ಪಣಜಿ: ಕ್ರಿಕೆಟ್ ದೇವರೆಂದೇ ಖ್ಯಾತಿ ಗಳಿಸಿರುವ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಗೋವಾ ಪ್ರವಾಸದಲ್ಲಿದ್ದು, ಮೀನುಗಾರನೊಂದಿಗೆ ಕಾಲ ಕಳೆದು ಮೆಚ್ಚುಗೆ ಗಳಿಸಿದ್ದಾರೆ.
ಇಲ್ಲಿನ ಕಾರಂಜೆಲಮ್ ಬೀಚ್‌ನಲ್ಲಿ ಸಚಿನ್ ತೆಂಡೂಲ್ಕರ್, ಪೀಲೆ ಎಂಬ ಮೀನುಗಾರನೊಂದಿಗೆ ಸಾಂಪ್ರದಾಯಿಕ ಮೀನುಗಾರಿಕೆಯ ಬಗ್ಗೆ ಮಾತನಾಡುತ್ತಿರುವ ದೃಶ್ಯವನ್ನು ಅವರು ಇನ್ಸ್‌ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಮುದ್ರದಿಂದ ದೋಣಿಯನ್ನು ಹೊರತೆಗೆಯುವುದಕ್ಕೆ ಆತನಿಗೆ ಸಚಿನ್ ಸಹಾಯ ಮಾಡುವುದು ವಿಡಿಯೋದಲ್ಲಿದೆ.
ಸಚಿನ್ ಜೊತೆಗೆ ಮಾತನಾಡುತ್ತಾ ಮೀನುಗಾರ, ‘‘ನಾನು ಮತ್ತು ನನ್ನ ಅಣ್ಣ ಮೀನುಗಾರಿಕೆಯನ್ನು ಮುಂದುವರೆಸಿಕೊಂಡು ಬಂದಿದ್ದೇವೆ. ಈಗಿನ ಪೀಳಿಗೆಯೂ ಸಹ ಇದನ್ನು ನೆಚ್ಚಿಕೊಳ್ಳಬೇಕು ಎಂಬುದು ನನ್ನ ಆಸೆ" ಎಂದರು. ಇದೇ ಸಂದರ್ಭದಲ್ಲಿ ಸಾಂಪ್ರದಾಯಿಕ ಮೀನುಗಾರರನ್ನು ಬೆಂಬಲಿಸುವಂತೆಯೂ ವಿನಂತಿಸಿಕೊಂಡರು.
ಲಕ್ಷಾಂತರ ಜನರು ಗೋವಾಗೆ ಬಂದು ಸಮುದ್ರದ ತಿನಿಸುಗಳನ್ನು ಸೇವಿಸಿ ಆನಂದಿಸುತ್ತಾರೆ. ಅದರೆ ಮೀನು ಹಿಡಿಯುವುದು ಎಷ್ಟು ಕಷ್ಟ ಎಂಬುದು ಅನೇಕರಿಗೆ ತಿಳಿದಿಲ್ಲ ಎಂದು ಪೀಲೆ ಬೇಸರ ವ್ಯಕ್ತಪಡಿಸಿದರು.
ಇದ ಜತೆಗೆ ಆತ, ‘‘ನಾನು ಭೂಮಿಯ ಮೇಲಿನ ಅತ್ಯಂತ ಸಂತೋಷದ ಮನುಷ್ಯ. ಜಗತ್ತಿನ ನಂ1 ಕ್ರಿಕೆಟಿಗ ಮೀನುಗಾರನೊಬ್ಬನಿಗೆ ಸಹಾಯ ಮಾಡುತ್ತಿದ್ದಾರೆ. ನಿಮಗೆ, ನಿಮ್ಮ ಕುಟುಂಬಕ್ಕೆ ದೇವರು ಆಶೀರ್ವದಿಸಲಿ. ಇಂದು ನಾನು ತುಂಬಾ ಶೀಮಂತನಾದೆ" ಎಂದು ಖುಷಿಪಟ್ಟರು.
ಕೊನೆಗೆ, ತೆಂಡೂಲ್ಕರ್ ತಮ್ಮ ಮಗ ಅರ್ಜುನ್ ಜೊತೆಗೆ ಪೀಲೆ ಬೀಚ್ ರೆಸ್ಟೋರೆಂಟ್ನಲ್ಲಿ ಕೆಲ ಸಮಯ ಕಳೆದರು.
ಇದನ್ನೂ ಓದಿ: ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಸೆಮೀಸ್, ರಿಷಭ್ ಪಂತ್ OR ದಿನೇಶ್ ಕಾರ್ತಿಕ್?