ಕೊಲಂಬೊ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ವಿರುದ್ಧ ನಿಗದಿತ ಓವರ್ಗಳ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲು ಯಂಗ್ ಇಂಡಿಯಾ ಲಂಕಾ ಪ್ರವಾಸದಲ್ಲಿದೆ. ಜುಲೈ 13ರಿಂದ ಉಭಯ ತಂಡಗಳ ನಡುವಿನ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದೆ.
ಈಗಾಗಲೇ ತರಬೇತಿ ಆರಂಭಿಸಿರುವ ಟೀಂ ಇಂಡಿಯಾ ಸಮಯ ಸಿಕ್ಕ ಸಂದರ್ಭಗಳಲ್ಲಿ ಮೋಜಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
-
Presenting The Language Exchange with #TeamIndia's @gowthamyadav88 & @Ruutu1331 😎 😎 - by @28anand & @ameyatilak
— BCCI (@BCCI) July 8, 2021 " class="align-text-top noRightClick twitterSection" data="
Banter ✅
Laughter ✅
Cricket sledges ✅
Watch all the fun unfold here🎥 👇 #SLvINDhttps://t.co/IzMvjxlfYa pic.twitter.com/C422D6GMdQ
">Presenting The Language Exchange with #TeamIndia's @gowthamyadav88 & @Ruutu1331 😎 😎 - by @28anand & @ameyatilak
— BCCI (@BCCI) July 8, 2021
Banter ✅
Laughter ✅
Cricket sledges ✅
Watch all the fun unfold here🎥 👇 #SLvINDhttps://t.co/IzMvjxlfYa pic.twitter.com/C422D6GMdQPresenting The Language Exchange with #TeamIndia's @gowthamyadav88 & @Ruutu1331 😎 😎 - by @28anand & @ameyatilak
— BCCI (@BCCI) July 8, 2021
Banter ✅
Laughter ✅
Cricket sledges ✅
Watch all the fun unfold here🎥 👇 #SLvINDhttps://t.co/IzMvjxlfYa pic.twitter.com/C422D6GMdQ
ಟೀಂ ಇಂಡಿಯಾ ಆಲ್ರೌಂಡರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಹಾಗೂ ಮಹಾರಾಷ್ಟ್ರದ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ "Language Exchange" ಸೆಷನ್ನಲ್ಲಿ ಭಾಗಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ಖುದ್ದಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ವೇಳೆ ಕೃಷ್ಣಪ್ಪ ಗೌತಮ್ ಸಹ ಆಟಗಾರ ಗಾಯಕ್ವಾಡ್ಗೆ ಕನ್ನಡದ ಪಾಠ ಮಾಡಿದ್ದಾರೆ. ಕಾರ್ಯಕ್ರಮದ ವೇಳೆ ಕೆಲವೊಂದು ಕನ್ನಡ ಪದಗಳ ಬಗ್ಗೆ ಹೇಳಿಕೊಟ್ಟಿದ್ದು, ಇದು ಕನ್ನಡ್ ಅಲ್ಲ ಕನ್ನಡ(Kannad Alla Kannada) ಎಂದು ತಿಳಿಸಿದ್ದಾರೆ. ಇದೇ ವೇಳೆ ಗಾಯಕ್ವಾಡ ಕೂಡ ಕೆಲವೊಂದು ಮರಾಠಿ ಶಬ್ದಗಳ ಬಗ್ಗೆ ಮಾಹಿತಿ ನೀಡಿದರು.
ಭಾರತೀಯ ಕ್ರಿಕೆಟ್ ಮಂಡಳಿ ಈ ವಿಡಿಯೋ ಶೇರ್ ಮಾಡ್ತಿದ್ದಂತೆ ಅನೇಕರು ಇದರ ವೀಕ್ಷಣೆ ಮಾಡಿದ್ದು, ಸಾವಿರಾರು ಜನರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ಬಿಸಿಸಿಐ ವಿವಿಧ ಭಾಷೆಗಳ ಬಗ್ಗೆ ಗೊತ್ತು ಮಾಡಿಕೊಡುವ ಕೆಲಸ ಸಹ ಮಾಡಿದ್ದು, ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ವಿಶೇಷವೆಂದರೆ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಹಾಗೂ ಋತುರಾಜ್ ಗಾಯಕ್ವಾಡ್ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಾಗಿದ್ದಾರೆ.
ಇದನ್ನೂ ಓದಿರಿ: ರೈತನ ಮಗಳಾಗಿ ಸಮಸ್ಯೆಗಳ ಬಗ್ಗೆ ಅರಿವಿದೆ, ಅವರ ಕಲ್ಯಾಣಕ್ಕೋಸ್ಕರ ಕೆಲಸ ಮಾಡುವೆ: ಕೇಂದ್ರ ಸಚಿವೆ ಶೋಭಾ