ETV Bharat / sports

ಕ್ರಿಕೆಟಿಗ ರಿಷಭ್​​ ಪಂತ್ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿ... ಶೀಘ್ರ ಚೇತರಿಕೆ ಅಭಿಮಾನಿಗಳ ಹಾರೈಕೆ! - ರಿಷಬ್ ಪಂತ್ ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿ

ರಿಷಭ್​​ ಪಂತ್ ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿ - ವೇಗವಾಗಿ ಚೇತರಿಸಿಕೊಳ್ಳುತ್ತಿರುವ ರಿಷಬ್​ ಪಂತ್​ - ಮುಂಬೈಯ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ.

Rishabh Pant
ರಿಷಬ್​ ಪಂತ್
author img

By

Published : Jan 7, 2023, 5:17 PM IST

ಮುಂಬೈ: ಭಾರತದ ವಿಕೆಟ್‌ ಕೀಪರ್ - ಬ್ಯಾಟರ್ ರಿಷಬ್ ಪಂತ್ ಅವರು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಯಶಸ್ವಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶುಕ್ರವಾರ ಶಸ್ತ್ರಚಿಕಿತ್ಸೆ ನಡೆದಿದ್ದು, ಕ್ರಿಕೆಟಿಗ ಇದೀಗ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 30 ರಂದು ಸಂಭವಿಸಿದ ಕಾರು ಅಪಘಾತದ ನಂತರ ಪಂತ್ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡ ನಂತರ ಜನವರಿ 4 ರಂದು ಮುಂಬೈಯ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಂತ್​ ಅವರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿರುವುದಾಗಿ ತಿಳಿಸಿತ್ತು ಅದರಂತೆ ಇಂದು ಅವರ ಮೊಣಕಾಲಿನ ಅಸ್ಥಿರಜ್ಜು ಚಿಕಿತ್ಸೆ ಮಾಡಲಾಗಿದ್ದು, ಯಶಸ್ವಿಯಾಗಿದೆ ಎಂದು ತಿಳದು ಬಂದಿದೆ.

ಆರೋಗ್ಯದಲ್ಲಿ ಚೇತರಿಕೆ.. ಎಲ್ಲ ಸಹಕಾರ ನೀಡಲಿರುವ ಬಿಸಿಸಿಐ: ರಿಷಭ್​​ ಪಂತ್​ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ ಮತ್ತು ಅವರ ಚೇತರಿಕೆ ವೈದ್ಯಕೀಯ ತಂಡವು ಮೇಲ್ವಿಚಾರಣೆ ಮುಂದುವರೆಯುತ್ತದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಧವಾರ ತಿಳಿಸಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ರಿಷಭ್​​ ಪಂತ್​ ಆರೋಗ್ಯದಲ್ಲಿ ಚೇತರಿಕೆ ಇದೆ ಎಂದು ಮಂಡಳಿ ತಿಳಿಸಿದೆ. ಅಲ್ಲದೇ ಪಂತ್​ಗೆ ಅಗತ್ಯ ಇರುವ ಎಲ್ಲಾ ಚಿಕಿತ್ಸೆಗಳನ್ನು ಕೊಡಿಸಲು ಮಂಡಳಿ ಸಿದ್ಧವಿದೆ ಎಂದು ಪುನರುಚ್ಚರಿಸಿದೆ. ಪಂತ್ ಅವರು ಸ್ಪೋರ್ಟ್ಸ್ ಮೆಡಿಸಿನ್ ಕೇಂದ್ರದ ಮುಖ್ಯಸ್ಥ ಡಾ. ದಿನ್‌ಶಾ ಪರ್ದಿವಾಲಾ ಮತ್ತು ಆಸ್ಪತ್ರೆಯಲ್ಲಿ ಆರ್ತ್ರೋಸ್ಕೊಪಿ ಮತ್ತು ಭುಜದ ಸೇವೆಯ ನಿರ್ದೇಶಕರ ನೇರ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಮನೆಗೆ ಹೋಗುವಾಗ ಅಪಘಾತ ಸಂಭವಿಸಿದೆ: ರಿಷಭ್​ ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಡಿಸೆಂಬರ್​ 30 ಹೋಗುತ್ತಿದ್ದಾಗ ರಸ್ತೆ ಅಪಘಾತಕ್ಕೆ ಆಗಿತ್ತು. ರೂರ್ಕಿ ಬಳಿಯ ನರ್ಸನ್ ಎಂಬಲ್ಲಿ ಅವರ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ವೇಳೆ, ಕಾರಿಗೂ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಕಿಟಕಿ ಒಡೆದು ಪಂತ್​ ಹೊರಗೆ ಬಂದು ಜೀವ ಉಳಿಸಿಕೊಂಡಿದ್ದರು.

