ETV Bharat / sports

T20I Record: ಟಿ-20 ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ದಾಖಲೆ ಮುರಿದ ರೋಹಿತ್​ ಶರ್ಮಾ

author img

By

Published : Nov 22, 2021, 9:10 AM IST

Updated : Nov 22, 2021, 9:33 AM IST

ಭಾರತ ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಅಂತಿಮ ಟಿ -20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್​ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

Rohit Sharma breaks Virat Kohli's record in T20 Internationals
T20I Record: ಟಿ20 ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ದಾಖಲೆ ಮುರಿದ ರೋಹಿತ್​ ಶರ್ಮಾ

ಕೋಲ್ಕತ್ತಾ: ಭಾರತ ತಂಡದ ನಾಯಕ ರೋಹಿತ್ ಶರ್ಮಾ(Team india T20I captain Rohit Sharma) ಕೋಲ್ಕತ್ತಾದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಮೂರನೇ ಮತ್ತು ಅಂತಿಮ ಟಿ - 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್​ ಕೊಹ್ಲಿ(Virat kohli) ದಾಖಲೆ ಮುರಿದರು. T-20ಯಲ್ಲಿ ಅತಿ ಹೆಚ್ಚು 50 ಪ್ಲಸ್ ಮೊತ್ತ ಬಾರಿಸಿದ ಶ್ರೇಯಕ್ಕೆ ಅವರು ಪಾತ್ರರಾದರು.

ನಿನ್ನೆಯ ಪಂದ್ಯದಲ್ಲಿ ರೋಹಿತ್​ 31 ಎಸೆತಗಳಲ್ಲಿ 56 ರನ್​ ಗಳಿಸಿದರು. ಇದು ಅವರ 30ನೇ ಅರ್ಧಶತಕವಾಗಿದ್ದು, ವಿರಾಟ್ ಕೊಹ್ಲಿ(29) ಅವರಿಗಿಂತ ಹೆಚ್ಚು ಬಾರಿ ಈ ಸಾಧನೆ(T20 International record) ಮಾಡಿದಂತಾಗಿದೆ. ಸದ್ಯ ವಿರಾಟ್ ಟಿ-20​ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಕೊಹ್ಲಿ 95 ಪಂದ್ಯಗಳಿಂದ 52.04 ಸರಾಸರಿಯಲ್ಲಿ 29 ಅರ್ಧಶತಕಗಳೊಂದಿಗೆ 3,227 ರನ್‌ ಪೇರಿಸಿದ್ದಾರೆ.

ಅಲ್ಲದೆ ರೋಹಿತ್​ ನಿನ್ನೆ, ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ 150 ಸಿಕ್ಸರ್‌ ಬಾರಿಸಿದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಹಿಟ್‌ಮ್ಯಾನ್ ಪ್ರಸ್ತುತ 119 ಪಂದ್ಯಗಳಿಂದ 150 ಸಿಕ್ಸರ್‌ ಸಿಡಿಸಿದ್ದು, ನ್ಯೂಜಿಲ್ಯಾಂಡ್​ನ ಗಪ್ಟಿಲ್ 112 ಪಂದ್ಯಗಳಿಂದ 161 ಸಿಕ್ಸರ್‌ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: NZ VS IND: ಹರ್ಷಲ್​, ವೆಂಕಟೇಶ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಾಯಕ ರೋಹಿತ್​

Last Updated : Nov 22, 2021, 9:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.