ನವದೆಹಲಿ: ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಇನ್ನಿಂಗ್ಸ್ ಗೆಲುವು ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಹಾಗೂ ಗಾಯದ ಕಾರಣದಿಂದಾಗಿ ಹಲವು ದಿನಗಳ ಕಾಲ ತಂಡದಿಂದ ದೂರು ಉಳಿದಿದ್ದ ರವೀಂದ್ರ ಜಡೇಜಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಪಂದ್ಯ ಗೆಲುವಿಗೂ ಮುನ್ನವೇ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಾಡಿದ್ದ 'ಆರ್ಆರ್ಆರ್' ಟ್ವೀಟ್ ಸಖತ್ ವೈರಲ್ ಆಗುತ್ತಿದೆ.
-
𝐑𝐑𝐑 💥 🔥
— Sachin Tendulkar (@sachin_rt) February 10, 2023 " class="align-text-top noRightClick twitterSection" data="
The trio of Rohit, Ravindra & Ravichandran have helped India get ahead in this Test.@ImRo45 has led from the front with his 100 while @ashwinravi99 & @imjadeja have got us important breakthroughs.#INDvAUS pic.twitter.com/JTipYmxpKt
">𝐑𝐑𝐑 💥 🔥
— Sachin Tendulkar (@sachin_rt) February 10, 2023
The trio of Rohit, Ravindra & Ravichandran have helped India get ahead in this Test.@ImRo45 has led from the front with his 100 while @ashwinravi99 & @imjadeja have got us important breakthroughs.#INDvAUS pic.twitter.com/JTipYmxpKt𝐑𝐑𝐑 💥 🔥
— Sachin Tendulkar (@sachin_rt) February 10, 2023
The trio of Rohit, Ravindra & Ravichandran have helped India get ahead in this Test.@ImRo45 has led from the front with his 100 while @ashwinravi99 & @imjadeja have got us important breakthroughs.#INDvAUS pic.twitter.com/JTipYmxpKt
ಹೌದು, ಮಹಾರಾಷ್ಟ್ರದ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಸ್ಟೇಡಿಯಂನಲ್ಲಿ ಫೆಬ್ರವರಿ 9ರಿಂದ ಆರಂಭವಾಗಿದ್ದ ಮೊದಲ ಟೆಸ್ಟ್ ಶನಿವಾರ ಮೂರೇ ದಿನಗಳಲ್ಲಿ ಅಂತ್ಯ ಕಂಡಿದೆ. ರೋಹಿತ್ ಶರ್ಮಾ ಪಡೆ ಇನ್ನಿಂಗ್ಸ್ ಮತ್ತು 132 ರನ್ಗಳಿಂದ ಜಯ ದಾಖಲಿಸಿದೆ. ಕ್ರಿಕೆಟ್ ದೇವರು ಎಂದೇ ಖ್ಯಾತರಾದ ಸಚಿನ್ ಈ ಪಂದ್ಯದ ಫಲಿತಾಂಶಕ್ಕೂ ಒಂದು ಮುಂಚೆಯೇ ನಾಯಕ ರೋಹಿತ್ ಶರ್ಮಾ, ಸ್ಪೀನರ್ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕುರಿತಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿದ್ದರು. ಈ ಟ್ವೀಟ್ನಲ್ಲಿ ಮೂವರನ್ನೂ ಆರ್ಆರ್ಆರ್ ಎಂದು ಬಣ್ಣಿಸಿದ್ದಾರೆ.
