತೀಯ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಗಾಗಿ ಸೌದಿ ಕ್ರೌನ್ ಪ್ರಿನ್ಸ್ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಮಾತುಕತೆ ನಡೆಸಲಾಗಿದೆ. ಸೌದಿ ಅರೇಬಿಯಾ ಲೀಗ್‌ಗೆ 5 ಶತಕೋಟಿಯಷ್ಟು ಹೂಡಿಕೆ ಮಾಡಲು ಪ್ರಸ್ತಾಪಿಸಿದೆ ಮತ್ತು ಇತರ ದೇಶಗಳಿಗೆ ವಿಸ್ತರಣೆಗೆ ಸಹಾಯ ಮಾಡುತ್ತದೆ ಎನ್ನಲಾಗಿದೆ. ಐಪಿಎಲ್ ಮೌಲ್ಯವು ರೂ 87,000 ಕೋಟಿಯಿಂದ ರೂ 92,500 ಕೋಟಿಗೆ ಏರಿದೆ. ಇದು ಆರಂಭದಿಂದ ಸುಮಾರು ಶೇಕಡ 6.3 ರಷ್ಟು ಹೆಚ್ಚಳ ಕಂಡಿದೆ.

140 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರದಲ್ಲಿ ಕ್ರಿಕೆಟ್​ ಪ್ರೀತಿ ಹೆಚ್ಚಿದೆ, ಹೀಗಾಗಿ ಭಾರತದಲ್ಲಿ ಕ್ರಿಕೆಟ್​ನ್ನು ಧರ್ಮ ಎಂದೇ ಪರಿಗಣಿಸಲಾಗಿದೆ. ಟೀಮ್​ ಇಂಡಿಯಾದ ಆಟಗಾರರಿಗೆ ಎಲ್ಲ ದೇಶದಲ್ಲೂ ಅಭಿಮಾನಿಗಳಿದ್ದಾರೆ. ಅಲ್ಲದೇ ಐಪಿಎಲ್​ನ ಮೆರುಗು ಕ್ರಿಕೆಟ್​ ಕ್ರೇಜ್​ ಅನ್ನು ದೇಶದಲ್ಲಿ ಇನ್ನಷ್ಟು ಹೆಚ್ಚು ಮಾಡಿದೆ. ಐಪಿಎಲ್​ನಲ್ಲಿ ವಿದೇಶಿ ಆಟಗಾರ ಉತ್ತಮ ಪ್ರದರ್ಶನ ನೀಡಿದರೆ, ಆತನಿಗೆ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುತ್ತದೆ, ಹೀಗಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯ ಮಾನದಂಡ ಐಪಿಎಲ್​ ಪ್ರದರ್ಶನ ಆಗಿದೆ.

ಲೀಗ್​ ಕ್ರಿಕೆಟ್​ ಆಟದ ಹೊರತಾಗಿ ವ್ಯಾಪಾರ ಮತ್ತು ಮನರಂಜನೆಯ ಕೈಗನ್ನಡಿಯಾಗಿದೆ. ಐಪಿಎಲ್​ ಈ ಎರಡು ವಿಭಾಗದಲ್ಲೂ ತನ್ನ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿದೆ. ಲೀಗ್ ಟೆಲಿವಿಷನ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸುದರಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಯನ್ನು ಕಾಣುತ್ತಿದೆ.

ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಇಂಡಿಯಾದ ಪ್ರಕಾರ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾದ ಐಪಿಎಲ್​ 427.1 ಶತಕೋಟಿ ನಿಮಿಷಗಳ ಪ್ರಭಾವಶಾಲಿ ವೀಕ್ಷಣೆಯನ್ನು ಪಡೆದುಕೊಂಡಿದೆ. ಕಳೆದ ಬಾರಿ ಐಪಿಎಲ್​ನಲ್ಲಿ 3.4 ಕೋಟಿ ಮಂದಿ ವೀಕ್ಷಣೆ ಮಾಡಿದ ದಾಖಲೆ ಜಿಯೋ ಸಿನಿಮಾ ಬರೆದಿತ್ತು. ಒಟಿಟಿ ವೇದಿಕೆಯೊಂದರ ನೇರಪ್ರಸಾರದ ಅತಿ ಹೆಚ್ಚಿನ ಜಾಗತಿಕ ದಾಖಲೆ ಇದಾಗಿತ್ತು.

ಇದನ್ನೂ ಓದಿ: ವಿಶ್ವಕಪ್ 2023: ಕಿವೀಸ್​ ಬೌಲರ್​​ ಮ್ಯಾಟ್ ಹೆನ್ರಿ ಹೊರಕ್ಕೆ: ಕೈಲ್ ಜೇಮಿಸನ್​ಗೆ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.