ಸೆಂಚುರಿಯನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಸೋಲಿಗೆ ಭಾರತ ತಂಡದ ಕಳಪೆ ಬೌಲಿಂಗ್ ಕಾರಣ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರು, ನಾವು ಚೆನ್ನಾಗಿ ಬೌಲಿಂಗ್ ಮಾಡಲಿಲ್ಲ, ಇಲ್ಲಿನ ಪಿಚ್ 400 ರನ್ ಬಿಟ್ಟುಕೊಡುವ ಮಟ್ಟದಲ್ಲಿ ಇರಲಿಲ್ಲ ಎಂಬುದನ್ನು ನಾಯಕ ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಮೂರೇ ದಿನಗಳಲ್ಲಿ ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಭಾರತ ತಂಡ ಸೋತಿದೆ. ವಿದಾಯದ ಸರಣಿ ಆಡುತ್ತಿರುವ ಡೀನ್ ಎಲ್ಗರ್ ಮೊದಲ ಇನ್ನಿಂಗ್ಸ್‌ನಲ್ಲಿ ಬಂಡೆಯಂತೆ ನಿಂತು, 185 ರನ್ ಬಾರಿಸಿದರು. ಹೀಗಾಗಿ ಹರಿಣಗಳ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 408 ರನ್ ಪೇರಿಸಿದ್ದಲ್ಲದೆ,163 ರನ್ಗಳ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಟೀಂ ಇಂಡಿಯಾ ಬೌಲರ್‌ಗಳ ಗುಣಮಟ್ಟದ ಪ್ರದರ್ಶನದ ನಡುವೆಯೂ ಎಲ್ಗರ್ ಬ್ಯಾಟಿಂಗ್ ಪಾರಮ್ಯ ಮೆರೆದರು.
-
A complete performance from the fast bowlers helps the hosts go 1-0 up in the #SAvIND Test series 🎉#WTC25 📝: https://t.co/Rma4l5S0RO pic.twitter.com/BggeNhDkSp
— ICC (@ICC) December 28, 2023 " class="align-text-top noRightClick twitterSection" data="
">A complete performance from the fast bowlers helps the hosts go 1-0 up in the #SAvIND Test series 🎉#WTC25 📝: https://t.co/Rma4l5S0RO pic.twitter.com/BggeNhDkSp
— ICC (@ICC) December 28, 2023A complete performance from the fast bowlers helps the hosts go 1-0 up in the #SAvIND Test series 🎉#WTC25 📝: https://t.co/Rma4l5S0RO pic.twitter.com/BggeNhDkSp
— ICC (@ICC) December 28, 2023
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, 'ನಾವು ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ. ಇದು 400 ರನ್ ಬಿಟ್ಟುಕೊಂಡುವ ವಿಕೆಟ್ ಆಗಿರಲಿಲ್ಲ. ನಾವು ಕೇವಲ ಓರ್ವ ಬೌಲರ್ ಮೇಲೆ ಹೆಚ್ಚು ಅವಲಂಬಿತರಾಗಲು ಆಗದು. ಉಳಿದ ಬೌಲರ್‌ಗಳು ಕೂಡ ತಕ್ಕ ಸಾಥ್ ನೀಡಬೇಕಿದೆ. ಎದುರಾಳಿ ತಂಡದ ಬೌಲಿಂಗ್ ಪ್ರದರ್ಶನದಿಂದ ನಾವು ಸಾಕಷ್ಟು ಕಲಿಯಬೇಕಿದೆ' ಎಂದರು.
ಮೊದಲ ಇನ್ನಿಂಗ್ಸ್‌ನಲ್ಲಿ, ತಂಡವು ವಿಕೆಟ್ ಕಳೆದುಕೊಳ್ಳುತ್ತ ಸಾಗಿದ್ದರೂ, ರಾಹುಲ್ ಏಕಾಂಗಿ ಹೋರಾಟ ಪ್ರದರ್ಶಿಸಿದರು. ಅಲ್ಲದೆ, ತಂಡದ ಮೊತ್ತವನ್ನು 245 ಕ್ಕೆ ಕೊಂಡೊಯ್ದರು. ತಂಡವು ಪಿಚ್ ಪರಿಸ್ಥಿತಿಗೆ ತಕ್ಕಂತೆ ಆಡಬೇಕಿದೆ. ರಾಹುಲ್ 70ರ ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿದರು. ನಾವು ಪಂದ್ಯದ ಗತಿಯನ್ನು ಅರಿತು ಆಡಬೇಕು, ಬ್ಯಾಟಿಂಗ್ಗಿಳಿದ ತಕ್ಷಣ ಆಕ್ರಮಣಕಾರಿಯಾಗಿ ಆಡಬೇಕಿಲ್ಲ. ಅದು ಯಾವಾಗಲೂ ಸಾಧ್ಯ ಆಗುವುದಿಲ್ಲ. ಈ ಬಗ್ಗೆ ಉದ್ದೇಶ ತಿಳಿದುಕೊಂಡು ಬ್ಯಾಟಿಂಗ್ ಶಿಸ್ತು ತೋರಬೇಕಿದೆ ಎಂದು ರೋಹಿತ್ ಹೇಳಿದರು.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಶತಕದ ಬಲದಿಂದ 245 ರನ್ ಗಳಿಸಿತ್ತು. ಬಳಿಕ ಆಕ್ರಮಣಕಾರಿ ಬೌಲಿಂಗ್ ನಡೆಸುವಲ್ಲಿ ವಿಫಲವಾದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಗೆ 408 ರನ್ ಬಿಟ್ಟುಕೊಟ್ಟಿತು. ಡೀನ್ ಎಲ್ಗರ್ 185 ರನ್ ಬಾರಿಸಿದರೆ, ಇವರಿಗೆ ತಕ್ಕ ಸಾಥ್ ನೀಡಿದ ಬೆಡಿಂಘಮ್ (56) ಹಾಗೂ ಮಾರ್ಕೋ ಜಾನ್ಸೆನ್ (85) ತಲಾ ಅರ್ಧಶತಕ ಬಾರಿಸಿದರು. ಇದರಿಂದಾಗಿ ಹರಿಣ ಪಡೆ 163 ರನ್ ಮುನ್ನಡೆ ಪಡೆಯಿತು. ಬಳಿಕ ಬ್ಯಾಟ್ ಮಾಡಿದ ಭಾರತ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, 131 ರನ್ಗೆ ಆಲೌಟ್ ಆಗಿ, ಇನ್ನಿಂಗ್ಸ್ ಹಾಗೂ 32 ರನ್ಗಳ ಹೀನಾಯ ಸೋಲುಂಡಿದೆ. ತಂಡದ ಪರ ವಿರಾಟ್ ಕೊಹ್ಲಿ 76 ರನ್ ಗಳಿಸಿದರೂ ಇನ್ನಿಂಗ್ಸ್ ಮುಖಭಂಗದಿಂದ ಪಾರು ಮಾಡಲಾಗಲಿಲ್ಲ.
ಇದನ್ನೂ ಓದಿ: 'ಬಾಕ್ಸಿಂಗ್ ಡೇ ಟೆಸ್ಟ್' ಗೆದ್ದ ದಕ್ಷಿಣ ಆಫ್ರಿಕಾ; ಭಾರತದ ಬ್ಯಾಟಿಂಗ್ ವೈಫಲ್ಯ