ಸೌತಾಂಪ್ಟನ್ (ಯುನೈಟೆಡ್ ಕಿಂಗಡಮ್): ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ 13 ಜಯ ದಾಖಲಿಸಿದ ಮೊದಲ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಹೊರಹೊಮ್ಮಿದ್ದಾರೆ. ಇಲ್ಲಿ ಗುರುವಾರ ಇಂಗ್ಲೆಂಡ್ ವಿರುದ್ಧ ನಡೆದ ಟಿ-20 ಪಂದ್ಯವನ್ನು ಗೆಲ್ಲುವ ಮೂಲಕ ರೋಹಿತ್ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಇದಾಗಿತ್ತು.
ವಿರಾಟ್ ಕೊಹ್ಲಿ ಅವರಿಂದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ನಂತರ ರೋಹಿತ್ ಶರ್ಮಾ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಈಗ ಇಂಗ್ಲೆಂಡ್ ತಂಡಗಳ ವಿರುದ್ಧ ತಂಡವನ್ನು ಜಯದ ದಡ ಮುಟ್ಟಿಸಿದ್ದಾರೆ.
-
🚨 Milestone Alert 🚨
— BCCI (@BCCI) July 7, 2022 " class="align-text-top noRightClick twitterSection" data="
First captain to win 1⃣3⃣ successive T20Is - Congratulations, @ImRo45. 👏 👏#TeamIndia | #ENGvIND pic.twitter.com/izEGfIfFTn
">🚨 Milestone Alert 🚨
— BCCI (@BCCI) July 7, 2022
First captain to win 1⃣3⃣ successive T20Is - Congratulations, @ImRo45. 👏 👏#TeamIndia | #ENGvIND pic.twitter.com/izEGfIfFTn🚨 Milestone Alert 🚨
— BCCI (@BCCI) July 7, 2022
First captain to win 1⃣3⃣ successive T20Is - Congratulations, @ImRo45. 👏 👏#TeamIndia | #ENGvIND pic.twitter.com/izEGfIfFTn
ಈ ಮುನ್ನ, ಕೋವಿಡ್ ಸೋಂಕು ತಗುಲಿದ ಕಾರಣದಿಂದ ರೋಹಿತ್ ಶರ್ಮಾ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ನಲ್ಲಿ ಆಡುವುದರಿಂದ ವಂಚಿತರಾಗಿದ್ದರು. ಇಂದು ಗೆಲುವು ಪಡೆದ ಪಂದ್ಯದತ್ತ ನೋಡುವುದಾದರೆ, ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದಿಂದ ಭಾರತವು ಮೊದಲ ಇನ್ನಿಂಗ್ಸ್ನಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತ್ತು. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಕ್ರಮವಾಗಿ 24, 39 ಮತ್ತು 33 ರನ್ ಗಳಿಸಿದರು.
ಇಂಗ್ಲೆಂಡ್ ಪರವಾಗಿ ಮೋಯಿನ್ ಅಲಿ ಮತ್ತು ಕ್ರಿಸ್ ಜೋರ್ಡಾನ್ ತಲಾ ಎರಡು ವಿಕೆಟ್ ಪಡೆದರು. ಟೊಪ್ಲೇ, ಟೈಮಲ್ ಮಿಲ್ಸ್ ಮತ್ತು ಪಾರ್ಕಿನ್ಸನ್ ತಲಾ ಒಂದು ವಿಕೆಟ್ ಪಡೆದರು.
ಭಾರತದ ಪರವಾಗಿ, ಅರ್ಶದೀಪ್ ಸಿಂಗ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ತಲಾ ಎರಡು ವಿಕೆಟ್ ಹಾಗೂ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು 148ಕ್ಕೆ ಆಲೌಟ್ ಮಾಡಿದರು. ಸರಣಿಯ ಎರಡನೇ ಪಂದ್ಯವು ಬರ್ಮಿಂಗ್ಹ್ಯಾಮ್ನಲ್ಲಿ ಭಾನುವಾರ ನಡೆಯಲಿದೆ.
ಇದನ್ನು ಓದಿ: ಮೆಲ್ಬೋರ್ನ್ 2022ರ ಭಾರತೀಯ ಚಲನಚಿತ್ರೋತ್ಸವದಲ್ಲಿ ಗೌರವ ಅತಿಥಿಯಾಗಿ ಕಪಿಲ್ ದೇವ್