ETV Bharat / sports

ಗಾಯದ ಮೇಲೆ ಬರೆ: ಸ್ಟೋಕ್ಸ್​ ಬೆನ್ನಲ್ಲೇ ರಾಜಸ್ಥಾನ ತಂಡದಿಂದ ಸ್ಟಾರ್​ ಬೌಲರ್​​​ ಔಟ್​! - ಐಪಿಎಲ್​ 2021

ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಬೌಲರ್ ಇದೀಗ ಪ್ರಸಕ್ತ ಸಾಲಿನ ಐಪಿಎಲ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.

Jofra archer
Jofra archer
author img

By

Published : Apr 23, 2021, 8:53 PM IST

ಲಂಡನ್​: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಸತತ ಸೋಲುಗಳ ಮೂಲಕ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್​ಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಐಪಿಎಲ್​ ಟೂರ್ನಿಯಿಂದ ತಂಡದ ಸ್ಟಾರ್​ ಬೌಲರ್​​ ಹೊರಬಿದ್ದಿದ್ದಾರೆ.

26 ವರ್ಷದ ಸ್ಟಾರ್​ ಬೌಲರ್ ಜೋಫ್ರಾ ಆರ್ಚರ್​ ಇದೀಗ ರಾಜಸ್ಥಾನ ರಾಯಲ್ಸ್​ ತಂಡ ಸೇರಿಕೊಳ್ಳುವುದಿಲ್ಲ ಎಂದು ಇಂಗ್ಲೆಂಡ್​ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಗಾಯದ ಸಮಸ್ಯೆಯಿಂದಾಗಿ ಈಗಾಗಲೇ ತಂಡದ ಆಲ್​ರೌಂಡರ್​ ಸ್ಟೋಕ್ಸ್​ ಟೂರ್ನಿಯಿಂದ ಹೊರಬಿದ್ದಿದ್ದು, ಇದರ ಮಧ್ಯೆ ವೇಗಿ ಕೂಡ ಹೊರ ಹೋಗಿದ್ದಾರೆ.

ಭಾರತ ವಿರುದ್ಧದ ಸರಣಿ ವೇಳೆ ಗಾಯದ ಸಮಸ್ಯೆಗೊಳಗಾಗಿದ್ದ ಆರ್ಚರ್​, ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದರೆ ಐಪಿಎಲ್​ ದ್ವಿತಿಯಾರ್ಧದಲ್ಲಿ ಅವರು ರಾಜಸ್ಥಾನ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಅವರು 14ನೇ ಆವೃತ್ತಿ ಐಪಿಎಲ್​ನಲ್ಲಿ ಭಾಗಿಯಾಗುತ್ತಿಲ್ಲ ಎಂದು ಇಂಗ್ಲೆಂಡ್​​ ಹಾಗೂ ವೇಲ್ಸ್​ ಕ್ರಿಕೆಟ್ ಮಂಡಳಿ ಇದೀಗ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಟಿ - 20ಯಲ್ಲಿ ಪಾಕ್​ ವಿರುದ್ಧ 19ರನ್​ಗಳ ಜಯ: ಐತಿಹಾಸಿಕ ಸಾಧನೆ ಬರೆದ ಜಿಂಬಾಬ್ವೆ!

ಗಾಯದಿಂದ ಈಗಾಗಲೇ ಚೇತರಿಸಿಕೊಂಡಿರುವ ಜೋಫ್ರಾ ಆರ್ಚರ್​ ಅಭ್ಯಾಸ ಶುರುಮಾಡಿದ್ದು, ಮುಂದಿನ 15 ದಿನಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡುವ ಸಾಧ್ಯತೆ ಇದೆ. ಐಪಿಎಲ್​ ಮೊದಲ ಪಂದ್ಯದಲ್ಲೇ ಕಣಕ್ಕಿಳಿದಿದ್ದ ಸ್ಟೋಕ್ಸ್​ ಕ್ಯಾಚ್​ ಹಿಡಿಯಲು ಹೋಗಿ ಗಾಯಗೊಂಡಿದ್ದ ಕಾರಣ ಈಗಾಗಲೇ ಲಂಡನ್​ಗೆ ತೆರಳಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.