ETV Bharat / sports

ಭಾರತ - ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಪ್ರೇಕ್ಷಕರಿಗೆ ಅವಕಾಶವಿಲ್ಲ: ಖಚಿತಪಡಿಸಿದ ಸಿಎಸ್​ಎ - ಕೋವಿಡ್​ 19

ಪ್ರಪಂಚಾದ್ಯಂತ ಕೋವಿಡ್​ 19 ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ 4ನೇ ಅಲೆ ಇರುವುದರಿಂದ ಬಿಸಿಸಿಐ ಮತ್ತು ಸಿಎಸ್​ಎ ಆಟಗಾರರ ಆರೋಗ್ಯ ಮತ್ತು ಪ್ರವಾಸಕ್ಕೆ ಯಾವುದೇ ತೊಂದರೆಯಾಗದಂತೆ ತಡೆಯಲು ಜಂಟಿಯಾಗಿ ಪ್ರೇಕ್ಷಕರಿಲ್ಲದೇ ಸರಣಿ ನಡೆಸಲು ತೀರ್ಮಾನಿಸಿವೆ.

SA vs Ind: Test, ODI series to be played behind closed doors
ಭಾರತ ದಕ್ಷಿಣ ಆಫ್ರಿಕಾ ಸರಣಿಗೆ ಪ್ರೇಕ್ಷಕರಿಗೆ ಅವಕಾಶವಿಲ್ಲ
author img

By

Published : Dec 20, 2021, 10:06 PM IST

ಜೋಹಾನ್ಸ್​ಬರ್ಗ್​: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದೇ 26ರಿಂದ ಆರಂಭವಾಗಲಿರುವ ಟೆಸ್ಟ್ ಮತ್ತು ಏಕದಿನ​ ಸರಣಿ ವೇಳೆ ಸ್ಟೇಡಿಯಂಗೆ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಖಚಿತಪಡಿಸಿದೆ.

ಪ್ರಪಂಚಾದ್ಯಂತ ಕೋವಿಡ್​ 19 ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ 4ನೇ ಅಲೆ ಇರುವುದರಿಂದ ಬಿಸಿಸಿಐ ಮತ್ತು ಸಿಎಸ್​ಎ ಆಟಗಾರರ ಆರೋಗ್ಯ ಮತ್ತು ಪ್ರವಾಸದಕ್ಕೆ ಯಾವುದೇ ತೊಂದರೆಯಾಗದಂತೆ ತಡೆಯಲು ಜಂಟಿಯಾಗಿ ಪ್ರೇಕ್ಷಕರಿಲ್ಲದೇ ಸರಣಿ ನಡೆಸಲು ತೀರ್ಮಾನಿಸಿವೆ.

ಕೋವಿಡ್ - ಅಪಾಯದ ದೃಷ್ಟಿಕೋನದಿಂದ ಪ್ರವಾಸದ ಸಂದರ್ಭದಲ್ಲಿ ಉಂಟಾಗುವ ಉಲ್ಲಂಘನೆಗಳನ್ನು ತಪ್ಪಿಸಲು ಮತ್ತು ಅಪಾಯ - ಮುಕ್ತ ಬಯೋ ಬಬಲ್ ಪರಿಸರವನ್ನು ನಿರ್ವಹಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು CSA ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಎಲ್ಲ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿಸುವುದೇನೆಂದರೆ, ಪ್ರವಾಸದ ಎಲ್ಲ ಪಂದ್ಯಗಳು ಸೂಪರ್ ಸ್ಪೋರ್ಟ್​ ಮತ್ತು ಎಸ್​ಎಬಿಸಿ ಪ್ಲಾಟ್​​ಫಾರ್ಮ್​ನಲ್ಲಿ ಪ್ರಸಾರವಾಗಲಿದೆ ಎಂದು ಸಿಎಸ್​ಎ ಹೇಳಿಕೆಯಲ್ಲಿ ತಿಳಿಸಿದೆ.

ಡಿಸೆಂಬರ್​ 26ರಿಂದ ಸೆಂಚುರಿಯನ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯ ನಡೆಯಲಿದೆ. ನಂತರ ಜೋಹನ್ಸ್​ಬರ್ಗ್​ ಮತ್ತು ಕೇಪ್​​ಟೌನ್​ನಲ್ಲಿ ನಡೆಯಲಿದೆ. ನಂತರ 3 ಏಕದಿನ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ನಂತರ ಹಾರ್ದಿಕ್ ಪಾಂಡ್ಯ ವಿಂಡೀಸ್​ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.