ದುಬೈ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದ್ದಾರೆ. ಆದರೆ, ರೇಟಿಂಗ್ ಅಂಕಗಳನ್ನು ಹೆಚ್ಚಿಸಿಕೊಂಡು 2ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಕೆಲವು ಮೌಲ್ಯಯುತ ಅಂಕಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರ ಬಳಿ 907 ಅಂಕಗಳಿದ್ದರೆ, ಕೊಹ್ಲಿ 827 ರೇಟಿಂಗ್ ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್(873) ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಕ್ವಿಂಟನ್ ಡಿಕಾಕ್(783), ಆ್ಯರೋನ್ ಫಿಂಚ್(779), ಜಾನಿ ಬೈರ್ಸ್ಟೋವ್(775), ಡೇವಿಡ್ ವಾರ್ನರ್(762), ರಾಸಿ ವ್ಯಾನ್ ಡರ್ ಡಾಸೆನ್(750), ಫಖರ್ ಜಮಾನ್ (741) ಜೋ ರೂಟ್(740) ಟಾಪ್ 10ರಲ್ಲಿದ್ದಾರೆ.
-
🔹 Babar Azam still at the top
— ICC (@ICC) February 9, 2022 " class="align-text-top noRightClick twitterSection" data="
🔹 Rohit Sharma closes in on Virat Kohli
🔹 Fakhar Zaman and Joe Root sneak into the top 10
Here’s how things stand after the latest update to the @MRFWorldwide ICC Men's ODI Player Rankings for batters 📈
More details 👉 https://t.co/gkPWgLbUCq pic.twitter.com/JOgc1SpQKm
">🔹 Babar Azam still at the top
— ICC (@ICC) February 9, 2022
🔹 Rohit Sharma closes in on Virat Kohli
🔹 Fakhar Zaman and Joe Root sneak into the top 10
Here’s how things stand after the latest update to the @MRFWorldwide ICC Men's ODI Player Rankings for batters 📈
More details 👉 https://t.co/gkPWgLbUCq pic.twitter.com/JOgc1SpQKm🔹 Babar Azam still at the top
— ICC (@ICC) February 9, 2022
🔹 Rohit Sharma closes in on Virat Kohli
🔹 Fakhar Zaman and Joe Root sneak into the top 10
Here’s how things stand after the latest update to the @MRFWorldwide ICC Men's ODI Player Rankings for batters 📈
More details 👉 https://t.co/gkPWgLbUCq pic.twitter.com/JOgc1SpQKm
ಭಾರತದ ವಿರುದ್ಧ ಮೊದಲ ಪಂದ್ಯದಲ್ಲಿ 8 ರನ್ಗಳಿಗೆ ವಿಕೆಟ್ ಒಪ್ಪಿಸದ ಶಾಯ್ ಹೋಪ್ ಕೆಲವು ಅಂಕಗಳನ್ನು ಕಳೆದುಕೊಂಡು ಅಗ್ರ 10ರಿಂದ ಹೊರ ಬಿದ್ದಿದ್ದಾರೆ.
ಬೌಲರ್ ವಿಭಾಗದ ಟಾಪ್ 10ರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ (737), ಜೋಶ್ ಹೇಜಲ್ವುಡ್ (709) ಇಂಗ್ಲೆಂಡ್ ವೋಕ್ಸ್(700) ಮೊದಲ ಮೂರು ಸ್ಥಾನದಲ್ಲಿದ್ದಾರೆ. ಭಾರತದ ಜಸ್ಪ್ರೀತ್ ಬುಮ್ರಾ(686) ಟಾಪ್ 10ರಲ್ಲಿರುವ ಏಕೈಕ ಭಾರತೀಯನಾಗಿದ್ದು, ಅವರು 7ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ ರ್ಯಾಂಕಿಂಗ್ನಲ್ಲಿ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ರವೀಂದ್ರ ಜಡೇಜಾ 8ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಐಪಿಎಲ್ 2020: ಊಹಾಪೋಹಗಳಿಗೆ ತೆರೆ, ಅಧಿಕೃತ ಹೆಸರು ಪ್ರಕಟಿಸಿದ ಅಹಮದಾಬಾದ್ ಫ್ರಾಂಚೈಸಿ