ಮುಂಬೈ: ಇಂದಿನ ಎರಡನೇ ಮುಖಾಮುಖಿಯಲ್ಲಿ ಬೆಂಗಳೂರು ತಂಡ ಗುಜರಾತ್ ಜೈಂಟ್ಸ್ನ್ನು ಎದುರಿಸುತ್ತಿದ್ದು, ಎರಡೂ ತಂಡಕ್ಕೆ ಪ್ಲೇ-ಆಫ್ ಪ್ರವೇಶಿಸಲು ಮಹತ್ತರ ಪಂದ್ಯವಾಗಿದೆ. ಟಾಸ್ ಗೆದ್ದ ಸ್ನೇಹಾ ರಾಣಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರ್ಸಿಬಿಯಲ್ಲಿ ಒಂದು ಬದಲಾವಣೆ ಆಗಿದ್ದು, ರೇಣುಕಾ ಬದಲಾಗಿ ಪ್ರೀತಿ ಬೋಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಗುಜರಾತ್ ಜೈಂಟ್ಸ್ ಆಡುವ ತಂಡ: ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ಸ್ನೇಹ ರಾಣಾ(ನಾಯಕಿ), ತನುಜಾ ಕನ್ವರ್, ಅಶ್ವನಿ ಕುಮಾರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ತಂಡ: ಸೋಫಿ ಡಿವೈನ್, ಸ್ಮೃತಿ ಮಂಧಾನ(ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್
ಟಾಸ್ ನಂತರ ಮಾತನಾಡಿದ ಗುಜರಾತ್ ಕ್ಯಾಪ್ಟನ್ ಸ್ನೇಹ ರಾಣಾ, "ನಾವು ಮೊದಲು ಬ್ಯಾಟ್ ಮಾಡುತ್ತೇವೆ. ಈ ಹಿಂದೆ ಆಡಿದ ಪಂದ್ಯಗಳಲ್ಲಿ ಮೇಲ್ಮೈ ನಿಧಾನವಾಗಿದೆ. ಡೆಲ್ಲಿ ವಿರುದ್ಧದ ಗೆಲುವಿನ ಸಕಾರಾತ್ಮಕ ಮನೋಭಾವದಿಂದ ಇಂದಿನ ಆಟವನ್ನು ಮುಂದುವರೆಸುತ್ತೇವೆ. ಪಿಚ್‌ಗಳು ಬದಲಾಗಬಹುದು ಆದರೆ 160-165 ಗುರಿ ನೀಡುವ ಬಗ್ಗೆ ಚಿಂತಿಸುತ್ತೇವೆ. ತಂಡದಲ್ಲಿ ಒಂದು ಬದಲಾವಣೆ ಇದ್ದು ಮಾನ್ಸಿ ಸ್ಥಾನದಲ್ಲಿ ಮೇಘನಾ ಆಡಲಿದ್ದಾರೆ" ಎಂದರು
-
A look at the Playing XIs of #RCBvGG
— Women's Premier League (WPL) (@wplt20) March 18, 2023 " class="align-text-top noRightClick twitterSection" data="
Follow the match ▶️ https://t.co/uTxwwRnRxl#TATAWPL pic.twitter.com/hF4CmukZpH
">A look at the Playing XIs of #RCBvGG
— Women's Premier League (WPL) (@wplt20) March 18, 2023
Follow the match ▶️ https://t.co/uTxwwRnRxl#TATAWPL pic.twitter.com/hF4CmukZpHA look at the Playing XIs of #RCBvGG
— Women's Premier League (WPL) (@wplt20) March 18, 2023
