ETV Bharat / sports

Rohit Sharma: ಪತ್ನಿಗಾಗಿ ಸಮುದ್ರಕ್ಕೆ ಹಾರಿದ ರೋಹಿತ್ ಶರ್ಮಾ! ಯಾಕೆ ಗೊತ್ತೇ? - ETV Bharath Kannada news

ಟೆಸ್ಟ್​ ಚಾಂಪಿಯನ್​ಶಿಪ್ ನಂತರ ವೆಸ್ಟ್​ ಇಂಡೀಸ್​ ಪ್ರವಾಸದ ನಡುವೆ ಭಾರತ ತಂಡದ ಆಟಗಾರರಿಗೆ ಒಂದು ತಿಂಗಳ ಬಿಡುವು ನೀಡಲಾಗಿದ್ದು, ನಾಯಕ ರೋಹಿತ್​ ಶರ್ಮಾ ಕುಟುಂಬದ ಜೊತೆ ಜಾಲಿ ಮೂಡ್​ನಲ್ಲಿದ್ದಾರೆ.

Rohit Sharma
ರೋಹಿತ್​ ಶರ್ಮಾ
author img

By

Published : Jun 16, 2023, 8:09 PM IST

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋತ ನಂತರ ಬಿಸಿಸಿಐ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ನೀಡಿದೆ. ಟೀಂ ಇಂಡಿಯಾದ ಎಲ್ಲ ಆಟಗಾರರು ಈ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರು ಪತ್ನಿ ರಿತಿಕಾ ಸಜ್ದೇಹ್ ಮತ್ತು ಸಮೈರಾ ಅವರೊಂದಿಗೆ ವಿದೇಶಿ ಪ್ರವಾಸದಲ್ಲಿ ಸಮಯ ಕಳೆಯುತ್ತಿದ್ದಾರೆ.

ರೋಹಿತ್ ಮತ್ತು ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ, ರಿತಿಕಾ ಸಜ್ದೇಹ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ರೋಹಿತ್ ಅವರ ವೀಡಿಯೊ ಹಂಚಿಕೊಂಡಿದ್ದಾರೆ. ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇನ್​​ಸ್ಟಾಗ್ರಾಮ್​ನ ಸ್ಟೋರಿಯಲ್ಲಿ ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಬಳಲಿದವರ ರೀತಿ ಸಮುದ್ರದ ಮೇಲೆ ನಿರ್ಮಿಸಲಾದ ಮರದ ಸೇತುವೆಯಲ್ಲಿ ನಿಂತಿದ್ದಾರೆ. ವೀಡಿಯೊ ಕೆಳಬರಹದಲ್ಲಿ ನನ್ನ ಫೋನ್ ಸಮುದ್ರದಲ್ಲಿ ಬಿದ್ದಿದೆ, ಅದನ್ನು ಉಳಿಸಲು ರೋಹಿತ್ ಸಮುದ್ರಕ್ಕೆ ಹಾರಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇಂಗ್ಲೆಂಡ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ಸೋಲನುಭವಿಸಿದ ನಂತರ ರೋಹಿತ್​ ಶರ್ಮಾ ಅವರ ನಾಯಕತ್ವದ ಮೇಲೆ ಟೀಕೆಗಳು ಕೇಳಿಬರುತ್ತಿವೆ. ಐಸಿಸಿ ನಡೆಸುವ ಎರಡನೇ ಟ್ರೋಫಿಯನ್ನು ಭಾರತ ರೋಹಿತ್​ ಮುಂದಾಳತ್ವದಲ್ಲಿ ಕಳೆದುಕೊಂಡಿದೆ. ಇದಲ್ಲದೇ ರೋಹಿತ್​ ಶರ್ಮಾರ ಕಳಪೆ ಫಾರ್ಮ್​ ಕೂಡಾ ಚರ್ಚೆಯಾಗುತ್ತಿದೆ.

Rohit Sharma jumped into sea
ಕುಟುಂಬದ ಜೊತೆ ಜಾಲಿ ಮೂಡ್​ನಲ್ಲಿರುವ ರೋಹಿತ್​ ಶರ್ಮಾ

16ನೇ ಆವೃತ್ತಿಯ 2023ರ ಐಪಿಎಲ್​ನಲ್ಲಿ ರೋಹಿತ್ ಶರ್ಮಾ 16 ಪಂದ್ಯಗಳನ್ನು ಆಡಿದ್ದು, ಆರಂಭಿಕರಾಗಿ 20.75 ರ ಸರಾಸರಿಯಲ್ಲಿ ಎರಡು ಅರ್ಧಶತಕದಿಂದ 332 ರನ್ ಮಾತ್ರ ಗಳಿಸಿದ್ದಾರೆ. ಇಂಗ್ಲೆಂಡ್​ನ ಓವಲ್​ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಒಂದು ಇನ್ನಿಂಗ್ಸ್​ನಲ್ಲಿ 15, ಮತ್ತೊಂದರಲ್ಲಿ 43 ರನ್‌ಗಳಿಗೆ ಔಟಾಗಿದ್ದು, ಟೀಕೆಗೆ ಗುರಿಯಾಗಿತ್ತು. ಮಹತ್ವದ ಪಂದ್ಯದಲ್ಲಿ ಜವಾಬ್ದಾರಿಯುತ ಆಟ ಕಂಡುಬಂದಿಲ್ಲ ಎಂದು ಮಾಜಿ ಆಟಗಾರರು ಕೂಡಾ ಹರಿಹಾಯ್ದಿದ್ದಾರೆ.

ಭಾರತ ಕ್ರಿಕೆಟ್ ತಂಡ ಜುಲೈ 12 ರಿಂದ ಆಗಸ್ಟ್ 13 ರವರೆಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರಲಿದೆ. ಅಲ್ಲಿ ಅವರು 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ. ಮುಂದಿನ ಎರಡು ವರ್ಷದಲ್ಲಿ ನಡೆಯಲಿರುವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಈ ಸರಣಿಯಿಂದಲೇ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಿರುವ ಕಾರಣ ಪ್ರತಿ ಪಂದ್ಯವೂ ಮುಖ್ಯವಾಗಲಿದೆ.

Rohit Sharma jumped into sea
ಪತ್ನಿ ರಿತಿಕಾಗಾಗಿ ಸಮುದ್ರಕ್ಕೆ ಹಾರಿದ ರೋಹಿತ್ ಶರ್ಮಾ

ಇದರ ನಂತರ, ಏಷ್ಯಾ ಕಪ್ 2023 ಅನ್ನು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ಆಯೋಜಿಸಲಾಗುತ್ತದೆ. ಭಾರತ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸುವುದಿಲ್ಲ ಎಂದು ಹೇಳಿರುವ ಕಾರಣ ಭಾರತ ಜೊತೆಗಿನ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಇದರಿಂದ 9 ಪಂದ್ಯ ಶ್ರೀಲಂಕಾದಲ್ಲಿ ಮತ್ತು 4 ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿದೆ. ಏಷ್ಯಾ ಕಪ್​ಗೆ ಶ್ರೀಲಂಕಾ ತೆರಳುವ ಮುನ್ನ ಭಾರತ ಐರ್ಲೆಂಡ್ ಪ್ರವಾಸ ಮಾಡುವ ಪ್ರಸ್ತಾವನೆ ಇದೆ.

ಇದನ್ನೂ ಓದಿ : Asia Cup 2023: ಏಷ್ಯಾ ಕಪ್​ಗೆ ಮರಳುವರೇ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.