ಅಹಮದಾಬಾದ್ (ಗುಜರಾತ್): ಓವರ್ನ 6 ಎಸೆತಗಳನ್ನೂ ಸಿಕ್ಸರ್ ಸಿಡಿಸಿ ಯುವರಾಜ್ ಸಿಂಗ್, ಕ್ರಿಸ್ಗೇಲ್ರಂತಹ ದೈತ್ಯ ಬ್ಯಾಟರ್ಗಳು ವಿಶ್ವದಾಖಲೆ ಮಾಡಿದ್ದಾರೆ. ಇದನ್ನು ಮೀರಿಸಿರುವ ಭಾರತದ ದಾಂಡಿಗ ಋತುರಾಜ್ ಗಾಯಕ್ವಾಡ್ ನೋಬಾಲ್ ಸೇರಿದಂತೆ ಒಂದೇ ಓವರ್ನಲ್ಲಿ 7 ಸಿಕ್ಸರ್ ಬಾರಿಸಿ ಹೊಸ ದಾಖಲೆ ರಚಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡರು.
ಸೋಮವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಉತ್ತರಪ್ರದೇಶ ವಿರುದ್ಧದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಆಟಗಾರ ಗಾಯಕ್ವಾಡ್ ಈ ವಿನೂತನ ದಾಖಲೆ ಮಾಡಿದರು. ಉತ್ತರಪ್ರದೇಶದ ಶಿವ ಸಿಂಗ್ ಎಸೆದ ಪಂದ್ಯದ 49 ನೇ ಓವರ್ನಲ್ಲಿ ಅಬ್ಬರಿಸಿದ ಗಾಯಕ್ವಾಡ್ ಮೊದಲ 4 ಎಸೆತಗಳನ್ನು ಸತತವಾಗಿ ಸಿಕ್ಸರ್ಗಟ್ಟಿದರು.
-
6⃣,6⃣,6⃣,6⃣,6⃣nb,6⃣,6⃣
— BCCI Domestic (@BCCIdomestic) November 28, 2022 " class="align-text-top noRightClick twitterSection" data="
Ruturaj Gaikwad smashes 4⃣3⃣ runs in one over! 🔥🔥
Follow the match ▶️ https://t.co/cIJsS7QVxK…#MAHvUP | #VijayHazareTrophy | #QF2 | @mastercardindia pic.twitter.com/j0CvsWZeES
">6⃣,6⃣,6⃣,6⃣,6⃣nb,6⃣,6⃣
— BCCI Domestic (@BCCIdomestic) November 28, 2022
Ruturaj Gaikwad smashes 4⃣3⃣ runs in one over! 🔥🔥
Follow the match ▶️ https://t.co/cIJsS7QVxK…#MAHvUP | #VijayHazareTrophy | #QF2 | @mastercardindia pic.twitter.com/j0CvsWZeES6⃣,6⃣,6⃣,6⃣,6⃣nb,6⃣,6⃣
— BCCI Domestic (@BCCIdomestic) November 28, 2022
Ruturaj Gaikwad smashes 4⃣3⃣ runs in one over! 🔥🔥
Follow the match ▶️ https://t.co/cIJsS7QVxK…#MAHvUP | #VijayHazareTrophy | #QF2 | @mastercardindia pic.twitter.com/j0CvsWZeES
ಇದರಿಂದ ವಿಚಲಿತನಾದ ಶಿವ ಸಿಂಗ್ ನೋಬಾಲ್ ಹಾಕಿದರು. ಇದನ್ನೂ ಬೌಂಡರಿ ಗೆರೆಯಾಚೆ ದಾಟಿಸಿದ್ದಲ್ಲದೇ, ಮುಂದಿನ 2 ಎಸೆತಗಳಲ್ಲೂ ಸಿಕ್ಸರ್ (6,6,6,6,nb6,6,6) ಬಾರಿಸುವ ಮೂಲಕ ಸತತ 7 ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ವಿಶ್ವದೆಲ್ಲಾ ದಾಖಲೆಗಳನ್ನು ಗಾಯಕ್ವಾಡ್ ಪುಡಿಗಟ್ಟಿದ್ದಾರೆ.
ಮಹಾರಾಷ್ಟ್ರ ತಂಡದ ಆಟಗಾರ ಋತುರಾಜ್ ಗಾಯಕ್ವಾಡ್ ಪಂದ್ಯದಲ್ಲಿ 159 ಎಸೆತಗಳಲ್ಲಿ 10 ಬೌಂಡರಿ 16 ಸಿಕ್ಸರ್ಗಳ ಸಮೇತ ಅಜೇಯವಾಗಿ 220 ರನ್ ಸಿಡಿಸಿ ದ್ವಿಶತಕ ಸಾಧನೆ ಮಾಡಿದರು. ಮಹಾರಾಷ್ಟ್ರ ತಂಡ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 330 ರನ್ ದಾಖಲಿಸಿತು. ವಿಶೇಷವೆಂದರೆ, 6 ಆಟಗಾರರು 110 ರನ್ ಮಾಡಿದರೆ, ಗಾಯಕ್ವಾಡ್ ಒಬ್ಬರೇ 220 ರನ್ ಬಾರಿಸಿದರು.
ಶಿವಸಿಂಗ್ ಎಸೆದ ಓವರ್ನಲ್ಲಿ 43 ರನ್ಗಳು ಸಿಡಿದವು. ಇದು ವಿಶ್ವ ಕ್ರಿಕೆಟ್ನಲ್ಲಿ ಜಂಟಿ ಅತ್ಯಧಿಕ ರನ್ ದಾಖಲಾದ ಓವರ್ ಎಂಬ ಕುಖ್ಯಾತಿ ಪಡೆಯಿತು. ಇದಕ್ಕೂ ಮೊದಲು 2018-19ರಲ್ಲಿ ನ್ಯೂಜಿಲೆಂಡ್‌ನ ದೇಶೀಯ ಕ್ರಿಕೆಟ್ನಲ್ಲಿ ವಿಲಿಯಂ ಲುಡಿಕ್ ಒಂದೇ ಓವರ್ನಲ್ಲಿ 4,6nb,6nb,6,1,6,6,6 ರನ್ ಬಾರಿಸಿ 43 ರನ್ ಗಳಿಸಿದ್ದರು.
ಇದನ್ನೂ ಓದಿ: ಗೆಳೆಯನ ಹುಟ್ಟುಹಬ್ಬದ ಪಾರ್ಟಿ: ಧೋನಿ ಜತೆ ಡ್ಯಾನ್ಸ್ ಮಾಡಿದ ಹಾರ್ದಿಕ್ ಪಾಂಡ್ಯ