ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಟೀಮ್ ಇಂಡಿಯಾ ಒತ್ತಡ ರಹಿತವಾಗಿ ಡಚ್ಚರ ವಿರುದ್ಧ ಆಡುತ್ತಿದೆ. 2023ರ ವಿಶ್ವಕಪ್ನ ಕೊನೆಯ ಲೀಗ್ ಪಂದ್ಯವನ್ನು ರೋಹಿತ್ ಪಡೆ ನೆದರ್ಲೆಂಡ್ಸ್ ವಿರುದ್ಧ ಆಡುತ್ತಿದೆ. ಇದು ಎರಡೂ ತಂಡಕ್ಕೆ ಔಪಚಾರಿಕ, ಆದ್ದರಿಂದ ಫಲಿತಾಂಶದಿಂದ ಯಾವುದೇ ತಂಡಕ್ಕೆ ಲಾಭ - ನಷ್ಟ ಉಂಟಾಗುವುದಿಲ್ಲ. ಭಾರತ ಟೇಬಲ್ ಟಾಪ್ ತಂಡವಾಗಿ ಸೆಮೀಸ್ ಪ್ರವೇಶಿಸಿದ್ದು, ನ. 15 ರಂದು ಕಿವೀಸ್ ವಿರುದ್ಧ ಮುಂಬೈನಲ್ಲಿ ಸೆಣಸಲಿದೆ.
-
Make that half-century number 💯 in international cricket for Rohit Sharma 👏👏
— BCCI (@BCCI) November 12, 2023 " class="align-text-top noRightClick twitterSection" data="
He powers #TeamIndia to yet another superb start!#CWC23 | #MenInBlue | #INDvNED pic.twitter.com/3tCVPUJ91K
">Make that half-century number 💯 in international cricket for Rohit Sharma 👏👏
— BCCI (@BCCI) November 12, 2023
He powers #TeamIndia to yet another superb start!#CWC23 | #MenInBlue | #INDvNED pic.twitter.com/3tCVPUJ91KMake that half-century number 💯 in international cricket for Rohit Sharma 👏👏
— BCCI (@BCCI) November 12, 2023
He powers #TeamIndia to yet another superb start!#CWC23 | #MenInBlue | #INDvNED pic.twitter.com/3tCVPUJ91K
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ಉತ್ತಮ ಆರಂಭವನ್ನು ಪಡೆಯಿತು. ಅರ್ಧಶತಕ ಗಳಿಸಿ ಇಬ್ಬರು ಆರಂಭಿಕರು ವಿಕೆಟ್ ಕೊಟ್ಟರು. ಶುಭಮನ್ ಗಿಲ್ 51 ರನ್ ಮಾಡಿದರೆ, ರೋಹಿತ್ ಶರ್ಮಾ 61 ರನ್ ಔಟ್ ಆದರು. ಇನ್ನಿಂಗ್ಸ್ನಲ್ಲಿ ರೋಹಿತ್ 8 ಬೌಂಡರಿ ಮತ್ತು 2 ಸಿಕ್ಸ್ ಬಾರಿಸಿದ್ದಾರೆ.
-
𝗛𝗜𝗧𝗠𝗔𝗡 𝗦𝗣𝗘𝗖𝗜𝗔𝗟!
— BCCI (@BCCI) November 12, 2023 " class="align-text-top noRightClick twitterSection" data="
Captain Rohit Sharma now holds the record for the most ODI sixes in the calendar year 💥#TeamIndia | #CWC23 | #MenInBlue | #INDvNED pic.twitter.com/YTCYHAKk7B
">𝗛𝗜𝗧𝗠𝗔𝗡 𝗦𝗣𝗘𝗖𝗜𝗔𝗟!
— BCCI (@BCCI) November 12, 2023
Captain Rohit Sharma now holds the record for the most ODI sixes in the calendar year 💥#TeamIndia | #CWC23 | #MenInBlue | #INDvNED pic.twitter.com/YTCYHAKk7B𝗛𝗜𝗧𝗠𝗔𝗡 𝗦𝗣𝗘𝗖𝗜𝗔𝗟!
— BCCI (@BCCI) November 12, 2023
Captain Rohit Sharma now holds the record for the most ODI sixes in the calendar year 💥#TeamIndia | #CWC23 | #MenInBlue | #INDvNED pic.twitter.com/YTCYHAKk7B
100 ಅರ್ಧಶತಕ: ನೆದರ್ಲೆಂಡ್ಸ್ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ನಾಯಕ ರೋಹಿತ್ ಶರ್ಮಾ ಶತಕ ಅರ್ಧಶತಕ ಗಳಿಸಿದ ದಾಖಲೆ ಮಾಡಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೋಹಿತ್ ಬ್ಯಾಟ್ನಿಂದ ನೂರನೇ ಅರ್ಧಶತಕ ದಾಖಲಾಗಿದೆ. ಏಕದಿನ ಕ್ರಿಕೆಟ್ನಲ್ಲಿ 55ನೇ ಅರ್ಧಶತಕವನ್ನು ಇಂದು (ನ.12 ಭಾನುವಾರ) ಗಳಿಸಿದರು. ಇದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100ನೇ ಶತಕ ದಾಖಲಾಯಿತು. ರೋಹಿತ್ ಟೆಸ್ಟ್ನಲ್ಲಿ 16 ಮತ್ತು ಟಿ 20 29 ಅರ್ಧಶತಕ ಗಳಿಸಿದ್ದಾರೆ.
