ETV Bharat / sports

ಕೋವಿಡ್​ನಿಂದ ಆಸೀಸ್‌, ಆಂಗ್ಲರು ಸರಣಿ ರದ್ದುಗಳಿಸಿದರು.. ಆದರೆ, ಭಾರತದಿಂದ ಯಶಸ್ವಿ ಪ್ರವಾಸ.. ಗ್ರೇಮ್‌ ಸ್ಮಿತ್ ಧನ್ಯವಾದ - ಭಾರತ ತಂಡದಿಂದ ದಕ್ಷಿಣ ಆಫ್ರಿಕಾ ಪ್ರವಾಸ

ಕ್ರಿಕೆಟ್ ದಕ್ಷಿಣ ಆಫ್ರಿಕಾ ಕಳೆದ ಎರಡು ವರ್ಷಗಳಿಂದ ಹಣಕಾಸಿನ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಮತ್ತಷ್ಟು ಹದಗೆಟ್ಟಿದೆ. ಅಲ್ಲದೆ ಪಾಸಿಟಿವ್ ಕೇಸ್​ಗಳು ಹೆಚ್ಚಾಗಿದ್ದರಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಗೊಳಿಸಿದ್ದವು..

Graeme Smith
ಗ್ರೇಮ್ ಸ್ಮಿತ್​
author img

By

Published : Jan 24, 2022, 7:45 PM IST

ಕೇಪ್‌ಟೌನ್ : ಕೋವಿಡ್​-19 ಭೀತಿಯಲ್ಲೂ ಪ್ರವಾಸ ಕೈಗೊಂಡು ಯಶಸ್ವಿಯಾಗಿ ಸಂಪೂರ್ಣಗೊಳಿಸಿದ್ದಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಟೀಂ​ ಇಂಡಿಯಾ ಆಟಗಾರರಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಕಾರ್ಯಾಚರಣೆ ನಿರ್ದೇಶಕ ಗ್ರೇಮ್​ ಸ್ಮಿತ್​ ಧನ್ಯವಾದ ಅರ್ಪಿಸಿದ್ದಾರೆ.

ಭಾರತ ತಂಡ ಈ ಪ್ರವಾಸವನ್ನು ಮೊದಲ ಟೆಸ್ಟ್​ ಗೆಲ್ಲುವ ಮೂಲಕ ಉತ್ತಮವಾಗಿ ಆರಂಭಿಸಿತ್ತು. ಆದರೆ, ನಂತರ ಸತತ ಎರಡು ಟೆಸ್ಟ್​ ಸೋತು 1-2ರಲ್ಲಿ ಸರಣಿ ಕಳೆದುಕೊಂಡರೆ, ಏಕದಿನ ಸರಣಿಯನ್ನು 0-3ರಲ್ಲಿ ಹೀನಾಯವಾಗಿ ಸೋಲು ಕಂಡಿತು. ವಿವಾದ, ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ಈ ಪ್ರವಾಸದಿಂದ ಆರ್ಥಿಕವಾಗಿ ಚೇತರಿಸಿಕೊಳ್ಳಲು ನೆರವಾಗಿದೆ.

  • Big thank you @BCCI @JayShah @SGanguly99 and the Indian players and management for the faith you showed in SA cricket’s ability to pull off a safe and successful tour. Your commitment at an uncertain time has set the example that a lot can follow.

    — Graeme Smith (@GraemeSmith49) January 23, 2022 " class="align-text-top noRightClick twitterSection" data=" ">

"ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯ ಮೇಲೆ ನಂಬಿಕೆಯಿಟ್ಟು ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ್ದಕ್ಕೆ ಬಿಸಿಸಿಐ, ಜಯ್​ ಶಾ, ಗಂಗೂಲಿ ಮತ್ತು ಭಾರತದ ಎಲ್ಲಾ ಆಟಗಾರರಿಗೆ ದೊಡ್ಡ ಧನ್ಯವಾದಗಳು. ಈ ಅನಿಶ್ಚಿತ ಸಮಯದಲ್ಲಿ ನಿಮ್ಮ ಬದ್ಧತೆಯು ಬಹಳಷ್ಟು ಮಂದಿಗೆ ಒಳ್ಳೆಯ ಉದಾಹರಣೆಯಾಗಿದೆ" ಎಂದು ಸ್ಮಿತ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕ್ರಿಕೆಟ್ ದಕ್ಷಿಣ ಆಫ್ರಿಕಾ ಕಳೆದ ಎರಡು ವರ್ಷಗಳಿಂದ ಹಣಕಾಸಿನ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಮತ್ತಷ್ಟು ಹದಗೆಟ್ಟಿದೆ. ಅಲ್ಲದೆ ಪಾಸಿಟಿವ್ ಕೇಸ್​ಗಳು ಹೆಚ್ಚಾಗಿದ್ದರಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಗೊಳಿಸಿದ್ದವು.

ಇದನ್ನೂ ಓದಿ:ವಮಿಕಾ ಫೋಟೋ ವೈರಲ್​ : ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ, ಫೋಟೋ ಪ್ರಕಟಿಸಬೇಡಿ ಎಂದ ವಿರುಷ್ಕಾ ದಂಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.