ETV Bharat / sports

ಮುಂಬೈ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಸಂದೀಪ್ ಪಾಟೀಲ್​​ಗೆ ಸೋಲು - ಎಂಸಿಎ ಚುನಾವಣೆ

ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಕ್ರಿಕೆಟರ್​ ಸಂದೀಪ್ ಪಾಟೀಲ್ ಸೋತಿದ್ದಾರೆ.

sandeep-patil-loses-mca-election
ಮುಂಬೈ ಕ್ರಿಕೆಟ್ ಸಂಸ್ಥೆ ಚುನಾವಣೆ: ಸಂದೀಪ್ ಪಾಟೀಲ್​​ಗೆ ಸೋಲು
author img

By

Published : Oct 20, 2022, 11:02 PM IST

ಮುಂಬೈ (ಮಹಾರಾಷ್ಟ್ರ): 1983ರ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಆಟಗಾರ ಸಂದೀಪ್ ಪಾಟೀಲ್​ ಗುರುವಾರ ನಡೆದ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಪ್ರತಿಸ್ಪರ್ಧಿ ಅಭ್ಯರ್ಥಿ ಅಮೋಲ್ ಕಾಳೆ ವಿರುದ್ಧ 25 ಮತಗಳಿಂದ ಅವರು ಸೋತಿದ್ದಾರೆ.

ಕಾಳೆ ಎಂಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹೊಸದಾಗಿ ಆಯ್ಕೆಯಾದ ಬಿಸಿಸಿಐ ಖಜಾಂಚಿ ಮತ್ತು ಬಿಜೆಪಿ ನಾಯಕ ಆಶಿಶ್ ಶೆಲಾರ್ ಅವರು ಕಾಳೆ ಅವರಿಗೆ ಬೆಂಬಲ ನೀಡಿದ್ದರು. ಇದರಿಂದ 370 ಮತಗಳಿರುವ ಎಂಸಿಎ ಚುನಾವಣೆಯಲ್ಲಿ ಕಾಳೆ 183 ಮತಗಳನ್ನು ಪಡೆದರೆ, ಸಂದೀಪ್ ಪಾಟೀಲ್ 158 ಮತಗಳನ್ನು ಗಳಿಸಿದರು.

ಏತನ್ಮಧ್ಯೆ, ಮಾಜಿ ವ್ಯವಸ್ಥಾಪಕ ಸಮಿತಿಯ ಸದಸ್ಯ ಮತ್ತು ಪಾಟೀಲ್​ ಬಣದ ಅಜಿಂಕ್ಯ ನಾಯಕ್ ಎಂಸಿಎ ಕಾರ್ಯದರ್ಶಿ ಆಗಿ ಆಯ್ಕೆಯಾಗಿದ್ದಾರೆ. ನಾಯಕ್ ಅವರನ್ನು ಶರದ್ ಪವಾರ್ ಬಣ ಬೆಂಬಲಿಸಿದ್ದರಿಂದ 286 ಮತಗಳನ್ನು ಪಡೆದು ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಏಷ್ಯಾ ಕಪ್​: ಪಾಕ್​ಗೆ ಟೀಂ ಇಂಡಿಯಾ ಪ್ರಯಾಣದ ಬಗ್ಗೆ ಸ್ಪಷ್ಟನೆ ನೀಡಿದ ರೋಜರ್​ ಬಿನ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.