ದಿ ಓವೆಲ್(ಇಂಗ್ಲೆಂಡ್): ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಬ್ಯಾಟಿಂಗ್ ಮಾಡ್ತಿದ್ದ ರೋಹಿತ್ ಶರ್ಮಾ ಸಿಡಿಸಿರುವ ಸಿಕ್ಸರ್ವೊಂದು ಪುಟಾಣಿಗೆ ಬಿದ್ದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಪುಟಾಣಿಯನ್ನ ಹಿಟ್ಮ್ಯಾನ್ ಭೇಟಿ ಮಾಡಿದ್ದು, ಆರೋಗ್ಯ ವಿಚಾರಿಸಿದ್ದಾರೆಂದು ತಿಳಿದು ಬಂದಿದೆ. ಲಂಡನ್ನ ದಿ ಓವೆಲ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಜೇಯ 76 ರನ್ಗಳಿಕೆ ಮಾಡಿದ ಈ ಪ್ಲೇಯರ್ ಭರ್ಜರಿ ಹೊಡೆತಗಳ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದರು.
- — Guess Karo (@KuchNahiUkhada) July 12, 2022 " class="align-text-top noRightClick twitterSection" data="
— Guess Karo (@KuchNahiUkhada) July 12, 2022
">— Guess Karo (@KuchNahiUkhada) July 12, 2022
ಡೇವಿಡ್ ವಿಲ್ಲಿ ಎಸೆದ ಓವರ್ನಲ್ಲಿ ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ರೋಹಿತ್ ಭರ್ಜರಿ ಸಿಕ್ಸರ್ ಹೊಡೆದಿದ್ದರು. ಅದು ನೇರವಾಗಿ ಸ್ಟ್ಯಾಂಡ್ನಲ್ಲಿ ಕುಳಿತಿದ್ದ 6 ವರ್ಷದ ಪುಟಾಣಿಗೆ ಬಿದ್ದಿತ್ತು. ಇದು ಕ್ಯಾಮೆರಾದಲ್ಲಿ ಸಹ ಸೆರೆಯಾಗಿತ್ತು. ತಕ್ಷಣವೇ ಇಂಗ್ಲೆಂಡ್ ತಂಡದ ಫಿಸಿಯೋ ಹಾಗೂ ತಂಡದ ವೈದ್ಯರು ಬಾಲಕಿ ಬಳಿಗೆ ಹೋಗಿ, ತಪಾಸಣೆ ನಡೆಸಿದ್ದರು. ಇದು ರೋಹಿತ್ ಶರ್ಮಾ ಗಮನಕ್ಕೆ ಬಂದಿದೆ.
-
Shoutout to the @englandcricket physios yesterday 🙌
— England’s Barmy Army (@TheBarmyArmy) July 13, 2022 " class="align-text-top noRightClick twitterSection" data="
6 year-old Meera was hit by a Rohit Sharma six in the crowd and they quickly rushed round to check on her.
She was okay and even received a visit off Sharma himself later in the day!#ENGvIND pic.twitter.com/mbvOsoT6lQ
">Shoutout to the @englandcricket physios yesterday 🙌
— England’s Barmy Army (@TheBarmyArmy) July 13, 2022
6 year-old Meera was hit by a Rohit Sharma six in the crowd and they quickly rushed round to check on her.
She was okay and even received a visit off Sharma himself later in the day!#ENGvIND pic.twitter.com/mbvOsoT6lQShoutout to the @englandcricket physios yesterday 🙌
— England’s Barmy Army (@TheBarmyArmy) July 13, 2022
6 year-old Meera was hit by a Rohit Sharma six in the crowd and they quickly rushed round to check on her.
She was okay and even received a visit off Sharma himself later in the day!#ENGvIND pic.twitter.com/mbvOsoT6lQ
ಇದನ್ನೂ ಓದಿರಿ: ENG vs IND: ಏಕದಿನ ಪಂದ್ಯಗಳಲ್ಲಿ 250 ಸಿಕ್ಸರ್ ಸಿಡಿಸಿ ದಾಖಲೆ ಬರೆದ ರೋಹಿತ್ ಶರ್ಮಾ
ಪಂದ್ಯ ಮುಕ್ತಾಯಗೊಂಡ ಬಳಿಕ ನೇರವಾಗಿ ಬಾಲಕಿ ಬಳಿ ತೆರಳಿರುವ ರೋಹಿತ್ ಶರ್ಮಾ, ಆಕೆಯ ಆರೋಗ್ಯ ವಿಚಾರಿಸಿದ್ದಾರೆ. ಇದರ ಬಗ್ಗೆ ಇಂಗ್ಲೆಂಡ್ನ ಬಾರ್ಮಿ ಆರ್ಮಿ ಮಾಹಿತಿ ಹಂಚಿಕೊಂಡಿದೆ. ದಿ ಓವೆಲ್ ಮೈದಾನದಲ್ಲಿ ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ 10 ವಿಕೆಟ್ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.