ವಾಷಿಂಗ್ಟನ್ (ಯುಎಸ್): ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶಕಪ್ ಆಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ 10 ವಿಕೆಟ್ಗಳ ಸೋಲು ಕಂಡು ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. ಈ ಪಂದ್ಯದ ನಂತರ ಭಾರತ ತಂಡ ಆಡಿದ ಟಿ20 ಪಂದ್ಯಗಳಲ್ಲಿ ಶರ್ಮಾ ಕಾಣಿಸಿಕೊಂಡಿಲ್ಲ. ಆಲ್ರೌಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲೇ ಮೆನ್ ಇನ್ ಬ್ಲೂ ಸರಣಿಗಳನ್ನು ಆಡುತ್ತಿದೆ. ಟಿ20 ತಂಡದಲ್ಲಿ ಯುವ ಪ್ರತಿಭೆಗಳಾದ ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಹಾಗು ದೀಪಕ್ ಹೂಡಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ವಿಶ್ವಕಪ್ ನಂತರ ಅನುಭವಿ ಬ್ಯಾಟರ್ಗಳಾದ ವಿರಾಟ್ ಮತ್ತು ರೋಹಿತ್ ಟಿ20 ಪಂದ್ಯದಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಆದರೆ ಟ್ವಿಟರ್ನಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ ರೋಹಿತ್ ಶರ್ಮಾ ಮುಂಬರುವ ಟಿ20 ವಿಶ್ವಕಪ್ನಲ್ಲಿ ಆಡಲು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ವಿಶ್ರಾಂತಿಯಲ್ಲಿರುವ ರೋಹಿತ್ ಸದ್ಯ ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ ಮಾತನಾಡಿರುವ ವಿಡಿಯೋದಲ್ಲಿ,"ಅಮೆರಿಕಕ್ಕೆ ನಾನು ಎಂಜಾಯ್ ಮಾಡಲು ಬಂದಿಲ್ಲ. ಇನ್ನೊಂದು ಕಾರಣವೂ ಇದೆ. ಮುಂದಿನ ಜೂನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಉತ್ಸುಕರಾಗಿದ್ದಾರೆ, ನಾನು ಟೂರ್ನಿಯನ್ನು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.
-
Rohit Sharma said - More than just going & enjoying there is an other reason to come here. Bcoz you knw the WC is coming, In June there will be T20 World Cup(2024) happening, I'm pretty sure everyone is excited. We look forward to that.
— 𝐂𝐡𝐚𝐢𝐭𝐡𝐮 🇮🇳 (@ChaitRo45) August 6, 2023 " class="align-text-top noRightClick twitterSection" data="
Great News for all #RohitSharma𓃵 fans 🥹 pic.twitter.com/w3MNdAE95K
">Rohit Sharma said - More than just going & enjoying there is an other reason to come here. Bcoz you knw the WC is coming, In June there will be T20 World Cup(2024) happening, I'm pretty sure everyone is excited. We look forward to that.
— 𝐂𝐡𝐚𝐢𝐭𝐡𝐮 🇮🇳 (@ChaitRo45) August 6, 2023
Great News for all #RohitSharma𓃵 fans 🥹 pic.twitter.com/w3MNdAE95KRohit Sharma said - More than just going & enjoying there is an other reason to come here. Bcoz you knw the WC is coming, In June there will be T20 World Cup(2024) happening, I'm pretty sure everyone is excited. We look forward to that.
— 𝐂𝐡𝐚𝐢𝐭𝐡𝐮 🇮🇳 (@ChaitRo45) August 6, 2023
Great News for all #RohitSharma𓃵 fans 🥹 pic.twitter.com/w3MNdAE95K
ಅನುಭವಿ ಬ್ಯಾಟರ್ ರೋಹಿತ್: ಭಾರತ ಟಿ20 ತಂಡ ಬದಲಾವಣೆಯ ಹಂತದಲ್ಲಿದೆ. ಚುಟುಕು ಕ್ರಿಕೆಟ್ನಲ್ಲಿ ಹೆಚ್ಚು ಯುವ ಬ್ಯಾಟರ್ಗಳಿಗೆ ಮತ್ತು ಐಪಿಎಲ್ ಪ್ರತಿಭೆಗಳಿಗೆ ಸ್ಥಾನ ನೀಡಲಾಗುತ್ತಿದೆ. ಆದರೂ ಅನುಭವಿ ಬ್ಯಾಟರ್ ರೋಹಿತ್‌ರನ್ನು ಈ ಮಾದರಿಯಲ್ಲಿ ಕಡೆಗಣಿಸಲಾಗದು. 148 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 31.32ರ ಸರಾಸರಿಯನ್ನು ಅವರು ಕಾಯ್ದುಕೊಂಡಿದ್ದು, 139.24 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 3,853 ರನ್ ಗಳಿಸಿದ್ದಾರೆ. ನಾಲ್ಕು ಶತಕ ಮತ್ತು 29 ಅರ್ಧಶತಕಗಳನ್ನು ಹೊಂದಿದ್ದು, 118 ಅವರ ಅತ್ಯುತ್ತಮ ಸ್ಕೋರ್ ಆಗಿದೆ.
ಟಿ20 ಫಾರ್ಮ ಕಳೆದುಕೊಂಡಿದ್ದಾರಾ ಹಿಟ್ ಮ್ಯಾನ್?: ವಿರಾಟ್ ನಂತರ (115 ಪಂದ್ಯಗಳಲ್ಲಿ 52.73 ಸರಾಸರಿಯಲ್ಲಿ 4,008 ರನ್ ಮತ್ತು ಒಂದು ಶತಕ ಮತ್ತು 37 ಅರ್ಧಶತಕಗಳು) ಟಿ20 ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ರೋಹಿತ್ ಆಗಿದ್ದಾರೆ. 2022ರಲ್ಲಿ ಟಿ20 ಪಂದ್ಯಗಳು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಲ್ಲಿ ರೋಹಿತ್ ಅವರ ಅಂಕಿಅಂಶಗಳ ಆಧಾರದಲ್ಲಿ ಅವರಿಗೆ ತಂಡದಲ್ಲಿ ಮತ್ತೆ ಸ್ಥಾನ ಸಿಗುವುದು ಅನುಮಾನವಾಗಿದೆ.
ಇದನ್ನೂ ಓದಿ: IND vs WI 2nd T20: ಮೊದಲ ಪಂದ್ಯದ ಸೋಲಿನ ಸೇಡು ತೀರಿಸಲು ಹಾರ್ದಿಕ್ ಪಡೆ ರೆಡಿ.. ಅಬ್ಬರಿಸಬೇಕಿದೆ ಐಪಿಎಲ್ ಸ್ಟಾರ್ಸ್