ETV Bharat / sports

ತಮ್ಮ ಕ್ರಿಕೆಟ್​​ ಬದುಕಿನ ಎರಡು ದೊಡ್ಡ ವಿಷಾದಗಳನ್ನು ಬಹಿರಂಗಪಡಿಸಿದ ಸಚಿನ್ ತೆಂಡೂಲ್ಕರ್ - ಕ್ರಿಕೆಟ್​​ ಕರಿಯರ್​ನ ಎರಡು ದೊಡ್ಡ ವಿಷಾದಗಳನ್ನ ಬಹಿರಂಗಪಡಿಸಿದ ಸಚಿನ್ ತೆಂಡೂಲ್ಕರ್

ಭಾರತ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್​​ ಗೆದ್ದ ಮೇಲೆ ತಮ್ಮ ಕ್ರಿಕೆಟ್​ ಜೀವನಕ್ಕೆ ನಿವೃತ್ತಿ ಘೋಷಿಸಿದ ಸಚಿನ್​ ತೆಂಡುಲ್ಕರ್ ಇತ್ತೀಚೆಗೆ ತಮ್ಮ ಕ್ರಿಕೆಟ್​​ ಕರಿಯರ್​ನ ಎರಡು ದೊಡ್ಡ ಕ್ರಿಕೆಟಿಂಗ್ ವಿಷಾದಗಳನ್ನು ತಿಳಿಸಿದ್ದಾರೆ.

Sachin Tendulkar
ಸಚಿನ್ ತೆಂಡೂಲ್ಕರ್
author img

By

Published : May 30, 2021, 12:58 PM IST

ಹೈದರಾಬಾದ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್​ ಲೋಕದ ದೇವರೆಂದೇ ಕರೆಯಲಾಗುತ್ತದೆ. ವಿಶ್ವ ಕಂಡ ಅದ್ವಿತೀಯ ಕ್ರೀಡಾ ತಾರೆ ತಮ್ಮ 24 ವರ್ಷದ ಕ್ರಿಕೆಟ್​ ಜೀವನದಲ್ಲಿ ಮಾಡದ ಸಾಧನೆ ಇಲ್ಲ. ಹಲವು ದಾಖಲೆಗಳನ್ನು ಬರೆದಿರುವ ಸಚಿನ್​​ ಕ್ರಿಕೆಟ್​ ಇತಿಹಾಸದಲ್ಲೇ ಅಚ್ಚಳಿಯದ ಮುದ್ರೆ ಒತ್ತಿದ್ದಾರೆ.

ಜಗತ್ತಿನ ಸಾರ್ವಕಾಲಿಕ ಅಗ್ರ ಐದು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಸುಲಭವಾಗಿ ಪರಿಗಣಿಸಲ್ಪಡುವ ಸಚಿನ್​​, 600ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ (664) ಭಾರತವನ್ನು ಪ್ರತಿನಿಧಿಸಿದ ಆಟಗಾರ. ಏಕದಿನ ಮತ್ತು ಟೆಸ್ಟ್​​ನಲ್ಲಿ ಅತ್ಯಧಿಕ ರನ್​ಗಳಿಸಿದವರ ಸಾಲಿನಲ್ಲಿ ಮೊದಲ ಸಚಿನ್‌ಗೆ ಅಗ್ರಸ್ಥಾನವಿದೆ. ಏಕದಿನ ಪಂದ್ಯಗಳಲ್ಲಿ 18,463 ರನ್​ಗಳಿಸಿದರೆ, ಟೆಸ್ಟ್‌ನಲ್ಲಿ 15,921 ರನ್​ಗಳಿಸಿ ರನ್‌ ಶಿಖರವನ್ನೇ ಕಡೆದು ನಿಲ್ಲಿಸಿರುವ ಸಚಿನ್‌, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕದ ಶತಕವನ್ನೇ ಬಾರಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರನೂ ಹೌದು. ಭಾರತ ತಂಡ 2011 ರ ಏಕದಿನ ವಿಶ್ವಕಪ್ ಗೆದ್ದಾಗ ಈ ತಂಡದ ಸದಸ್ಯನಾಗಿದ್ದು, ಇದು ಜೀವನದ ಅವಿಸ್ಮರಣಿಯ ದಿನ ಎಂದು ಅವರು ಬಣ್ಣಿಸಿದ್ದರು.

ಭಾರತ ತಂಡ ಏಕದಿನ ವಿಶ್ವಕಪ್​​ ಗೆದ್ದ ಮೇಲೆ ತಮ್ಮ ಕ್ರಿಕೆಟ್​ ಜೀವನಕ್ಕೆ ವಿದಾಯ ಘೋಷಿಸಿದ ತೆಂಡುಲ್ಕರ್ ಇತ್ತೀಚೆಗೆ ತಮ್ಮ ಕ್ರಿಕೆಟ್​​ ಕರಿಯರ್​ನ ಎರಡು ವಿಷಾದಗಳನ್ನು ಹೇಳುತ್ತಾರೆ.

“ಮೊದಲನೆಯದು ನಾನು ಸುನಿಲ್ ಗವಾಸ್ಕರ್ ಅವರೊಂದಿಗೆ ಆಡಿಲ್ಲ. ನಾನು ಬೆಳೆದಾಗ ಗವಾಸ್ಕರ್ ನನ್ನ ಬ್ಯಾಟಿಂಗ್ ಹೀರೋ ಆಗಿದ್ದರು. ತಂಡದ ಭಾಗವಾಗಿ ಅವರೊಂದಿಗೆ ಆಡದಿರುವುದಕ್ಕೆ ಬೇಸರವಿದೆ. ನಾನು ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಒಂದೆರಡು ವರ್ಷಗಳ ಹಿಂದಷ್ಟೇ ಅವರು ನಿವೃತ್ತರಾಗಿದ್ದರು ”ಎಂದು ಸಚಿನ್‌ ಹೇಳಿದರು.

“ನನ್ನ ಬಾಲ್ಯದ ನಾಯಕ ಸರ್.ವಿವಿಯನ್ ರಿಚರ್ಡ್ಸ್ ವಿರುದ್ಧ ಆಡದಿರುವುದು ನನ್ನ ಇನ್ನೊಂದು ಬೇಸರದ ಸಂಗತಿ. ಕೌಂಟಿ ಕ್ರಿಕೆಟ್‌ನಲ್ಲಿ ಅವರ ವಿರುದ್ಧ ಆಡಲು ನಾನು ಅದೃಷ್ಟಶಾಲಿಯಾಗಿದ್ದೆ. ಆದರೆ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಅವರ ವಿರುದ್ಧ ಆಡಲು ಸಾಧ್ಯವಾಗಲಿಲ್ಲ" ಎಂದು ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.