ಕಠ್ಮಂಡು: ನೇಪಾಳ ಕ್ರಿಕೆಟ್ ತಂಡದ ಕ್ಯಾಪ್ಟನ್, ಐಪಿಎಲ್ ಆಟಗಾರ ಸಂದೀಪ್ ಲಮಿಚಾನೆ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಕೇಳಿ ಬಂದಿದ್ದು ಇದೇ ಮೊದಲ ಬಾರಿಗೆ ಅವರು ತುಟಿ ಬಿಚ್ಚಿದ್ದಾರೆ. "ನಾನು ನಿರಪರಾಧಿ. ನನ್ನ ಮೇಲೆ ಕೇಳಿ ಬಂದಿರುವ ಆಧಾರರಹಿತ ಆರೋಪಗಳನ್ನು ಎದುರಿಸಲು ನಾನು ಸಿದ್ಧನಿದ್ದೇನೆ" ಎಂದು ತಿಳಿಸಿದ್ದಾರೆ.
ಅಪ್ರಾಪ್ತೆಯೋರ್ವರು (17 ವರ್ಷ) ಕ್ರಿಕೆಟಿಗನ ವಿರುದ್ಧ ದೂರು ದಾಖಲು ಮಾಡಿದ್ದಾಗಿ ನೇಪಾಳ ಪೊಲೀಸರು ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಕ್ರಿಕೆಟಿಗನಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಸಂದೀಪ್, "ಕೆರೆಬಿಯನ್ ಪ್ರೀಮಿಯರ್ ಲೀಗ್ನಿಂದ ರಜೆ ಪಡೆದುಕೊಳ್ಳುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ದೇಶಕ್ಕೆ ವಾಪಸ್ ಬರಲಿದ್ದೇನೆ. ನೇಪಾಳ ಕಾನೂನಿನ ಮೇಲೆ ನನಗೆ ಗೌರವವಿದೆ. ನನ್ನ ಮೇಲೆ ಕೇಳಿ ಬಂದಿರುವ ಎಲ್ಲ ಆಧಾರರಹಿತ ಆರೋಪಗಳನ್ನು ಎದುರಿಸಲು ಸಿದ್ಧನಾಗಿದ್ದೇನೆ. ಕಾನೂನು ಸಮನಾಗಿ ಕೆಲಸ ಮಾಡಲಿದೆ ಎಂಬ ನಂಬಿಕೆ ಇದೆ" ಎಂದರು.
- — Sandeep Lamichhane (@Sandeep25) September 9, 2022 " class="align-text-top noRightClick twitterSection" data="
— Sandeep Lamichhane (@Sandeep25) September 9, 2022
">— Sandeep Lamichhane (@Sandeep25) September 9, 2022
ಇದನ್ನೂ ಓದಿ: ಐಪಿಎಲ್ ಮಾಜಿ ಆಟಗಾರ, ನೇಪಾಳ ಕ್ರಿಕೆಟ್ ಕ್ಯಾಪ್ಟನ್ ವಿರುದ್ಧ ಅತ್ಯಾಚಾರ ಆರೋಪ
ಈ ಹಿಂದೆ ಇವರು 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಲೆಗ್ ಸ್ಪಿನ್ನರ್ ಸಂದೀಪ್ 2016ರ ಅಂಡರ್ 19 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ, 2018ರ ಐಪಿಎಲ್ನಲ್ಲಿ ಅವರಿಗೆ ಮಣೆ ಹಾಕಲಾಗಿತ್ತು. ಮೂಲ ಬೆಲೆ 20 ಲಕ್ಷ ರೂ. ನೀಡಿ ಖರೀದಿ ಮಾಡಲಾಗಿತ್ತು.
ಸಂದೀಪ್, ನೇಪಾಳ ತಂಡದ ಪರ 30 ಏಕದಿನ ಪಂದ್ಯ ಆಡಿದ್ದು 69 ವಿಕೆಟ್ ಪಡೆದುಕೊಂಡಿದ್ದಾರೆ. 44 ಟಿ20 ಕ್ರಿಕೆಟ್ ಪಂದ್ಯಗಳಿಂದ 85 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್ನಲ್ಲೂ 13 ವಿಕೆಟ್ ಪಡೆದುಕೊಂಡಿದ್ದಾರೆ. ವಿದೇಶಿ ಲೀಗ್ಗಳಲ್ಲಿ 136 ಟಿ20 ಪಂದ್ಯಗಳ ಮೂಲಕ 193 ವಿಕೆಟ್ ಸಾಧನೆ ತೋರಿದ್ದಾರೆ. ಮುಖ್ಯವಾಗಿ ಬಿಗ್ಬ್ಯಾಷ್, ಕೆರೆಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಪಾಕಿಸ್ತಾನ ಪ್ರೀಮಿಯರ್ ಲೀಗ್ನಲ್ಲಿ ಸಂದೀಪ್ ಮಿಂಚಿದ್ದಾರೆ.