ETV Bharat / sports

ಆರ್​ಸಿಬಿಗೆ ಭಾರಿ ಮುಖಭಂಗ: ಎಂಟೇ ಓವರ್​ಗಳಲ್ಲಿ ಚೇಸ್​ ಮಾಡಿ 2ನೇ ಸ್ಥಾನಕ್ಕೇರಿದ ಹೈದರಾಬಾದ್​ - ದಿನೇಶ್ ಕಾರ್ತಿಕ್

ಸನ್​ರೈಸರ್ಸ್ ಹೈದರಾಬಾದ್​ ಬೌಲರ್​ಗಳ ದಾಳಿಗೆ ಸಂಪೂರ್ಣ ವೈಫಲ್ಯ ಅನುಭವಿಸಿದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಕೇವಲ 68ಕ್ಕೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಹೈದರಾಬಾದ್​ ತಂಡ ಕೇವಲ 8 ಓವರ್​​ಗಳಲ್ಲಿ 1 ವಿಕೆಟ್​ ಕಳೆದುಕೊಂಡು ತಲುಪಿದೆ.

Royal Challengers Bangalore vs Sunrisers Hyderabad

author img

By

Published : Apr 23, 2022, 7:18 PM IST

Updated : Apr 23, 2022, 10:38 PM IST

ಮುಂಬೈ: ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೇವಲ 68 ರನ್​ಗಳಿಗೆ ಆಲೌಟ್ ಮಾಡಿದ ಸನ್​ರೈಸರ್ಸ್​ ಹೈದರಾಬಾದ್​, 69 ರನ್​ಗಳ ಗುರಿಯನ್ನು ಎಂಟೇ ಓವರ್​ಗಳಲ್ಲಿ ಚೇಸ್​ ಮಾಡಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಸುಲಭ ಗುರಿ ಬೆನ್ನಟ್ಟಿದ ಹೈದರಾಬಾದ್​ ತಂಡಕ್ಕೆ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 47 ರನ್​ಗಳಿಸಿ ಗೆಲುವಿಗೆ 4 ರನ್​ಗಳ ಅಗತ್ಯವಿದ್ದಾಗ ಹರ್ಷಲ್​ ಪಟೇಲ್​ಗೆ ವಿಕೆಟ್ ಒಪ್ಪಿಸಿದರು. ನಾಯಕ ಕೇನ್ ವಿಲಿಯಮ್ಸನ್​ ಅಜೇಯ 17 ರಾಹುಲ್ ತ್ರಿಪಾಠಿ ಅಜೇಯ 7 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್‌ಗೆ ಇಳಿದ ಬೆಂಗಳೂರು ತಂಡಕ್ಕೆ ಮಾರ್ಕೊ ಜಾನ್ಸನ್​ 2ನೇ ಓವರ್​ನಲ್ಲೇ ನಾಯಕ ಡುಪ್ಲೆಸಿಸ್​(5), ವಿರಾಟ್ ಕೊಹ್ಲಿ(0) ಮತ್ತು ಅನುಜ್ ರಾವತ್​(0) ವಿಕೆಟ್ ಪಡೆಯುವ ಮರ್ಮಾಘಾತ ನೀಡಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಯಾರ್ಕರ್ ಕಿಂಗ್​ 12 ರನ್​ಗಳಿಸಿದ್ದ ಗ್ಲೆನ್ ಮ್ಯಾಕ್ಸ್​ವೆಲ್​ ವಿಕೆಟ್​ ಪಡೆದರೆ, ಕನ್ನಡಿಗ ಜಗದೀಶ್ ಸುಚಿತ್ 15 ರನ್​ಗಳಿಸಿದ್ದ ಯುವ ಆಟಗಾರ ಸುಯಸ್ ಪ್ರಭುದೇಸಾಯಿ ಮತ್ತು ಆರ್​ಸಿಬಿ ಆಪತ್ಬಾಂಧವ ದಿನೇಶ್​ ಕಾರ್ತಿಕ್​(0)ರನ್ನು ಪೆವಿಲಿಯನ್​ಗಟ್ಟುವ ಮೂಲಕ ಆರ್​ಸಿಬಿ 100ರ ಗಡಿದಾಟುವ ಕನಸನ್ನು ನುಚ್ಚುನೂರು ಮಾಡಿದರು.

ನಂತರ ಬಂದ ಹರ್ಷಲ್ ಪಟೇಲ್ (4), ವನಿಡು ಹಸರಂಗ(8) ವಿಕೆಟ್​ ನಟರಾಜನ್ ಪಾಲಾದರೆ, 2ರನ್​ಗಳಿಸಿದ್ದ ಮೊಹಮ್ಮದ್​ ಸಿರಾಜ್​ರನ್ನು ಭುವನೇಶ್ವರ್​ ಕುಮಾರ್ ಔಟ್​ ಮಾಡಿದರು. ಆರ್​ಸಿಬಿ 16.1 ಓವರ್​ಗಳಲ್ಲಿ 68 ರನ್​ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಸನ್​ರೈಸರ್ಸ್ ಹೈದರಾಬಾದ್​ ಪರ ಮಾರ್ಕೊ ಜಾನ್ಸನ್ 25ಕ್ಕೆ3​, ನಟರಾಜನ್ 10ಕ್ಕೆ3 ​ ಮತ್ತು ಜೆ. ಸುಚಿತ್ 12ಕ್ಕೆ2 ಮತ್ತು ಭುವನೇಶ್ವರ್ ಕುಮಾರ್ 13ಕ್ಕೆ 1 ವಿಕೆಟ್ ಪಡೆದರು.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 100ಕ್ಕಿಂತ ಕಡಿಮೆ ಮೊತ್ತಕ್ಕೆ ಹೆಚ್ಚು ಬಾರಿ ಆಲೌಟ್ ಆದ 2ನೇ ತಂಡವಾಗಿದೆ. ಬೆಂಗಳೂರು ಫ್ರಾಂಚೈಸಿ​ 8ನೇ ಬಾರಿ ಆಲೌಟ್ ಈ ಮೊತ್ತಕ್ಕೆ ಆಲೌಟ್ ಆದರೆ, ಡೆಲ್ಲಿ ತಂಡ 9 ಬಾರಿ 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕಳಪೆ ದಾಖಲೆ ಹೊಂದಿದೆ.

Last Updated : Apr 23, 2022, 10:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.