ಮೊಹಾಲಿ(ಪಂಜಾಬ್): ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲು ಕೆಲ ದಿನಗಳಷ್ಟೇ ಬಾಕಿ. ಹೀಗಿರುವಾಗ ಟೀಂ ಇಂಡಿಯಾ ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಈ ಟೂರ್ನಿಯಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವ ಆಟಗಾರರು ಬಹುತೇಕವಾಗಿ ಟಿ20 ವಿಶ್ವಕಪ್ನಲ್ಲೂ ಕಣಕ್ಕಿಳಿಯಲಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದ್ದು, ಮುಖ್ಯವಾಗಿ ವಿಕೆಟ್ ಕೀಪರ್ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ ಎಂಬುದೀಗ ಕುತೂಹಲ ಮೂಡಿಸಿದೆ.
ಪ್ರಶಸ್ತಿಗೆ ಮುತ್ತಿಕ್ಕುವ ಹುಮ್ಮಸ್ಸಿನಿಂದ ಏಷ್ಯಾಕಪ್ನಲ್ಲಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ನಿರಾಸೆ ಅನುಭವಿಸಿದೆ. ಆದರೆ, ಇದೀಗ ಯಾವುದೇ ರೀತಿಯ ತಪ್ಪುಗಳಾಗದಂತೆ ವಿಶ್ವಕಪ್ಗೆ ರೋಹಿತ್ ಪಡೆ ಸಜ್ಜಾಗುತ್ತಿದೆ. ಮುಖ್ಯವಾಗಿ, ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಆಗಬೇಕಾಗಿದ್ದು ಕೆಲ ಆಟಗಾರರ ಮೇಲಿನ ಜವಾಬ್ದಾರಿಯೂ ಹೆಚ್ಚಾಗಿದೆ.
-
#TeamIndia had their first training session ahead of the #INDvAUS series at the IS Bindra Stadium, Mohali, yesterday.
— BCCI (@BCCI) September 19, 2022 " class="align-text-top noRightClick twitterSection" data="
Snapshots from the same 📸📸 pic.twitter.com/h2g0v85ArH
">#TeamIndia had their first training session ahead of the #INDvAUS series at the IS Bindra Stadium, Mohali, yesterday.
— BCCI (@BCCI) September 19, 2022
Snapshots from the same 📸📸 pic.twitter.com/h2g0v85ArH#TeamIndia had their first training session ahead of the #INDvAUS series at the IS Bindra Stadium, Mohali, yesterday.
— BCCI (@BCCI) September 19, 2022
Snapshots from the same 📸📸 pic.twitter.com/h2g0v85ArH
ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದ್ದು, ವಿರಾಟ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಲಿದ್ದಾರೆ.
ರಿಷಭ್ ಪಂತ್ vs ದಿನೇಶ್ ಕಾರ್ತಿಕ್: ವಿಶ್ವಕಪ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಿಷಭ್ ಅಥವಾ ದಿನೇಶ್ ಕಾರ್ತಿಕ್ಗೆ ಮಣೆ ಹಾಕುವ ಬಗ್ಗೆ ಗೊಂದಲವಿದೆ. ಅನುಭವಿ ಆಟಗಾರ ದಿನೇಶ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಪಂತ್ ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾಗಿದ್ದು, ಒಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ. ಏಷ್ಯಾ ಕಪ್ನ ಪಾಕ್ ವಿರುದ್ಧದ ಪಂದ್ಯದಲ್ಲಿ ದಿನೇಶ್ಗೆ ಅವಕಾಶ ನೀಡಲಾಗಿತ್ತು. ತದನಂತರ ಸೂಪರ್ 4 ಹಂತದಲ್ಲಿ ಪಂತ್ ಆಡಿದ್ದ ಮೂರು ಪಂದ್ಯಗಳಿಂದ ಕೇವಲ 51 ರನ್ಗಳಿಸಿ, ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ದಿನೇಶ್ ಕಾರ್ತಿಕ್ ಯಾವ ಕ್ರಮಾಂಕದಲ್ಲೂ ಬೇಕಾದ್ರೂ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.
ಜಡೇಜಾ ಸ್ಥಾನಕ್ಕೆ ಯಾರು?: ಗಾಯಗೊಂಡು ಹೊರಗುಳಿದಿರುವ ರವೀಂದ್ರ ಜಡೇಜಾ ಅವರ ಸ್ಥಾನಕ್ಕೆ ಎಡಗೈ ಬ್ಯಾಟರ್ ಯಾರು ಎಂಬ ಪ್ರಶ್ನೆಯೆದ್ದಿದೆ. ಸ್ಫೋಟಕ ಆಟಗಾರ ದೀಪಕ್ ಹೂಡಾಗೆ ಯಾವ ಪಾತ್ರ ಸಿಗಲಿದೆ ಎಂಬುದು ಗೊಂದಲ ಮೂಡಿಸಿದೆ. ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಹರ್ಷಲ್ ತಂಡಕ್ಕೆ ಮರಳಿರುವುದು ಬೌಲಿಂಗ್ ವಿಭಾಗದ ಶಕ್ತಿ ಹೆಚ್ಚಿಸಿದೆ. ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಹಲ್ ಜೊತೆ ಯಾರು ಕಣಕ್ಕಿಳಿಯಲಿದ್ದಾರೆಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಸರಣಿ: ಮಧ್ಯಮ ಕ್ರಮಾಂಕ, ಬೌಲಿಂಗ್ ಪಡೆಗೆ ಬೇಕು ಬಲ
ಅನುಭವಿಗಳ ಅನುಪಸ್ಥಿತಿಯಲ್ಲಿ ಕಾಂಗರೂ ಪಡೆ: ಡೇವಿಡ್ ವಾರ್ನರ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮಿಚೆಲ್ ಮಾರ್ಷ್ ಅವರ ಅನುಪಸ್ಥಿತಿಯಲ್ಲಿ ಆ್ಯರನ್ ಫಿಂಚ್ ಬಳಗ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಫಿಂಚ್ಗೆ ಈ ಸರಣಿ ಮಹತ್ವದ್ದು. ಸ್ಫೋಟಕ ಹೊಡೆತಕ್ಕೆ ಹೆಸರಾಗಿರುವ ಟಿಮ್ ಡೇವಿಡ್ ಮೇಲೆ ಎಲ್ಲರ ಕಣ್ಣಿದೆ. ಸಿಂಗಪೂರ ಪರ ಕಣಕ್ಕಿಳಿಯುತ್ತಿದ್ದ ಈ ಆಟಗಾರನಿಗೆ ಆಸ್ಟ್ರೇಲಿಯಾ ಚೊಚ್ಚಲ ಅವಕಾಶ ನೀಡಿದೆ.
ಟೀಂ ಇಂಡಿಯಾ ತಂಡ: ರೋಹಿತ್ ಶರ್ಮಾ(ಕ್ಯಾಪ್ಟನ್), ಕೆ.ಎಲ್.ರಾಹುಲ್(ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್(ವಿ.ಕೀ), ದಿನೇಶ್ ಕಾರ್ತಿಕ್(ವಿ.ಕೀ), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್.