ETV Bharat / sports

ರಾಜಸ್ಥಾನ ನಾಯಕ ಸಾಮ್ಸನ್​ಗೆ 24 ಲಕ್ಷ ರೂ ದಂಡ, ಒಂದು ಪಂದ್ಯ ನಿಷೇಧ ಭೀತಿ

ರಾಜಸ್ಥಾನ್ ಈ ಆವೃತ್ತಿಯಲ್ಲಿ 2ನೇ ಬಾರಿ ನಿಧಾನಗತಿ ಓವರ್​ ಮಾಡಿದ ತಪ್ಪಿಗೆ ಐಪಿಎಲ್ ನಿಯಮಾವಳಿಗಳ ಅನ್ವಯ ನಾಯಕ ಸಂಜು ಸಾಮ್ಸನ್​ಗೆ 24 ಲಕ್ಷ ರೂ ದಂಡ ವಿಧಿಸಲಾಗಿದೆ. ಇನ್ನುಳಿದ ಆಟಗಾರರಿಗೆ ತಲಾ 6 ಲಕ್ಷ ರೂ ಅಥವಾ ಪಂದ್ಯದ ಸಂಭಾವನೆಯ ಶೇ. 25ರಷ್ಟನ್ನು ದಂಡವಾಗಿ ವಿಧಿಸಲಾಗಿದೆ.

Samson fined for slow over rate
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಾಮ್ಸನ್
author img

By

Published : Sep 26, 2021, 5:45 PM IST

ಅಬು ಧಾಬಿ: ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿಧಾನಗತಿ ಬೌಲಿಂಗ್​ ದರ ಕಾಯ್ದುಕೊಂಡ ರಾಜಸ್ಥಾನ್​ ರಾಯಲ್ಸ್​ಗೆ ಐಪಿಎಲ್ ಮಂಡಳಿ ಭಾರಿ ಮೊತ್ತದ ದಂಡ ಹಾಕಿದೆ.

ರಾಜಸ್ಥಾನ್ ತಂಡ ಈ ಆವೃತ್ತಿಯಲ್ಲಿ 2ನೇ ಬಾರಿ ನಿಧಾನಗತಿ ಓವರ್​ ದರ ಕಾಯ್ದುಕೊಂಡಿದ್ದಕ್ಕೆ ಐಪಿಎಲ್ ನಿಯಮಾವಳಿಗಳನ್ವಯ ನಾಯಕ ಸಂಜು ಸಾಮ್ಸನ್​ಗೆ 24 ಲಕ್ಷ ರೂ ದಂಡ ವಿಧಿಸಲಾಗಿದೆ. ಇನ್ನುಳಿದ ಆಟಗಾರರಿಗೆ ತಲಾ 6 ಲಕ್ಷ ರೂ ಅಥವಾ ಪಂದ್ಯದ ಸಂಭಾವನೆಯ ಶೇ. 25ರಷ್ಟನ್ನು ದಂಡ ವಿಧಿಸಲಾಗಿದೆ.

ರಾಜಸ್ಥಾನ್ ರಾಯಲ್ಸ್​ ಯುಎಇಯಲ್ಲಿ ಹಂತದ ಐಪಿಎಲ್​ನಲ್ಲಿ 2ನೇ ಬಾರಿ ಈ ತಪ್ಪನ್ನೆಸಗಿದೆ. ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲೂ ನಿಧಾನಗತಿ ಓವರ್​​ ದರ ಕಾಯ್ದುಕೊಂಡಿದ್ದಕ್ಕಾಗಿ ಸಾಮ್ಸನ್​ಗೆ 12 ಲಕ್ಷ ರೂ ದಂಡ ಹಾಕಲಾಗಿತ್ತು.

ಸಂಜು ಸಾಮ್ಸನ್​ಗೆ ಒಂದು ಪಂದ್ಯ ನಿಷೇಧ ಭೀತಿ:

ಲೀಗ್​ನಲ್ಲಿ ತಂಡ ಈಗಾಗಲೇ ಎರಡು ಬಾರಿ ನಿಧಾನಗತಿ ಓವರ್​ ಮಾಡಿದೆ. ಇದೇ ತಪ್ಪು ಮತ್ತೆ ಮರುಕಳಿಸಿದರೆ ತಂಡದ ಬ್ಯಾಟಿಂಗ್ ಆಧಾರಸ್ಥಂಭ ಸಂಜು ಸಾಮ್ಸನ್​ ಒಂದು ಪಂದ್ಯ ನಿಷೇಧಕ್ಕೊಳಗಾಗಲಿದ್ದಾರೆ.

ಐಪಿಎಲ್​ ನಿಯಮಾವಳಿಗಳ ಪ್ರಕಾರ, 3ನೇ ಬಾರಿ ಫ್ರಾಂಚೈಸಿಯೊಂದು ನಿಗಧಿತ ಸಮಯದಲ್ಲಿ ಓವರ್​ ಮುಗಿಸದೇ ತನ್ನ ತಪ್ಪನ್ನು ಮರುಕಳಿಸಿದರೆ, ಆ ತಂಡದ ನಾಯಕನಿಗೆ ಒಂದು ಪಂದ್ಯ ನಿಷೇಧದ ಜೊತೆಗೆ 30 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: ಸಿಎಸ್​ಕೆ ಪ್ಲೇ ಆಫ್​ ತಲುಪಿದ ಮೇಲೆ ಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ಬೇಕು : ಗಂಭೀರ್ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.