ಪುಣೆ: ನವೆಂಬರ್ 4 ರಿಂದ ಪ್ರಾರಂಭವಾಗುವ ಸೈಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಭಾರತೀಯ ಕ್ರಿಕೆಟ್‌ನ ಹೊಸ ಬ್ಯಾಟಿಂಗ್ ಸೆನ್ಸೇಶನ್ ರುತುರಾಜ್ ಗಾಯಕ್ವಾಡ್ ಮಹಾರಾಷ್ಟ್ರ ತಂಡ ಮುನ್ನಡೆಸಲಿದ್ದಾರೆ.
ಎಲೈಟ್ ಗ್ರೂಪ್ ಎ ಪೂಲ್ನಲ್ಲಿ ಮಹಾರಾಷ್ಟ್ರ ತಂಡವಿದ್ದು, ಲೀಗ್ ಹಂತದ ಪಂದ್ಯಗಳು ಲಕ್ನೋದಲ್ಲಿ ಆಡಲಿದೆ. ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ವಿಜಯದ ಐಪಿಎಲ್ ಅಭಿಯಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಫೈನಲ್‌ನಲ್ಲಿ ಉಂಟಾದ ತೊಡೆಸಂದು ಗಾಯದಿಂದ ಕೆಕೆಆರ್ ಸ್ಟಾರ್ ರಾಹುಲ್ ತ್ರಿಪಾಠಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ನೌಶಾದ್ ಶೇಖ್ರನ್ನು ಉಪನಾಯಕರನ್ನಾಗಿ ನೇಮಿಸಿಕೊಳ್ಳಲಾಗಿದೆ.
ಮತ್ತೊಬ್ಬ ಆಕ್ರಮಣಕಾರಿ ಆರಂಭಿಕ ಬ್ಯಾಟರ್ ಯಶ್ ನಹರ್ ಜೊತೆಗೆ ಹಿರಿಯ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಹುಲ್ ತ್ರಿಪಾಠಿ, ಸಿದ್ಧೇಶ್ ವೀರ್ ಮತ್ತು ರಾಜವರ್ಧನ್ ಹಂಗರ್ಗೇಕರ್ ಬದಲಿಗೆ ಸ್ವಪ್ನಿ ಗುಗಾಲೆ, ಪವನ್ ಶಾ ಮತ್ತು ಜಗದೀಶ್ ಝೋಪ್ರನ್ನ ನೇಮಿಸಲಾಗಿದೆ ಎಂದು ಮಹಾರಾಷ್ಟ್ರ ಸಿಎ ಕಾರ್ಯದರ್ಶಿ ರಿಯಾಜ್ ಬಾಗ್ಬಾನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಹಾರಾಷ್ಟ್ರ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ನೌಶಾದ್ ಶೇಖ್ (ಉಪನಾಯಕ), ಕೇದಾರ್ ಜಾಧವ್, ಯಶ್ ನಹರ್, ಅಜೀಮ್ ಕಾಜಿ, ರಂಜೀತ್ ನಿಕಮ್, ಸತ್ಯಜೀತ್ ಬಚಾವ್, ತರಂಜಿತ್ ಸಿಂಗ್ ಧಿಲ್ಲೋನ್, ಮುಖೇಶ್ ಚೌಧರಿ, ಆಶಯ್ ಪಾಲ್ಕರ್, ಮನೋಜ್ ಇಂಗ್ಲೆ, ಪ್ರದೀಪ್ ದಧೆ, ಶಮ್‌ಹುಪ್ಜಾ ದಧೆ, ಫುಲ್ಪಗಾರ್, ದಿವ್ಯಾಂಗ್ ಹಿಂಗನೇಕರ್, ಸುನಿಲ್ ಯಾದವ್, ಧನರಾಜಸಿಂಗ್ ಪರದೇಶಿ, ಸ್ವಪ್ನಿಲ್ ಗುಗಳೆ, ಪವನ್ ಶಾ ಮತ್ತು ಜಗದೀಶ್ ಝೋಪ್.