ETV Bharat / sports

100ನೇ ಪಂದ್ಯ ಮುನ್ನಡೆಸುತ್ತಿರುವ ರೋಹಿತ್​ ಶರ್ಮಾ.. ಹಿಟ್​ಮ್ಯಾನ್​ ಗೆಲುವಿನ ರೇಟಿಂಗ್​ ಎಷ್ಟು ಗೊತ್ತೇ? - ETV Bharath Karnataka

ಲಖನೌನಲ್ಲಿ ನಡೆಯುತ್ತಿರುವ ವಿಶ್ವಕಪ್​ನ ಪಂದ್ಯದ ಮೂಲಕ ರೋಹಿತ್​ ಶರ್ಮಾ 100ನೇ ಪಂದ್ಯ ಮುಂದಾಳತ್ವ ವಹಿಸಿಕೊಳ್ಳುತ್ತಿದ್ದಾರೆ.

Rohit Sharma
Rohit Sharma
author img

By ETV Bharat Karnataka Team

Published : Oct 29, 2023, 4:12 PM IST

ಲಖನೌ (ಉತ್ತರ ಪ್ರದೇಶ): ಭಾರತದಲ್ಲಿ ಕ್ರಿಕೆಟ್​ ಎಂಬ ಕ್ರೀಡೆ ಧರ್ಮವಾಗಿದೆ ಎಂದೇ ಹೇಳಲಾಗುತ್ತದೆ. ಇಷ್ಟೊಂದು ಜನಪ್ರಿಯ ಆಟದಲ್ಲಿ ದೇಶದ ತಂಡವನ್ನು ಪ್ರತಿನಿಧಿಸುವುದು ಒಂದು ಹೆಮ್ಮೆಯಾದರೆ, ಆ ತಂಡದ ಮುಂದಾಳತ್ವ ವಹಿಸುವುದು ಇನ್ನಷ್ಟೂ ಹೆಚ್ಚಿನ ಜವಾಬ್ದಾರಿ ಮತ್ತು ಗೌರವದ ಅಂಶವಾಗಿದೆ. ಟೀಮ್​ ಇಂಡಿಯಾ ಹಲವಾರು ನಾಯಕರನ್ನು ಕಂಡಿದೆ. ಹಿಟ್​​ ಮ್ಯಾನ್​ ರೋಹಿತ್​ ಶರ್ಮಾ ಪ್ರಸ್ತುತ ಮೂರು ಮಾದರಿಯ ನಾಯಕತ್ವವನ್ನು ಯಶಸ್ವಿಯಾಗಿ ನಿಬಾಯಿಸುತ್ತಿದ್ದಾರೆ.

ರೋಹಿತ್​ ನಾಯಕತ್ವಕ್ಕೆ ಇಂದು ವಿಶೇಷತೆ ಇದೆ. ಅದು ಅವರ ನಾಯಕತ್ವದ ಅಡಿಯಲ್ಲಿ ಟೀಮ್​ ಇಂಡಿಯಾ 100ನೇ ಪಂದ್ಯವನ್ನು ಆಡುತ್ತಿರುವುದು. ವಿಶ್ವಕಪ್​ನಲ್ಲಿ ಇಂದು ಇಂಗ್ಲೆಂಡ್​ ವಿರುದ್ಧ ಭಾರತ ಲಖನೌನ ಏಕನಾ ಕ್ರೀಡಾಂಗಣದಲ್ಲಿ ಆಡುತ್ತಿದೆ. ವಿಶ್ವಕಪ್​ ಲೀಗ್​ನಲ್ಲಿ ಸತತ 5 ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ಪ್ಲೇ-ಆಫ್ ಪ್ರವೇಶ ಖಚಿತ ಪಡಿಸಿಕೊಳ್ಳಲು ಜಯ ಪ್ರಮುಖವಾಗುತ್ತದೆ.

