ETV Bharat / sports

ಐಪಿಎಲ್​ನಲ್ಲಿ 3000 ರನ್​ ಪೂರೈಸಿದ ಸಂಜು ಸಾಮ್ಸನ್ - ಸನ್​ರೈಸರ್ಸ್​ ಹೈದರಾಬಾದ್​ ತಂಡ

ಸಾಮ್ಸನ್​ 117 ಐಪಿಎಲ್​ ಪಂದ್ಯಗಳಿಂದ 29.87 ಸರಾಸರಿಯಲ್ಲಿ 3017 ರನ್​ಗಳಿಸಿದ್ದಾರೆ. ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ 6185 ರನ್​ಗಳಿಸಿ ಐಪಿಎಲ್​ನಲ್ಲಿ ಗರಿಷ್ಠ ರನ್​ಗಳಿಸಿದ ಬ್ಯಾಟರ್ ಆಗಿದ್ದಾರೆ. ನಂತರ ಶಿಖರ್​ ಧವನ್(5627), ರೋಹಿತ್ ಶರ್ಮಾ(5556), ಸುರೇಶ್ ರೈನಾ(5523) ಮತ್ತು ಡೇವಿಡ್ ವಾರ್ನರ್​(5449) ರನ್​ಗಳಿಸಿ ಮೊದಲ 5 ಸ್ಥಾನದಲ್ಲಿದ್ದಾರೆ..

Sanju Samson complete 3000 runs in IPL
ಸಂಜು ಸಾಮ್ಸನ್​ 3000 ರನ್ಸ್
author img

By

Published : Sep 27, 2021, 10:54 PM IST

ದುಬೈ : ರಾಜಸ್ಥಾನ್ ರಾಯಲ್ಸ್​ ತಂಡದ ನಾಯಕ ಸಂಜು ಸಾಮ್ಸನ್ ಸೋಮವಾರ ನಡೆದ ಸನ್​ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದಲ್ಲದೆ​ ಐಪಿಎಲ್​ನಲ್ಲಿ 3000 ರನ್​ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ 19ನೇ ಬ್ಯಾಟರ್​​ ಎನಿಸಿಕೊಂಡಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಡದಲ್ಲಿ ನಡೆದ ಪಂದ್ಯದಲ್ಲಿ ಸಂಜು ಸಾಮ್ಸನ್​ 57 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 82 ರನ್​ಗಳಿಸಿದರು. ಇವರ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್​ 164 ರನ್​ ಗಳಿಸಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 15ನೇ ಅರ್ಧಶತಕ ಸಿಡಿಸಿದ ಸಾಮ್ಸನ್​ ಇದೇ ಸಂದರ್ಭದಲ್ಲಿ ಶಿಖರ್​ ಧವನ್​ರನ್ನು (430) ರನ್ನು ಹಿಂದಿಕ್ಕಿ ಆರೆಂಜ್​ ಕ್ಯಾಪ್​ ಪಡೆದುಕೊಂಡರು.

ಸಾಮ್ಸನ್​ 117 ಐಪಿಎಲ್​ ಪಂದ್ಯಗಳಿಂದ 29.87 ಸರಾಸರಿಯಲ್ಲಿ 3017 ರನ್​ಗಳಿಸಿದ್ದಾರೆ. ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ 6185 ರನ್​ಗಳಿಸಿ ಐಪಿಎಲ್​ನಲ್ಲಿ ಗರಿಷ್ಠ ರನ್​ಗಳಿಸಿದ ಬ್ಯಾಟರ್ ಆಗಿದ್ದಾರೆ. ನಂತರ ಶಿಖರ್​ ಧವನ್(5627), ರೋಹಿತ್ ಶರ್ಮಾ(5556), ಸುರೇಶ್ ರೈನಾ(5523) ಮತ್ತು ಡೇವಿಡ್ ವಾರ್ನರ್​(5449) ರನ್​ಗಳಿಸಿ ಮೊದಲ 5 ಸ್ಥಾನದಲ್ಲಿದ್ದಾರೆ.

ಇದನ್ನು ಓದಿ:ಕೊಹ್ಲಿ ಮುಡಿಗೆ ಮತ್ತೊಂದು ಗರಿ: ಟಿ20 ಕ್ರಿಕೆಟ್​ನಲ್ಲಿ 10,000 ರನ್​ ಪೂರೈಸಿದ ಮೊದಲ ಭಾರತೀಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.