ಲಂಡನ್: ನ್ಯೂಜಿಲ್ಯಾಂಡ್ ತಂಡದಲ್ಲಿ ತಾವು ಸಹ ಜನಾಂಗೀಯ ನಿಂದನೆಗೊಳಗಾಗಿರುವುದಾಗಿ ಹೇಳಿಕೊಂಡಿದ್ದ ನ್ಯೂಜಿಲ್ಯಾಂಡ್ ಮಾಜಿ ಕ್ಯಾಪ್ಟನ್ ರಾಸ್ ಟೇಲರ್, ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದ ವೇಳೆ ತಮಗಾದ ಆಘಾತಕಾರಿ ಅನುಭವವನ್ನು ಹೊರಹಾಕಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ರಾಸ್ ಟೇಲರ್ ಆಡಿದ್ದರು. 2011ರಲ್ಲಿ ಮೊಹಾಲಿಯಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ ಟೇಲರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ತಂಡದ ಮಾಲೀಕರು ತಮಗೆ 3-4 ಸಲ ಕಪಾಳಮೋಕ್ಷ ಮಾಡಿದ್ದರು ಎಂದು ಬರೆದುಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಮ್ಮ ಮುಂದೆ 195ರನ್ಗಳ ಟಾರ್ಗೆಟ್ ಇಡಲಾಗಿತ್ತು. ಈ ವೇಳೆ ನಾನು ಬ್ಯಾಟ್ ಬೀಸಲು ಮೈದಾನಕ್ಕಿಳಿದಿದ್ದೆನು. ಆದರೆ, ಎಲ್ಬಿ ಬಲೆಗೆ ಬಿದ್ದು ಶೂನ್ಯಕ್ಕೆ ವಿಕೆಟ್ ಒಪ್ಪಿಸಬೇಕಾಯಿತು. ಈ ವೇಳೆ ತಂಡದ ಸಹಾಯಕ ಸಿಬ್ಬಂದಿ, ಮ್ಯಾನೇಜ್ಮೆಂಟ್ ಹೋಟೆಲ್ನ ಮೇಲಿನ ಮಹಡಿಯ ಬಾರ್ನಲ್ಲಿದ್ದರು. ಈ ವೇಳೆ ರಾಯಲ್ಸ್ ತಂಡದ ಮಾಲೀಕರು ಮಾತನಾಡಿ, ರಾಸ್, ಶೂನ್ಯಕ್ಕೆ ವಿಕೆಟ್ ಒಪ್ಪಿಸಲು ನಿಮಗೆ ಮಿಲಿಯನ್ ಡಾಲರ್ ಖರ್ಚು ಮಾಡಿಲ್ಲ ಎಂದು ಮೂರ್ನಾಲ್ಕು ಸಲ ಕಪಾಳಮೋಕ್ಷ ಮಾಡಿದ್ದಾಗಿ ಟೇಲರ್ ಬಹಿರಂಗಪಡಿಸಿದ್ದಾರೆ.
-
Ross Taylor said, "RR owner slapped me 3-4 times when I got out for a duck in 2011 IPL match in Mohali and said 'we didn't pay you a million to get out on a duck' and laughed. It weren't hard slaps, but I couldn't imagine it happening in professional sporting environments".
— Mufaddal Vohra (@mufaddal_vohra) August 13, 2022 " class="align-text-top noRightClick twitterSection" data="
">Ross Taylor said, "RR owner slapped me 3-4 times when I got out for a duck in 2011 IPL match in Mohali and said 'we didn't pay you a million to get out on a duck' and laughed. It weren't hard slaps, but I couldn't imagine it happening in professional sporting environments".
— Mufaddal Vohra (@mufaddal_vohra) August 13, 2022Ross Taylor said, "RR owner slapped me 3-4 times when I got out for a duck in 2011 IPL match in Mohali and said 'we didn't pay you a million to get out on a duck' and laughed. It weren't hard slaps, but I couldn't imagine it happening in professional sporting environments".
— Mufaddal Vohra (@mufaddal_vohra) August 13, 2022
ಇದನ್ನೂ ಓದಿ: ಕ್ರಿಕೆಟ್ ಬದುಕಿಗೆ ರಾಸ್ ಟೇಲರ್ ವಿದಾಯ...ನೆದರ್ಲ್ಯಾಂಡ್ ತಂಡದಿಂದ ಗಾರ್ಡ್ ಆಫ್ ಆನರ್ ಗೌರವ
ಆಗಿನ ಪರಿಸ್ಥಿತಿ ಬಗ್ಗೆ ನಾನು ಉಲ್ಲೇಖ ಮಾಡಲು ಹೋಗುವುದಿಲ್ಲ. ಇಂತಹ ಪ್ರಕರಣ ಅನೇಕರಲ್ಲಿ ನಡೆಯುತ್ತದೆ ಎಂದು ಅವರು ತಿಳಿಸಿದ್ದಾರೆ. ನ್ಯೂಜಿಲ್ಯಾಂಡ್ ಆಟಗಾರ ರಾಸ್ ಟೇಲರ್ 2008ರಿಂದ 2010ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. 2011ರಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ತದನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರತಿನಿಧಿಸಿದ್ದರು.
ಕಳೆದ ಏಪ್ರಿಲ್ ತಿಂಗಳಲ್ಲಿ ಕ್ರಿಕೆಟ್ನಿಂದ ನಿವೃತ್ತಿ ಘೋಷಣೆ ಮಾಡಿರುವ ರಾಸ್ ಟೇಲರ್ ತಮ್ಮ ಆತ್ಮಚರಿತ್ರೆ 'ಬ್ಲ್ಯಾಕ್ ಆ್ಯಂಡ್ ವೈಟ್' ಕೃತಿ ರಿಲೀಸ್ ಮಾಡಿದ್ದಾರೆ. ಅದರಲ್ಲಿ ಅನೇಕ ವಿಷಯಗಳನ್ನು ಉಲ್ಲೇಖ ಮಾಡಿದ್ದಾರೆ.
ಬರೋಬ್ಬರಿ 16 ವರ್ಷಗಳ ಕಾಲ ನ್ಯೂಜಿಲ್ಯಾಂಡ್ ತಂಡದ ಪರ ಆಡಿರುವ ರಾಸ್ ಟೇಲರ್, 112 ಟೆಸ್ಟ್ ಪಂದ್ಯಗಳಿಂದ 7683ರನ್ಗಳಿಕೆ ಮಾಡಿದ್ದು, 236 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 8,593 ರನ್ ಗಳಿಸಿದ್ದಾರೆ. 102 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,909 ರನ್ ಗಳಿಸಿದ್ದಾರೆ. ಈ ವೇಳೆ ಡ್ರೆಸಿಂಗ್ ರೂಮ್ನಲ್ಲಿ ಸಹ ಆಟಗಾರರಿಂದ ಜನಾಂಗೀಯ ನಿಂದನೆ ಅನುಭವಿಸಿರುವುದಾಗಿ ಸಹ ಅವರು ಹೇಳಿಕೊಂಡಿದ್ದಾರೆ. ಇವರ ಆರೋಪವನ್ನು ಗಂಭೀರವಾಗಿ ಪರಗಣಿಸಿರುವ ನ್ಯೂಜಿಲ್ಯಾಂಡ್ ಕ್ರಿಕೆಟ್ ಬೋರ್ಡ್ ತನಿಖೆ ನಡೆಸಲು ನಿರ್ಧರಿಸಿದೆ.