ETV Bharat / sports

ಮುಂದಿನ 2 ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕನಾಗಬೇಕು: ಗವಾಸ್ಕರ್

author img

By

Published : Sep 29, 2021, 5:05 PM IST

ಯುಎಇಯಲ್ಲಿ 2021ರ ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ವಿರಾಟ್​ ಕೊಹ್ಲಿ ತಮ್ಮ ಟಿ20 ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಆ ಸ್ಥಾನಕ್ಕೆ ಈಗಾಗಲೇ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್​ ಹೆಸರು ಕೇಳಿಬರುತ್ತಿದೆ. ಆದರೆ ರೋಹಿತ್ ನಾಯಕತ್ವದ ದಾಖಲೆ ಉತ್ತಮವಾಗಿದ್ದು ಅವರೇ ತಂಡ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.

Rohit Sharma next captain of India
ಭಾರತ ತಂಡದ ನಾಯಕತ್ವ

ಮುಂಬೈ: ಮುಂದಿನ ಎರಡು ಟಿ20 ವಿಶ್ವಕಪ್​ಗಳಿಗೆ ರೋಹಿತ್ ಶರ್ಮಾ ಭಾರತ ತಂಡದ ನಾಯಕನಾಗಬೇಕೆಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್​ ಅಭಿಪ್ರಾಯಪಟ್ಟಿದ್ದಾರೆ. ಉಪನಾಯಕನಾಗಿ ಕೆ.ಎಲ್.ರಾಹುಲ್ ಅಥವಾ ರಿಷಭ್ ಪಂತ್ ಅವರನ್ನು ನೇಮಕ ಮಾಡುವಂತೆ ಅವರು ಸಲಹೆ ನೀಡಿದ್ದಾರೆ.

ಯುಎಇಯಲ್ಲಿ 2021ರ ಟಿ20 ವಿಶ್ವಕಪ್ ಮುಯುತ್ತಿದ್ದಂತೆ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಆ ಸ್ಥಾನಕ್ಕೆ ಈಗಾಗಲೇ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್​ ಹೆಸರು ಕೇಳಿಬರುತ್ತಿದೆ. ಆದರೆ ರೋಹಿತ್ ನಾಯಕತ್ವದ ದಾಖಲೆ ಉತ್ತಮವಾಗಿದ್ದು ಅವರೇ ಭಾರತ ತಂಡ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.

"ಮುಂದಿನ ಎರಡು ವಿಶ್ವಕಪ್​ಗಳಿಗೆ ರೋಹಿತ್ ಶರ್ಮಾ ನಾಯಕನಾಗಬೇಕೆಂದು ನಾನು ಬಯಸುತ್ತೇನೆ. ಎರಡೂ ವಿಶ್ವಕಪ್​ಗಳು ಒಂದರ ಹಿಂದೊಂದು ಬರಲಿವೆ. ಒಂದು ತಿಂಗಳಲ್ಲಿ ಒಂದು ವಿಶ್ವಕಪ್​ ನಡೆದರೆ, ಮತ್ತೊಂದು ಸರಿಯಾಗಿ ಒಂದು ವರ್ಷಕ್ಕೆ ನಡೆಯಲಿದೆ. ಈ ನಿರ್ದಿಷ್ಟ ಹಂತದಲ್ಲಿ ನೀವು ಹಲವು ನಾಯಕರನ್ನು ಬದಲಾಯಿಸಲು ಬಯಸುವುದಿಲ್ಲ. ಹಾಗಾಗಿ ಎರಡು ವಿಶ್ವಕಪ್​ಗಳಿಗೆ ಭಾರತ ತಂಡದ ನಾಯಕನಾಗಲು ರೋಹಿತ್ ನನ್ನ ಆಯ್ಕೆ" ಎಂದು ಸ್ಟಾರ್​ ಸ್ಫೋರ್ಟ್ಸ್​ನ ಕ್ರಿಕೆಟ್​ ಕನೆಕ್ಟೆಡ್​ ಕಾರ್ಯಕ್ರಮದಲ್ಲಿ ಗವಾಸ್ಕರ್ ಹೇಳಿದರು.

ರೋಹಿತ್ ಶರ್ಮಾ ನಾಯಕನಾಗಿ ಶ್ರೀಲಂಕಾದಲ್ಲಿ ನಿಡಾಹಸ್ ಟ್ರೋಫಿ ಮತ್ತು ಏಷ್ಯಾಕಪ್​ ಜೊತೆಗೆ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ.

ರಾಹುಲ್-ಪಂತ್​ಗೆ ಉಪನಾಯಕ ಸ್ಥಾನ

ಕೆ.ಎಲ್.ರಾಹುಲ್​ರನ್ನು ನಾನು ಉಪನಾಯಕನನ್ನಾಗಿ ನೋಡಲು ಎದುರು ನೋಡುತ್ತಿದ್ದೇನೆ. ರಿಷಭ್ ಪಂತ್​ ಹೆಸರು ಸಹಾ ನನ್ನ ಮನಸ್ಸಿನಲ್ಲಿದೆ. ಏಕೆಂದರೆ ಅವರು ಈ ಬಾರಿ ಐಪಿಎಲ್​ನಲ್ಲಿ ಡೆಲ್ಲಿ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದು, ಅವರ ರಬಾಡ ಮತ್ತು ನಾರ್ಟ್ಜ್​ ಅವರ ಬೌಲಿಂಗ್ ಬದಲಾವಣೆ ಮಾಡುವುದರಲ್ಲಿ ನಾಯಕನಾಗಿ ಚಾಣಾಕ್ಷತನ ತೋರಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ನಾಯಕನನ್ನು ನೀವು ಸದಾ ಬಯಸುತ್ತೀರಿ. ಆದ್ದರಿಂದ ರಾಹುಲ್ ಮತ್ತು ಪಂತ್​ ಅವರನ್ನು ನಾನು ಉಪನಾಯಕ ಸ್ಥಾನಕ್ಕೆ ಶಿಫಾರಸು ಮಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನಕ್ಕೆ ಕ್ಷಮೆ ಕೋರಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ​: 2022ಕ್ಕೆ ಪ್ರವಾಸ ಕೈಗೊಳ್ಳುವ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.