ಮಹಿಳಾ ಕ್ರಿಕೆಟ್ನಲ್ಲಿ ಒಂದಿಲ್ಲ ಒಂದು ವಿವಾದ ಭುಗಿಲೇಳುತ್ತಲೇ ಇದೆ. ಕೆಲ ದಿನಗಳ ಹಿಂದೆ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ದೀಪ್ತಿ ಶರ್ಮಾರ ಮಂಕಂಡಿಂಗ್ ಭಾರೀ ಸದ್ದು ಮಾಡಿದ್ದರೆ, ಈಗ ನಡೆಯುತ್ತಿರುವ ಏಷ್ಯಾ ಕಪ್ನಲ್ಲಿ ಪೂಜಾ ವಸ್ತ್ರಕಾರ್ ಅವರ ರನ್ ಔಟ್, ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುವರಾಜ್ ಸಿಂಗ್ ಸೇರಿದಂತೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಶಾಕ್ ವ್ಯಕ್ತಪಡಿಸಿದ್ದಾರೆ.
ನಿನ್ನೆ ಶ್ರೀಲಂಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ 41 ರನ್ಗಳ ಗೆಲುವು ಸಾಧಿಸಿದೆ. ಆದರೆ, ಪಂದ್ಯದ ವೇಳೆ ಮೂರನೇ ಅಂಪೈರ್ ತಪ್ಪು ನಿರ್ಧಾರದಿಂದ ಭಾರತದ ಪೂಜಾ ವಸ್ತ್ರಕಾರ್ ಮೈದಾನದಿಂದ ಹೊರನಡೆಯಬೇಕಾಯಿತು.
- — cricket fan (@cricketfanvideo) October 1, 2022 " class="align-text-top noRightClick twitterSection" data="
— cricket fan (@cricketfanvideo) October 1, 2022
">— cricket fan (@cricketfanvideo) October 1, 2022
ಪಂದ್ಯದಲ್ಲಿ ಪೂಜಾ ವಸ್ತ್ರಕಾರ್ ಒಂಟಿ ರನ್ಗಾಗಿ ಓಡುತ್ತಿದ್ದಾಗ ಶ್ರೀಲಂಕಾ ವಿಕೆಟ್ ಕೀಪರ್ ರನೌಟ್ಗೆ ಯತ್ನಿಸಿದರು. ಪೂಜಾ ಬ್ಯಾಟ್ ಕ್ರೀಸ್ ಅಂಚಿನಲ್ಲಿ ದಾಟುತ್ತಿದ್ದಾಗ ಬೇಲ್ ಎಗರಿವೆ. ತೀರ್ಪು ನಿರ್ಣಯಿಸಲು ಮೂರನೇ ಅಂಪೈರ್ ಪರಿಶೀಲಿಸಿದಾಗ ಬ್ಯಾಟ್ ಕ್ರೀಸ್ನಲ್ಲಿರುವುದು ಗೋಚರವಾಯಿತು.
ಈ ವೇಳೆ ಎಲ್ಲ ಆಟಗಾರರು ನಾಟೌಟ್ ಎಂದು ತಿಳಿದು ಫೀಲ್ಡಿಂಗ್ಗೆ ಸಜ್ಜಾಗಿದ್ದರೆ, ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು. ಇದು ಕೆಲ ವೇಳೆ ಗಲಿಬಿಲಿ ಉಂಟು ಮಾಡಿತು. ಬಳಿಕ ಪೂಜಾ ವಸ್ತ್ರಕಾರ್ ಅವರನ್ನು ಫೀಲ್ಡ್ ಅಂಪೈರ್ ಮೈದಾನ ತೊರೆಯಲು ಸೂಚಿಸಿದರು.
-
That’ is such a poor decision by the third umpire ! Should have given pooja vastrakar benefit of doubt !! #indiavssrilanka #WomensAsiaCup
— Yuvraj Singh (@YUVSTRONG12) October 1, 2022 " class="align-text-top noRightClick twitterSection" data="
">That’ is such a poor decision by the third umpire ! Should have given pooja vastrakar benefit of doubt !! #indiavssrilanka #WomensAsiaCup
— Yuvraj Singh (@YUVSTRONG12) October 1, 2022That’ is such a poor decision by the third umpire ! Should have given pooja vastrakar benefit of doubt !! #indiavssrilanka #WomensAsiaCup
— Yuvraj Singh (@YUVSTRONG12) October 1, 2022
ಮೂರನೇ ಅಂಪೈರ್ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಭಾರತ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, "ಇದೊಂದು ಕೆಟ್ಟ ತೀರ್ಪಾಗಿದೆ" ಎಂದು ಟೀಕಿಸಿದ್ದರೆ, ಟ್ವಿಟ್ಟರ್ ಬಳಕೆದಾರರೊಬ್ಬರು "ಎಲ್ಲರೂ ನಾಟೌಟ್ ಎಂದು ಭಾವಿಸಿ ಫೀಲ್ಡಿಂಗ್ಗೆ ಸಜ್ಜಾಗಿದ್ದರೆ, ಔಟ್ ಹೇಗಾಯಿತು" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವಿವಾದಾತ್ಮಕ ತೀರ್ಪಿನ ಮಧ್ಯೆಯೂ ಭಾರತ ಉತ್ತಮ ಆಟವಾಡಿತು. ಭಾರತದ ವನಿತೆಯರು 20 ಓವರ್‌ಗಳಲ್ಲಿ 150/6 ಗಳಿಸಿದರೆ, ಶ್ರೀಲಂಕಾ ವನಿತೆಯರು 18.2 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯ ಸೋತರು.
ಓದಿ: ಫುಟ್ಬಾಲ್ ಪಂದ್ಯ ಸೋತಿದ್ದಕ್ಕೆ ಮೈದಾನದಲ್ಲೇ ಹಿಂಸಾಚಾರ.. 127 ಅಭಿಮಾನಿಗಳು ದುರ್ಮರಣ