ETV Bharat / sports

ಆಕ್ಸಿಜನ್ ಸಿಲಿಂಡರ್​ ,ಕೋವಿಡ್​ ರಿಲೀಫ್ ಕಿಟ್​ ಖರೀದಿಗಾಗಿ ದೇಣಿಗೆ ನೀಡಿದ ರಿಷಭ್ ಪಂತ್

ಈ ಕಠಿಣ ಸ್ಥಿತಿಯಲ್ಲಿ ಪ್ರತಿಯೊಬ್ಬರು ನಿಮ್ಮದೇ ದಾರಿಯಲ್ಲಿ ನೆರವು ನೀಡಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋವಿಡ್​ ಮತ್ತು ವ್ಯಾಕ್ಸಿನೇಷನ್​ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಸಂದೇಶವನ್ನು ದೇಶದ ವಿವಿಧ ಭಾಗಗಳಿಗೆ ತಲುಪುವಂತೆ ಮಾಡಿ..

ರಿಷಭ್ ಪಂತ್
ರಿಷಭ್ ಪಂತ್
author img

By

Published : May 8, 2021, 6:14 PM IST

ನವದೆಹಲಿ : ಭಾರತ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್​ಮನ್ ರಿಷಭ್ ಪಂತ್ ದೇಶ ನಡೆಸುತ್ತಿರುವ ಕೋವಿಡ್ ಹೋರಾಟಕ್ಕೈ ಕೈ ಜೋಡಿಸಿದ್ದಾರೆ.

ಈಗಾಗಲೇ ಸಚಿನ್, ಧವನ್, ವಿರಾಟ್​ ಕೊಹ್ಲಿ, ಜಯದೇವ್ ಉನಾದ್ಕಟ್ ಹಾಗೂ ವಿದೇಶಿ ಕ್ರಿಕೆಟಿಗರಾದ ಪ್ಯಾಟ್ ಕಮ್ಮಿನ್ಸ್, ಬ್ರೆಟ್​ ಲೀ, ನಿಕೋಲಸ್ ಪೂರನ್ ಭಾರತದ ಕೋವಿಡ್ ಹೋರಾಟಕ್ಕೆ ದೇಣಿಗೆ ನೀಡಿದ್ದಾರೆ.

ಇದೀಗ 23 ವರ್ಷದ ಪಂತ್ ಕೂಡ ಮಾನಿಟರಿ ಡೊನೇಷನ್​ ಮೂಲಕ ದೇಶದ ಸೌಲಭ್ಯ ವಂಚಿತ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಿರುವ ಆಕ್ಸಿಜನ್​ ಸಿಲಿಂಡರ್ ಸಹಿತ ಬೆಡ್​ ಮತ್ತು ಕೋವಿಡ್​ ರಿಲೀಫ್ ಕಿಟ್​ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಖರೀದಿಸಲು ಹೆಮ್ಕುಂಟ್ ಫೌಂಡೇಶನ್ ಜೊತೆಗೆ ಕೈ ಜೋಡಿಸಿದ್ದಾರೆ.

"ನಾನು ಹೆಮ್ಕುಂಟ್ ಫೌಂಡೇಶನ್‌ನ ವಿತ್ತೀಯ ದೇಣಿಗೆಯ ಮೂಲಕ ಬೆಂಬಲಿಸುತ್ತಿದ್ದೇನೆ. ಈ ಫೌಂಡೇಶನ್ ಆಕ್ಸಿಜನ್​ ಸಿಲಿಂಡರ್‌, ಬೆಡ್‌ಗಳು, ಕೋವಿಡ್-ರಿಲೀಫ್ ಕಿಟ್‌ಗಳು ಮತ್ತು ದೇಶಾದ್ಯಂತದ ಸಾಂಕ್ರಾಮಿಕ ಬಿಕ್ಕಟ್ಟಿನಿಂದ ನೊಂದಿರುವ ಜೀವಗಳಿಗೆ ಸಹಾಯ ಮಾಡುತ್ತದೆ.

ವಿಶೇಷವಾಗಿ ವೈದ್ಯಕೀಯ ಮೂಲಸೌಕರ್ಯಗಳ ಸಾಮರ್ಥ್ಯವನ್ನು ಹೊಂದಿರದ ನಗರಗಳು ಮತ್ತು ಮೆಟ್ರೋ ರಹಿತ ನಗರಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ನೆರವು ಮತ್ತು ಬೆಂಬಲವನ್ನು ನೀಡುವ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ " ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಈ ಕಠಿಣ ಸ್ಥಿತಿಯಲ್ಲಿ ಪ್ರತಿಯೊಬ್ಬರು ನಿಮ್ಮದೇ ದಾರಿಯಲ್ಲಿ ನೆರವು ನೀಡಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋವಿಡ್​ ಮತ್ತು ವ್ಯಾಕ್ಸಿನೇಷನ್​ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಸಂದೇಶವನ್ನು ದೇಶದ ವಿವಿಧ ಭಾಗಗಳಿಗೆ ತಲುಪುವಂತೆ ಮಾಡಿ.

ಜೊತೆಗೆ ಪ್ರತಿಯೊಬ್ಬರು ಪ್ರೋಟೋಕಾಲ್​ಗಳನ್ನು ಅನುಸರಿಸಿ, ಆದಷ್ಟು ಬೇಗ ವ್ಯಾಕ್ಸಿನ್ ತೆಗೆದುಕೊಳ್ಳಿ ಎಂದು ಪಂತ್ ಟ್ವೀಟ್​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ:24 ಗಂಟೆಗಳಲ್ಲಿ 3.6 ಕೋಟಿಗೆ ಏರಿದ ವಿರುಷ್ಕಾ ದಂಪತಿಯ ಕೋವಿಡ್​ ಸಂಗ್ರಹ ನಿಧಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.