ದುಬೈ: ಸಂಜು ಸಾಮ್ಸನ್(82) ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 164 ರನ್ಗಳಿಸಿದ್ದು, ನಿರ್ಣಾಯಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ಗೆ 165 ರನ್ಗಳ ಕಠಿಣ ಗುರಿ ನೀಡಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ರಾಯಲ್ಸ್ 2ನೇ ಓವರ್ನಲ್ಲೇ ಆಘಾತ ಅನುಭಿವಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಎವಿನ್ ಲೂಯಿಸ್ ಕೇವಲ 6 ರನ್ಗಳಿಸಿ ಭುವನೇಶ್ವರ್ಗೆ ವಿಕೆಟ್ ಒಪ್ಪಿಸಿದರು.
ಬಹುಬೇಗನೆ ತಮ್ಮ ಜೊತೆಗಾರನನ್ನು ಕಳೆದುಕೊಂಡರೂ ಧೃತಿಗೆಡದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಉತ್ತಮವಾಗಿ ಬ್ಯಾಟ್ ಬೀಸಿದರು. 23 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 36 ರನ್ಗಳಿಸಿದರು. ಸಾಮ್ಸನ್ ಜೊತೆ ಸೇರಿ 56 ರನ್ಗಳ ಜೊತೆಯಾಟ ನೀಡಿ ಮುನ್ನುಗ್ಗುತ್ತಿದ್ದ ಈ ಜೋಡಿಯನ್ನು ಸಂದೀಪ್ ಶರ್ಮಾ ಜೈಸ್ವಾಲ್ ವಿಕೆಟ್ ಪಡೆಯುವ ಮೂಲಕ ಬೇರ್ಪಡಿಸಿದರು.
-
Innings Break!
— IndianPremierLeague (@IPL) September 27, 2021 " class="align-text-top noRightClick twitterSection" data="
A superb knock of 82 from the #RR Captain propels them to a total of 164/5 on the board.#SRH chase coming up shortly.
Scorecard - https://t.co/3wrjO6J87h #SRHvRR #VIVOIPL pic.twitter.com/ajSu25YkEq
">Innings Break!
— IndianPremierLeague (@IPL) September 27, 2021
A superb knock of 82 from the #RR Captain propels them to a total of 164/5 on the board.#SRH chase coming up shortly.
Scorecard - https://t.co/3wrjO6J87h #SRHvRR #VIVOIPL pic.twitter.com/ajSu25YkEqInnings Break!
— IndianPremierLeague (@IPL) September 27, 2021
A superb knock of 82 from the #RR Captain propels them to a total of 164/5 on the board.#SRH chase coming up shortly.
Scorecard - https://t.co/3wrjO6J87h #SRHvRR #VIVOIPL pic.twitter.com/ajSu25YkEq
ಜೈಸ್ವಾಲ್ ನಂತರ ಬಂದ ಲಿವಿಂಗ್ಸ್ಟೋನ್ ಕೇವಲ 4 ರನ್ಗಳಿಸಿ ಔಟಾದರು. 10.1 ಓವರ್ಗಳಲ್ಲಿ 77 ರನ್ಗಳಿಸಿ ಅಲ್ಪಮೊತ್ತದ ಭೀತಿ ಎದುರಿಸಿದ್ದ ರಾಯಲ್ಸ್ಗೆ ನಾಯಕ ಸಾಮ್ಸನ್ ಮತ್ತು ಲಾಮ್ರೋರ್ 4ನೇ ವಿಕೆಟ್ ಜೊತೆಯಾಟದಲ್ಲಿ 84 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು.
ಸಂಜು ಸಾಮ್ಸನ್, ಸಿದ್ಧಾರ್ಥ್ ಕೌಲ್ಗೆ ವಿಕೆಟ್ ಒಪ್ಪಿಸುವ ಮುನ್ನ 57 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 82 ರನ್ಗಳಿಸಿದರು. ಲಾಮ್ರೋರ್ 28 ಎಸೆತಗಳಲ್ಲಿ 29 ರನ್ಗಳಿಸಿ ಅಜೇಯರಾಗುಳಿದರು.
ಹೈದರಾಬಾದ್ ಪರ ಸಿದ್ಧಾರ್ಥ್ ಕೌಲ್ 36ಕ್ಕೆ2, ರಶೀದ್ ಖಾನ್ 31ಕ್ಕೆ1, ಭುವನೇಶ್ವರ್ ಕುಮಾರ್ 28ಕ್ಕೆ1 ಮತ್ತು ಸಂದೀಪ್ ಶರ್ಮಾ 30ಕ್ಕೆ 1 ವಿಕೆಟ್ ಪಡೆದರು.
ಇದನ್ನು ಓದಿ:ಕಣ್ಣೀರಿಡುತ್ತಿದ್ದ ಇಶಾನ್ರನ್ನು ಮಗುವಿನಂತೆ ಸಂತೈಸಿದ ಕೊಹ್ಲಿ.. ವಿಡಿಯೋ