Follow the match ▶️ https://t.co/uTxwwRnRxl#TATAWPL pic.twitter.com/hF4CmukZpH
ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ ಟಾಸ್ ಗೆಲುವಿ ಪರಿಣಾಮದ ಬಗ್ಗೆ ಮಾತನಾಡಿ, "ಟಾಸ್‌ಗಳು 50-50 ಅಥವಾ 60-40 ಎಂದು ನನಗೆ ಗೊತ್ತಿಲ್ಲ. ನಾವು ಪಂದ್ಯಗಳನ್ನು ಗೆಲ್ಲಬಹುದಾದರೆ ಟಾಸ್‌ಗಳನ್ನು ಕಳೆದುಕೊಳ್ಳಲು ಒಪ್ಪುವುದಿಲ್ಲ ಎಂದ ಅವರು, ಇಂದು ಮೊದಲು ಬೌಲಿಂಗ್ ಮಾಡುವ ಚಿಂತನೆಯಲ್ಲೇ ಇದ್ದೆವು. ತಂಡ ಚೇಸಿಂಗ್ನಲ್ಲಿ ಉತ್ತಮವಾಗಿ ಆಡುತ್ತದೆ. ಹೀಗಾಗಿ ನಾವು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಬಯಸಿದ್ದೆವು. ರೇಣುಕಾ ಬದಲಾಗಿ ಪ್ರೀತಿ ಬೋಸ್ ಕಣಕ್ಕಿಳಿಯಲಿದ್ದಾರೆ ಎಂದರು.
ಎರಡು ತಂಡಕ್ಕೆ ಗೆಲುವಿನ ಬಲ: ಆರ್ಸಿಬಿ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಇಂದಿನ ಪಂದ್ಯಕ್ಕೆ ಹೆಚ್ಚು ಹುರುಪು ತುಂಬಿದೆ. ಕನ್ನಿಕಾ ಅಹುಜಾ ಆರ್ಸಿಬಿಯ ಭರವಸೆ ಆಗಿದ್ದಾರೆ. ಎಲಿಸಾ ಪೆರಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅವರ ಆಲ್ರೌಂಡ್ ಪ್ರದರ್ಶನಕ್ಕೆ ಕನ್ನಿಕಾ ಆಟ ಬಲ ನೀಡಲಿದೆ. ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್ನ್ನು ಮಣಿಸಿದ ಗುಜರಾತ್ ಅದೇ ಗುರುಪಿನಲ್ಲಿ ಕಣಕ್ಕಿಳಿದಿದೆ.
ಪ್ಲೇ-ಆಫ್ ಹಾದಿ ಕಠಿಣ: ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮುಂಬೈ ಇಂಡಿಯನ್ಸ್ನ್ನು 5 ವಿಕೆಟ್ನಿಂದ ಸೋಲಿಸಿದ್ದು, ಗುಜರಾತ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಪ್ಲೇ-ಆಫ್ ಹಾದಿ ಕಠಿಣವಾಗಿಸಿದೆ. ಇಂದಿನ ಪಂದ್ಯ ಸೇರಿಸಿಕೊಂಡು ಬೃಹತ್ ರನ್ ರೇಟ್ನ ಗೆಲುವನ್ನು ಎರಡೂ ತಂಡಗಳು ದಾಖಲಿಸಬೇಕಿದೆ. ಆರು ಪಂದ್ಯದಿಂದ ಮೂರನೇ ಗೆಲುವು ಕಂಡಿರುವ ಯುಪಿಗೆ ಪ್ಲೇ ಆಫ್ ಹಾದಿ ಸರಳ ಇದೆ. ನಾಳೆ ಯುಪಿ ಗುಜರಾತ್ ಮೇಲೆ ಗೆಲುವು ಸಾಧಿಸಿದರೆ ಪ್ಲೇ ಆಫ್ ಪ್ರವೇಶ ಸಿಕ್ಕಂತೆ ಆಗುತ್ತದೆ.
ಇದನ್ನೂ ಓದಿ: ಮುಂಬೈ ಮಣಿಸಿದ ಯುಪಿ ವಾರಿಯರ್ಸ್: ಕೌರ್ ಪಡೆಗೆ ಪ್ರಥಮ ಸೋಲು