ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮರು ತನಿಖೆ ನಡೆಸಲು ತೀರ್ಮಾನಿಸಿರುವ ಸ್ಯಾಂಡ್ ಪೇಪರ್ ಗೇಟ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಮಾಜಿ ನಾಯಕ, ಮುಗಿದು ಹೋದ ಅಧ್ಯಾಯದ ಬಗ್ಗೆ ಮತ್ತೆ ಕೆದಕುವುದು ಬೇಡ, ಅದನ್ನು ಬಿಟ್ಟು ಮುಂದೆ ಹೋಗೋಣ ಎಂದು ಹೇಳಿದ್ದಾರೆ.
ಶನಿವಾರ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಕ್ಯಾಮರೂನ್ ಬ್ಯಾನ್ಕ್ರಾಫ್ಟ್, ಬಾಲ್ ಟ್ಯಾಂಪರಿಂಗ್ ಮಾಡುವ ಬಗ್ಗೆ ಆಸ್ಟ್ರೇಲಿಯಾ ಬೌಲರ್ಗಳಿಗೆ ಮೊದಲೇ ಮಾಹಿತಿಯಿತ್ತು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕ್ರಿಕೆಟ್ ಆಸ್ಟ್ರೇಲಿಯಾ, ಪ್ರಕರಣದ ಮರು ತನಿಖೆ ನಡೆಸಲು ತೀರ್ಮಾನಿಸಿತ್ತು. ಜೊತೆಗೆ ಇದರ ಬಗ್ಗೆ ಯಾರಿಗಾದರೂ ಮಾಹಿತಿಯಿದ್ದರೆ ಮುಂದೆ ಬಂದು ತಿಳಿಸಬೇಕೆಂದು ಹೇಳಿತ್ತು.
-
So the bowlers potentially knew about the ball in Cape Town !!! Of course they did but surely that episode has been put to bed a long time ago ... Let’s move on ... #OnOn
— Michael Vaughan (@MichaelVaughan) May 17, 2021 " class="align-text-top noRightClick twitterSection" data="
">So the bowlers potentially knew about the ball in Cape Town !!! Of course they did but surely that episode has been put to bed a long time ago ... Let’s move on ... #OnOn
— Michael Vaughan (@MichaelVaughan) May 17, 2021So the bowlers potentially knew about the ball in Cape Town !!! Of course they did but surely that episode has been put to bed a long time ago ... Let’s move on ... #OnOn
— Michael Vaughan (@MichaelVaughan) May 17, 2021
ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಹಾಗಾದರೆ ಬೌಲರ್ಗಳು ಕೇಪ್ಟೌನ್ನಲ್ಲಿ ಬಾಲ್ ಟ್ಯಾಂಪರಿಂಗ್ ಬಗ್ಗೆ ಸಮರ್ಥವಾಗಿ ತಿಳಿದಿದ್ದರು. ಖಂಡಿತ ಹೌದು, ಆದರೆ ನಿಜವಾಗಿಯೂ ಆ ಪ್ರಕರಣ ಬಹಳ ದಿನಗಳ ಹಿಂದೆಯೇ ಮುಗಿದು ಹೋಗಿದೆ, ನಾವು ಮುಂದುವರಿಯೋಣ ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಈಗಾಗಲೆ ಕೌಂಟಿ ಆಡುತ್ತಿರುವ ಬೆನ್ಕ್ರಾಫ್ಟ್ ಬಳಿಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕಳುಹಿಸಿದೆ. ಹಾಗಾಗಿ 2018ರಲ್ಲಿ ನಡೆದಿದ್ದ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಇನ್ನು ಎಷ್ಟು ಮಂದಿ ಭಾಗಿಯಾಗಿದ್ದರು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಇದನ್ನು ಓದಿ:ಸ್ಯಾಂಡ್ ಪೇಪರ್ ಪ್ರಕರಣ: ಬ್ಯಾನ್ಕ್ರಾಫ್ಟ್ ಹೇಳಿಕೆ ಬೆನ್ನಲ್ಲೇ ಮರುತನಿಖೆಗೆ ಆದೇಶಿಸಿದ ಕ್ರಿಕೆಟ್ ಆಸ್ಟ್ರೇಲಿಯಾ