ETV Bharat / sports

ಕ್ರಿಕೆಟ್​ ಪ್ರೀತಿಯಲ್ಲಿ ಬೀಳಲು ಅರ್ಜುನ್​ಗೆ ಸ್ವಾತಂತ್ರ್ಯ ಬೇಕು: ಪುತ್ರನ ಬಗ್ಗೆ ಸಚಿನ್​ ತೆಂಡೂಲ್ಕರ್​ ಮಾತು - ಅರ್ಜುನ್​ ಕ್ರಿಕೆಟ್​ ಆಟ ನೋಡಲ್ಲ ಎಂದ ಸಚಿನ್​

ಅರ್ಜುನ್​ ಆಟವನ್ನು ನಾನು ನೋಡಲು ಹೋದರೂ ಅವನಿಗೆ ಇದು ತಿಳಿದಿರುವುದಿಲ್ಲ. ಮಿಗಿಲಾಗಿ ಅರ್ಜುನ್​​ರ ಕ್ರಿಕೆಟ್​​ ತರಬೇತುದಾರ, ತಂಡಕ್ಕೂ ಈ ಮಾಹಿತಿ ಇರುವುದಿಲ್ಲ. ಎಲ್ಲೋ ಒಂದೆಡೆ ಕುಳಿತು ಆಟ ವೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

sachin-tendulkar talk about son arjun's cricket career
ಸಚಿನ್​ ತೆಂಡೂಲ್ಕರ್
author img

By

Published : Feb 18, 2022, 9:03 PM IST

ಮುಂಬೈ: ಭಾರತದ ಕ್ರಿಕೆಟ್​ ದೇವರು, ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ತಮ್ಮ ಮಗನ ಕ್ರಿಕೆಟ್​ ಆಟವನ್ನು ಯಾಕೆ ನೋಡುವುದಿಲ್ಲ ಎಂಬ ಬಗ್ಗೆ ಮಾತನಾಡಿದ್ದಾರೆ. 'ಅರ್ಜುನ್​ ತೆಂಡೂಲ್ಕರ್​ ತನ್ನ ಆಟವನ್ನು ಪ್ರೀತಿಸುವ ಸ್ವಾತಂತ್ರ್ಯ ಅವನಿಗಿದೆ. ಪಂದ್ಯ ನೋಡಲು ಹೋಗಿ ನಾನು ಅವನ ಮೇಲೆ ಒತ್ತಡ ಹೇರಲಾರೆ' ಎಂದು ಹೇಳಿದ್ದಾರೆ.

ಕುಟುಂಬಸ್ಥರು ಆಟವನ್ನು ಗಮನಿಸಿದಾಗ ಸಹಜವಾಗಿ ನಮ್ಮ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ನಾನು ಅರ್ಜುನ್​ರ ಆಟವನ್ನು ನೋಡಲು ಮೈದಾನಕ್ಕೆ ಹೋಗುವುದಿಲ್ಲ. ಅರ್ಜುನ್​ಗೆ ಕ್ರಿಕೆಟ್​ ಮೇಲೆ ಪ್ರೀತಿ ಮೂಡಬೇಕು. ಅವನು ಬಯಸಿದಂತೆ ಇರಲು ನಾನು ಇಷ್ಟ ಪಡುತ್ತೇನೆ ಎಂದು ಸಚಿನ್​ ತೆಂಡೂಲ್ಕರ್​ ಇನ್​ ಡೆಪ್ತ್​ ವಿತ್​ ಗ್ರಹಾಂ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಅರ್ಜುನ್​ ಆಟವನ್ನು ನಾನು ನೋಡಲು ಹೋದರೂ ಅವನಿಗೆ ಇದು ತಿಳಿದಿರುವುದಿಲ್ಲ. ಮಿಗಿಲಾಗಿ ಅರ್ಜುನ್​​ರ ಕ್ರಿಕೆಟ್​​ ತರಬೇತುದಾರ, ತಂಡಕ್ಕೂ ಈ ಮಾಹಿತಿ ಇರುವುದಿಲ್ಲ. ಎಲ್ಲೋ ಒಂದೆಡೆ ಕುಳಿತು ಆಟ ವೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

ಅರ್ಜುನ್​ ಮೊದಲು ಫುಟ್​ಬಾಲ್​ ಆಟಗಾರನಾಗಿದ್ದ, ಬಳಿಕ ಚೆಸ್​ ಕಲಿತ. ಈಗ ಕ್ರಿಕೆಟ್​ ಮೇಲೆ ಗಮನ ಕೇಂದ್ರೀಕರಿಸಿದ್ದಾನೆ. ಆತ ಏನನ್ನು ಇಷ್ಟಪಡುತ್ತಾನೋ ಅದನ್ನೇ ಮಾಡಲು ಸ್ವಾತಂತ್ರ್ಯವಿದೆ ಎಂದು ಸಚಿನ್​ ತೆಂಡುಲ್ಕರ್​ ಹೇಳಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಆಡುತ್ತಿದ್ದು, ಐಪಿಎಲ್​ನ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ 30 ಲಕ್ಷಕ್ಕೆ ಅರ್ಜುನ್​ರನ್ನು ಖರೀದಿ ಮಾಡಿದೆ.

ಓದಿ: ರಣಜಿ ಟ್ರೋಫಿ : ಪದಾರ್ಪಣೆ ಪಂದ್ಯದಲ್ಲೇ ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಬಿಹಾರದ ಸಕಿಬುಲ್​ ಗನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.