ಅಬುದಾಭಿ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುರುವಾರ ಅಬುಧಾಬಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಮಹತ್ವದ 2 ದಾಖಲೆ ಬರೆದರು.
ಮೊದಲ ಪಂದ್ಯದಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದ ಶರ್ಮಾ ಇಂದಿನ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿಕೊಳ್ಳಲು ವಿಫಲರಾದರು. ಆದರೂ ಕೆಕೆಆರ್ ವಿರುದ್ಧ 1000 ರನ್ ಸಿಡಿಸಿದ ಮೊದಲ ಬ್ಯಾಟರ್ ಹಾಗೂ ಐಪಿಎಲ್ನಲ್ಲಿ 5500 ರನ್ ಪೂರೈಸಿದ 3ನೇ ಬ್ಯಾಟರ್ ಎಂಬ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಈ ಪಂದ್ಯದಲ್ಲಿ 18 ರನ್ಗಳಿಸುತ್ತಿದ್ದಂತೆ ಕೆಕೆಆರ್ ವಿರುದ್ಧ 1000 ರನ್ ಪೂರೈಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ 1000 ರನ್ ಸಿಡಿಸಿದ ಮೊದಲ ದಾಂಡಿಗ ಎಂಬ ಶ್ರೇಯ ಅವರದ್ದಾಯ್ತು.
ಒಂದೇ ತಂಡದ ವಿರುದ್ಧ ಗರಿಷ್ಠ ರನ್ಗಳಿಸಿದವರ ಪಟ್ಟಿ:
- ರೋಹಿತ್ ಶರ್ಮಾ vs ಕೆಕೆಆರ್ 1000 ರನ್
- ಡೇವಿಡ್ ವಾರ್ನರ್ vs ಪಂಜಾಬ್ 943 ರನ್
- ವಿರಾಟ್ ಕೊಹ್ಲಿ vs ಡೆಲ್ಲಿ 909 ಮತ್ತು
- ಸಿಎಸ್ಕೆ ವಿರುದ್ಧ 895 ರನ್
- ಎಂ.ಎಸ್.ಧೋನಿ vs ಆರ್ಸಿಬಿ - 825
- ಸುರೇಶ್ ರೈನಾ vs ಮುಂಬೈ ಇಂಡಿಯನ್ಸ್- 824
- ಎಬಿಡಿ ವಿಲಿಯರ್ಸ್ vs ರಾಜಸ್ಥಾನ್ - 648
- ಶೇನ್ ವಾಟ್ಸನ್ vs ಹೈದರಾಬಾದ್- 566 ರನ್
ರೈನಾ ಹಿಂದಿಕ್ಕಿದ 5500 ರನ್ ಪೂರೈಸಿದ ಹಿಟ್ಮ್ಯಾನ್:
5480 ರನ್ಗಳಿಸಿದ್ದ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ 16 ರನ್ಗಳಿಸುತ್ತಿದ್ದಂತೆ ಐಪಿಎಲ್ನಲ್ಲಿ ಗರಿಷ್ಠ ರನ್ಗಳಿಸಿದ ಬ್ಯಾಟರ್ಗಳ ಲಿಸ್ಟ್ನಲ್ಲಿ ರೈನಾರನ್ನು (5495) ಹಿಂದಿಕ್ಕಿ 3ನೇ ಸ್ಥಾನಕ್ಕೇರಿದರು. ಇದರ ಜೊತೆಗೆ 20 ರನ್ಗಳಿಸುತ್ತಿದ್ದಂತೆ ಕೊಹ್ಲಿ(6081), ಧವನ್(5619) ನಂತರ ಐಪಿಎಲ್ನಲ್ಲಿ 5500 ರನ್ಗಳಿಸಿ 3ನೇ ಬ್ಯಾಟರ್ ಎನಿಸಿಕೊಂಡರು.
ಇದನ್ನೂ ಓದಿ: ಭಾರತ ಪಾಕಿಸ್ತಾನದ ಸ್ಥಿತಿ ಒಂದೇ, ಆದ್ರೆ ಪಾಕ್ ಎಲ್ಲರಿಗೂ ಸುಲಭದ ಟಾರ್ಗೆಟ್ ಆಗಿದೆ: ಉಸ್ಮಾನ್ ಖವಾಜ