-
Rohit Sharma today:
— Mufaddal Vohra (@mufaddal_vohra) November 12, 2023 " class="align-text-top noRightClick twitterSection" data="
First Indian captain to score 500 runs in a World Cup edition.
2nd player after Sachin to score 500+ runs in an edition twice.
- The GOAT of the World Cups. pic.twitter.com/Hx60J9l47o
">Rohit Sharma today:
— Mufaddal Vohra (@mufaddal_vohra) November 12, 2023
First Indian captain to score 500 runs in a World Cup edition.
2nd player after Sachin to score 500+ runs in an edition twice.
- The GOAT of the World Cups. pic.twitter.com/Hx60J9l47oRohit Sharma today:
— Mufaddal Vohra (@mufaddal_vohra) November 12, 2023
First Indian captain to score 500 runs in a World Cup edition.
2nd player after Sachin to score 500+ runs in an edition twice.
- The GOAT of the World Cups. pic.twitter.com/Hx60J9l47o
ಸಿಕ್ಸ್ನಲ್ಲಿ ದಾಖಲೆ: ಈ ವರ್ಷ ಒಂದರಲ್ಲೇ ರೋಹಿತ್ ಶರ್ಮಾ 59 ಸಿಕ್ಸ್ ಬಾರಿಸಿದ್ದಾರೆ. ಎಬಿ ಡಿ ವಿಲಿಯರ್ಸ್ 58 ಸಿಕ್ಸ್ ಗಳಿಸಿದ್ದು, ಈ ಹಿಂದಿನ ದಾಖಲೆ ಆಗಿತ್ತು. ಇದನ್ನು ರೋಹಿತ್ ಶರ್ಮಾ ನೆದರ್ಲೆಂಡ್ಸ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ಸಿಕ್ಸ್ ಬಾರಿಸುವ ಮೂಲಕ ಈ ದಾಖಲೆ ಮಾಡಿದ್ದಾರೆ.
ವಿಶ್ವಕಪ್ ಅಧಿಕ ರನ್ ಗಳಿಸಿಕ ನಾಯಕ: ಡಚ್ಚರ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅರ್ಧಶತಕ ಗಳಿಸುವ ಮೂಲಕ ವಿಶ್ವಕಪ್ನಲ್ಲಿ 500 ರನ್ಗಳ ಗಡಿ ದಾಟಿದ್ದಾರೆ. ವಿಶ್ವಕಪ್ನಲ್ಲಿ ನಾಯಕರಾಗಿ 500 ಗಡಿ ದಾಟಿದ ಮೊದಲ ನಾಯಕ ಎಂಬ ಖ್ಯಾತಿ ಗಳಿಸಿದ್ದಾರೆ. 2003 ವಿಶ್ವಕಪ್ನಲ್ಲಿ ಸೌರವ್ ಗಂಗೂಲಿ ಗಳಿಸಿದ್ದ 465 ರನ್ ವಿಶ್ವಕಪ್ನಲ್ಲಿ ಈವರೆಗೆ ನಾಯಕ ಗಳಿಸಿದ ಅತಿ ಹೆಚ್ಚಿನ ರನ್ ಆಗಿತ್ತು.
- " class="align-text-top noRightClick twitterSection" data="">
ಸಚಿನ್ ದಾಖಲೆ ಸರಿಗಟ್ಟಿದ ಶರ್ಮಾ: ವಿಶ್ವಕಪ್ನಲ್ಲಿ ಎರಡು ಬಾರಿ 500ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆಯಲ್ಲಿ ರೋಹಿತ್ ಸಚಿನ್ ಅವರನ್ನು ಸಮ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ 1996 ಮತ್ತು 2003ರ ವಿಶ್ವಕಪ್ನಲ್ಲಿ 500ಕ್ಕೂ ಹೆಚ್ಚಿನ ರನ್ ಕಲೆಹಾಕಿದ್ದರು. ರೋಹಿತ್ ಶರ್ಮಾ ಕಳೆದ 2019 ವಿಶ್ವಕಪ್ ಮತ್ತು ಪ್ರಸ್ತುತ ವಿಶ್ವಕಪ್ನಲ್ಲಿ 500 ರನ್ ಮೀರಿದ್ದಾರೆ.
ಆರಂಭಿಕರಾಗಿ 14,000 ರನ್ ಗಡಿಯನ್ನು ರೋಹಿತ್ ಶರ್ಮಾ ಪೂರೈಸಿದ್ದಾರೆ. ಅಲ್ಲದೇ ಈ ವರ್ಷ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 5 ಬಾರಿ 100+ ರನ್ಗಳ ಪಾಲುದಾರಿಕೆಯನ್ನು ಆರಂಭಿಕರಾಗಿ ಮಾಡಿದ್ದಾರೆ.
ಇದನ್ನೂ ಓದಿ: ಟಾಸ್ ಗೆದ್ದು ಉತ್ತಮ ಆರಂಭ ಪಡೆದ ರೋಹಿತ್ ಪಡೆ; ಅರ್ಧಶತಕ ಗಳಿಸಿ ಗಿಲ್ ಔಟ್