ಭಾರತಕ್ಕೆ ಮೂವರ ನೆರವು: ಶುಕ್ರವಾರದ ಆಟವನ್ನು ಉಲ್ಲೇಖಿಸಿ ರೋಹಿತ್, ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಆರ್ಆರ್ಆರ್ ಎಂದು ಸಚಿನ್ ತೆಂಡಲ್ಕೂರ್ ಹೆಸರಿಸಿದ್ದು, ಈ ಮೂವರು ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಲು ಸಹಾಯ ಮಾಡಿದ್ದಾರೆ. ರೋಹಿತ್ ತನ್ನ 100 ರನ್‌ಗಳೊಂದಿಗೆ ಮುನ್ನಡೆಸಿದರೆ, ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಂಡಕ್ಕೆ ಪ್ರಮುಖ ಪ್ರಗತಿಯನ್ನು ನೀಡಿದ್ದಾರೆ ಎಂದು ಸಚಿನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಒಂದು ದಿನದಲ್ಲಿ 55 ಸಾವಿರ ಲೈಕ್ಸ್, 5 ಸಾವಿರಕ್ಕೂ ಅಧಿಕ ರೀಟ್ವೀಟ್ಗಳು ಆಗಿವೆ. ಇನ್ನು, ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ ಚಿತ್ರವಾಗಿದೆ.
ಇದನ್ನೂ ಓದಿ: RRR ಬಗ್ಗೆ ಸ್ಪೀಲ್‌ಬರ್ಗ್ ಗುಣಗಾನ: ಕುರ್ಚಿಯಿಂದ ಎದ್ದು ಕುಣಿಯುವಷ್ಟು ಸಂತಷಪಟ್ಟ ರಾಜಮೌಳಿ
ಟೀಂ ಇಂಡಿಯಾದ ಅದ್ಭುತ ಪ್ರದರ್ಶನ: ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು, ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ರೋಹಿತ್ ಪಡೆ ಬೌಲಿಂಗ್ ಮತ್ತು ಬ್ಯಾಟಿಂಗ್ ಸೇರಿ ಎಲ್ಲ ವಿಭಾಗದಲ್ಲೂ ಅದ್ಭುತ ಪ್ರದಶರ್ನವನ್ನು ತೋರಿದೆ. ಸ್ಪೀನರ್ಗಳ ದಾಳಿಗೆ ಆಸೀಸ್ ಆಟಗಾರರು ರನ್ಗಳನ್ನು ಗಳಿಸಲಾಗದೇ ನಲುಗಿ ಹೋಗಿದ್ದರು. ಹೀಗಾಗಿ ಕಾಂಗರೂ ಪಡೆ ಮೊದಲ ಇನ್ನಿಂಗ್ನಲ್ಲಿ 177 ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲೇ ಕೇವಲ 91 ರನ್ಗಳಿಗೆ ಸರ್ವ ಪತನಗೊಂಡು ಸೋಲುಪ್ಪಿಕೊಂಡರು.
ಆಸ್ಟ್ರೇಲಿಯಾದ ಎರಡು ಇನ್ನಿಂಗ್ಸ್ಗಳಲ್ಲಿ 20 ವಿಕೆಟ್ಗಳ ಪೈಕಿ 16 ವಿಕೆಟ್ಗಳನ್ನು ಸ್ಪೀನರ್ಗಳು ಕಬಳಿಸಿದರು. ಅದರಲ್ಲೂ, ಆರ್.ಅಶ್ವಿನ್ 5 ವಿಕೆಟ್ ಮತ್ತು ಜಡೇಜಾ 7 ವಿಕೆಟ್ ಪಡೆದು ಮಿಂಚಿಸಿದರು. ಮತ್ತೊಂದೆಡೆ, ನಾಯಕ ರೋಹಿತ್ ಶರ್ಮಾ ಶತಕದ ನೆರವಿನೊಂದಿಗೆ ಟೀಂ ಇಂಡಿಯಾದ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 400 ರನ್ಗಳನ್ನು ಕಲೆ ಹಾಕಿತ್ತು. ಇಷ್ಟೇ ಅಲ್ಲ, ಜಡೇಜಾ ಮತ್ತು ಅಕ್ಷರ್ ಪಟೇಲ್ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದರು.
ಇದನ್ನೂ ಓದಿ: ಸ್ಪಿನ್ ಬಲೆಗೆ ಬಿದ್ದ ಕಾಂಗರೂ ಪಡೆ: ಭಾರತಕ್ಕೆ ಇನಿಂಗ್ಸ್, 132 ರನ್ ಗೆಲುವು