ETV Bharat / sports

ಹಾರ್ದಿಕ್​, ಭುವಿಗೆ ಕೊಕ್: ಕಿವೀಸ್​ ಸರಣಿಗೆ ಅಯ್ಯರ್, ಗಾಯಕ್ವಾಡ್​ಗೆ​ ಅವಕಾಶ ಸಾಧ್ಯತೆ

ರುತುರಾಜ್​ ಗಾಯಕ್ವಾಡ್​ ಇತ್ತೀಚೆಗೆ ಮುಗಿದ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಮೋಘ ಪ್ರದರ್ಶನ ತೋರಿದ್ದರು. ಅವರು 16 ಪಂದ್ಯಗಳಿಂದ 4 ಅರ್ಧಶತಕ ಮತ್ತು 1 ಶತಕದ ನೆರವಿನಿಂದ 136 ಸ್ಟ್ರೈಕ್​ ರೇಟ್​ ಮತ್ತು 45ರ ಸರಾಸರಿಯಲ್ಲಿ 635 ರನ್​ಗಳಿಸಿ ಆರೆಂಜ್ ಕ್ಯಾಪ್​ ಪಡೆದಿದ್ದರು.

Ruturaj and Venkatesh Iyer  likely to get chance against New Zealand series
ರುತುರಾಜ್ ಗಾಯಕ್ವಾಡ್​
author img

By

Published : Nov 2, 2021, 6:30 PM IST

ನವದೆಹಲಿ: ನೆವೆಂಬರ್​ 17ರಿಂದ ನ್ಯೂಜಿಲ್ಯಾಂಡ್​ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ ಐಪಿಎಲ್​ ಸ್ಟಾರ್​ಗಳಾದ ರುತುರಾಜ್ ಗಾಯಕ್ವಾಡ್​ ಮತ್ತು ವೆಂಕಟೇಶ್ ಅಯ್ಯರ್ ಭಾರತ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ರುತುರಾಜ್​ ಗಾಯಕ್ವಾಡ್​ ಇತ್ತೀಚೆಗೆ ಮುಗಿದ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಮೋಘ ಪ್ರದರ್ಶನ ತೋರಿದ್ದರು. ಅವರು 16 ಪಂದ್ಯಗಳಿಂದ 4 ಅರ್ಧಶತಕ ಮತ್ತು 1 ಶತಕದ ನೆರವಿನಿಂದ 136 ಸ್ಟ್ರೈಕ್​ ರೇಟ್​ ಮತ್ತು 45ರ ಸರಾಸರಿಯಲ್ಲಿ 635 ರನ್​ಗಳಿಸಿ ಆರೆಂಜ್ ಕ್ಯಾಪ್​ ಪಡೆದಿದ್ದರು.

ಟಿ20 ವಿಶ್ವಕಪ್​ ಮುಗಿಯುತ್ತಿದ್ದಂತೆ ಈ ಸರಣಿ ಆರಂಭವಾಗಲಿದ್ದು, ಕೆಲವು ಹಿರಿಯ ಆಟಗಾರರು ವಿಶ್ರಾಂತಿ ಬಯಸಿರುವ ಕಾರಣ ದೇಶಿ ಟೂರ್ನಮೆಂಟ್​ಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವ ಗಾಯಕ್ವಾಡ್​ ಸೇರಿದಂತೆ ಕೆಲವು ಯುವ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಹಾರ್ದಿಕ್ ಪಾಂಡ್ಯ ಬದಲಿಗೆ ವೆಂಕಟೇಶ್ ಅಯ್ಯರ್​ಗೆ ಅವಕಾಶ

ಕಳೆದ ಎರಡೂ ವರ್ಷಗಳಿಂದ ಬೌಲಿಂಗ್​ನಿಂದ ದೂರವಿರುವ ಹಾರ್ದಿಕ್​ ಪಾಂಡ್ಯ ಅವರ ಬದಲಿಗೆ ಐಪಿಎಲ್​ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಕೆಕೆಆರ್ ತಂಡದ ಆಲ್​ರೌಂಡರ್​ ವೆಂಕಟೇಶ್ ಅಯ್ಯರ್​ ಅವರನ್ನು ಕಿವೀಸ್​ ಸರಣಿಗೆ ಅವಕಾಶ ಕೊಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಶ್ರೇಯಸ್​ ಅಯ್ಯರ್, ಅಕ್ಷರ್​ ಪಟೇಲ್, ದೀಪಕ್ ಚಹರ್​ ಟಿ20 ತಂಡ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್, ಶುಬ್ಮನ್​ ಗಿಲ್​, ಉಮೇಶ್ ಯಾದವ್​​ ಟೆಸ್ಟ್​ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಹಾರ್ದಿಕ್ ಪಾಂಡ್ಯ ಜೊತೆಗೆ ಫಾರ್ಮ್​ ಕಳೆದುಕೊಂಡಿರುವ ವೇಗಿ ಭುವನೇಶ್ವರ್​ ಕುಮಾರ್​ ಕೂಡ ತಂಡದಿಂದ ಹೊರಬೀಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ ವೈಫಲ್ಯ: ಕೊಹ್ಲಿ ODI ನಾಯಕತ್ವದಲ್ಲಿ ಮುಂದುವರಿಯುವುದು ಅನುಮಾನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.