ಕೇಪ್ ಟೌನ್: ಭಾರತದ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ದ.ಆಫ್ರಿಕಾ ವಿರುದ್ಧದ ಸರಣಿಯನ್ನು ನಿರ್ಧರಿಸುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ್ದಲ್ಲದೆ, ಆಕರ್ಷಕ ಶತಕ ಸಿಡಿಸಿ ಭಾರತ ತಂಡ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು.
-
A brilliant innings from @RishabhPant17 as he brings up his 4th Test 💯.#SAvIND #TeamIndia pic.twitter.com/eo1iTysemP
— BCCI (@BCCI) January 13, 2022 " class="align-text-top noRightClick twitterSection" data="
">A brilliant innings from @RishabhPant17 as he brings up his 4th Test 💯.#SAvIND #TeamIndia pic.twitter.com/eo1iTysemP
— BCCI (@BCCI) January 13, 2022A brilliant innings from @RishabhPant17 as he brings up his 4th Test 💯.#SAvIND #TeamIndia pic.twitter.com/eo1iTysemP
— BCCI (@BCCI) January 13, 2022
ಭಾರತೀಯ ಬ್ಯಾಟರ್ಗಳು ದಕ್ಷಿಣ ಆಫ್ರಿಕಾ ವೇಗಿಗಳ ದಾಳಿಗೆ ತತ್ತರಿಸಿ ವಿಕೆಟ್ ಒಪ್ಪಿಸುತ್ತಿದ್ದರೆ, ಮತ್ತೊಂದೆಡೆ ರೋಷಾವೇಶದಿಂದ ಬ್ಯಾಟಿಂಗ್ ಮಾಡಿದ ಪಂತ್ 133 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ನೆರವಿನಿಂದ ವೃತ್ತಿಜೀವನದ 4ನೇ ಶತಕ ಬಾರಿಸಿದರು. ಇವರು ದಾಖಲಿಸಿದ 4 ಶತಕಗಳ ಪೈಕಿ 3 ಶತಕಗಳು ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನೆಲದಲ್ಲಿ ಬಂದಿರುವುದು ವಿಶೇಷವಾಗಿದೆ.
ಏಷ್ಯಾದಿಂದಾಚೆ ಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್
ಕೇಪ್ಟೌನ್ನಲ್ಲಿ ಮೂರಂಕಿ ದಾಟುವ ಮೂಲಕ ರಿಷಭ್ ಪಂತ್ ಭಾರತದ ಪರ ಏಷ್ಯಾದ ಹೊರಗೆ ಗರಿಷ್ಠ ಶತಕ ಸಾಧನೆಗೈದ ಬ್ಯಾಟರ್ ಎಂಬ ತಮ್ಮದೇ ದಾಖಲೆಯನ್ನು ವಿಸ್ತರಿಸಿಕೊಂಡರು. ಅವರು ಈಗಾಗಲೇ 2018ರಲ್ಲಿ ಇಂಗ್ಲೆಂಡ್ ವಿರುದ್ಧ ಓವೆಲ್ನಲ್ಲಿ ಹಾಗು 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಶತಕ ದಾಖಲಿಸಿದ್ದರು. ಅಲ್ಲದೇ, SENA ರಾಷ್ಟ್ರಗಳಲ್ಲಿ ಗರಿಷ್ಠ ಶತಕ ಸಿಡಿಸಿದ ಭಾರತದ ಏಕೈಕ ಕೀಪರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅವರಿಬ್ಬರಿಗೋಸ್ಕರ ಇನ್ನೆಷ್ಟು ದಿನ ಯುವಕರನ್ನ ಹೊರಗಿಡ್ತೀರಾ?: ರಹಾನೆ-ಪೂಜಾರ ಆಟಕ್ಕೆ ನೆಟ್ಟಿಗರ ಅಸಮಾಧಾನ