ವಿರಾಟ್​ ಕೊಹ್ಲಿ ತಂಡದ ನಾಯಕತ್ವವನ್ನು ತೊರೆದ ನಂತರ ರೋಹಿತ್​ ಶರ್ಮಾ ಅವರಿಗೆ ನಾಯಕನಾಗಿ ಪಟ್ಟ ಕಟ್ಟಲಾಯಿತು. ಅಲ್ಲಿಂದ ರೋಹಿತ್​ 100ನೇ ಪಂದ್ಯದ ನಾಯಕತ್ವ ವಹಿಸಿದ್ದಾರೆ. ರೋಹಿತ್ ಶರ್ಮಾ ಅವರು ಎಂಎಸ್ ಧೋನಿ, ಮೊಹಮ್ಮದ್ ಅಜರುದ್ದೀನ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ಕಪಿಲ್ ದೇವ್ ಮತ್ತು ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಂತರ ತಂಡವನ್ನು ಮುನ್ನಡೆಸಿದ ಏಳನೇ ನಾಯಕರಾಗಿದ್ದಾರೆ. ರೋಹಿತ್​ 39 ಏಕದಿನ, 51 ಟಿ20 ಮತ್ತು 9 ಟೆಸ್ಟ್‌ಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ್ದಾರೆ. ಅವರ ಗೆಲುವಿನ ಪ್ರಮಾಣ ಶೇ. 73 ಆಗಿದೆ. ಒಟ್ಟು 99 ಪಂದ್ಯಗಳಲ್ಲಿ ರೋಹಿತ್​ 23 ಪಂದ್ಯಗಳಲ್ಲಿ ಸೋಲು ಕಂಡಿದ್ದು, 2 ಡ್ರಾ ಮತ್ತು 1 ಫಲಿತಾಂಶ ರಹಿತ ಪಂದ್ಯವಾಗಿದೆ.

ಧರ್ಮಶಾಲಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡರು. ಆ ಪಂದ್ಯದಲ್ಲಿ 2 ರನ್​ಗೆ ವಿಕೆಟ್​ ಒಪ್ಪಿಸಿದ್ದರು. ನಂತರದ ಪಂದ್ಯದಲ್ಲಿ ರೋಹಿತ್ ಅಜೇಯ 208 ರನ್ ಗಳಿಸಿದರು, ವೀರೇಂದ್ರ ಸೆಹ್ವಾಗ್ ನಂತರ ಏಕದಿನದಲ್ಲಿ ದ್ವಿಶತಕವನ್ನು ದಾಖಲಿಸಿದ ಎರಡನೇ ನಾಯಕರಾದರು. 2017 ರಲ್ಲಿ ಶ್ರೀಲಂಕಾ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕನಾಗಿ ರೋಹಿತ್ ತಮ್ಮ ಮೊದಲ ಟಿ20 ಶತಕವನ್ನು ಗಳಿಸಿದರು.

ರೋಹಿತ್ ತನ್ನ ಆಟಗಳಲ್ಲಿ ನಾಯಕನಾಗಿ ಎಂಟು ಶತಕಗಳು ಮತ್ತು 24 ಅರ್ಧಶತಕಗಳೊಂದಿಗೆ 3918 ರನ್ ಗಳಿಸಿದ್ದಾರೆ. 'ಹಿಟ್‌ಮ್ಯಾನ್' ಸಾರ್ವಕಾಲಿಕ ಪಟ್ಟಿಯಲ್ಲಿ 187 ಗರಿಷ್ಠ ಸಿಕ್ಸರ್‌ಗಳನ್ನು ಗಳಿಸಿದ್ದಾರೆ. ನಾಯಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇಯಾನ್ ಮಾರ್ಗನ್ (233) ಮತ್ತು ಎಂಎಸ್ ಧೋನಿ (211) ಇವರಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ.

ರೋಹಿತ್ 2018 ಮತ್ತು 2023 ರಲ್ಲಿ ಎರಡು ಏಷ್ಯಾಕಪ್​ನಲ್ಲಿ ತಂಡ ನಾಯಕತ್ವ ವಹಿಸಿದರು. 2023ರಲ್ಲಿ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. 2018 ರಲ್ಲಿ ನಿದಾಹಾಸ್ ಟ್ರೋಫಿ ವಿಜಯದತ್ತ ಮುನ್ನಡೆಸಿದರು. ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ರೋಹಿತ್​ ಕ್ಯಾಪ್ಟನ್ಸಿ ಅಡಿಯಲ್ಲಿ ತಂಡ ರನ್ನರ್​ ಅಪ್​ ಆಯಿತು. 2022 ರ ಟಿ20 ವಿಶ್ವಕಪ್‌ನ ತಂಡ ಸೆಮಿಫೈನಲ್‌ ವರೆಗೆ ಯಶಸ್ವಿಯಾಗಿ ಸಾಗಿತ್ತು.

ಇದನ್ನೂ ಓದಿ: ವಿಶ್ವಕಪ್ ಬಿಗ್​ ಫೈಟ್: ಟಾಸ್​ ಗೆದ್ದ ಇಂಗ್ಲೆಂಡ್ ಬೌಲಿಂಗ್​ ಆಯ್ಕೆ,​ ನಾಯಕನಾಗಿ ರೋಹಿತ್​ಗೆ 100ನೇ ಪಂದ್ಯ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.