ಅಪಘಾತದ ಸಮಯದಲ್ಲಿ ಅಲ್ಲಿ ಹೋಗುತ್ತಿದ್ದ ಬಸ್​ ಚಾಲಕ ಮತ್ತು ನಿರ್ವಹಕ ಸೇರಿ ಆಂಬ್ಯುಲೆನ್ಸ್​ಗೆ ಕರೆಮಾಡಿ ಡೆಹ್ರಾಡೂನ್​ನ ಮ್ಯಾಕ್ಸ್​ ಆಸ್ಪತ್ರಗೆ ಸೇರಿಸಿದ್ದರು. ಉತ್ತರಾಖಂಡದ ಸಿಎಂ ಪುಷ್ಕರ್​ ಧಾಮಿ ಭೇಟಿ ಮಾಡಿದ್ದಾಗ ರಸ್ತೆ ಪಕ್ಕದಲ್ಲಿದ್ದ ಗುಂಡಿಯಿಂದಾಗಿ ನಿಯಂತ್ರಣ ತಪ್ಪಿದ್ದಾಗಿ ಪಂತ್​ ಹೇಳಿಕೊಂಡಿದ್ದರು. ನಂತರ ಪಂತ್​ ಅವರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ಏರ್​ ಲಿಫ್ಟ್​ ಮಾಡಲಾಗಿತ್ತು. ಇಲ್ಲಿನ ಆಸ್ಪತ್ರೆಯಲ್ಲಿ ಪಂತ್​ಗೆ ಚಿಕಿತ್ಸೆ ನಡೆಯುತ್ತಿದೆ. ಬಿಸಿಸಿಐ ತಿಳಿಸಿರುವ ಮಾಹಿತಿಯಂತೆ ಪಂತ್​ರ ಹಣೆಯ ಮೇಲೆ ಎರಡು ಗಾಯ, ಬಲ ಮೊಣಕಾಲು, ಪಾದದ, ಟೋ ಮತ್ತು ಬೆನ್ನಿನಲ್ಲಿ ಅಸ್ಥಿರಜ್ಜುವಿಗೆ ಪೆಟ್ಟಾಗಿದೆ ಎಂದು ತಿಳಿಸಲಾಗಿತ್ತು.

ಪಂತ್ ಮೂಲತಃ ಪಿಥೋರಘರ್ ನಿವಾಸಿ: ಭಾರತೀಯ ಕ್ರಿಕೆಟ್ ತಂಡದಲ್ಲಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಕುಟುಂಬ ಮೂಲತಃ ಪಿಥೋರಗಢ ಜಿಲ್ಲೆಯ ಗಂಗೊಳ್ಳಿಹತ್ ತಹಸಿಲ್‌ನ ನಿವಾಸಿಗಳಾಗಿದ್ದರು. ಪ್ರಸ್ತುತ, ರಿಷಬ್ ಪಂತ್ ಅವರ ಕುಟುಂಬವು ರೂರ್ಕಿಯ ಅಶೋಕ್ ನಗರ ಧಂಧೇರಾದಲ್ಲಿ ವಾಸಿಸುತ್ತಿದ್ದಾರೆ. ನ್ಯೂ ಇಯರ್​ ಹಿನ್ನೆಲೆ ತಾಯಿಗೆ ಸರ್ಪೈಸ್​ ಕೊಡಲು ಬರುತ್ತಿದ್ದ ವೇಳೆ ಪಂತ್​ಗೆ ಅಪಘಾತ ಸಂಭವಿಸಿತ್ತು.

ಇದನ್ನೂ ಓದಿ: ಕ್ರಿಕೆಟಿಗ ರಿಷಬ್​ ಪಂತ್‌ರನ್ನು​ ಮುಂಬೈ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧಾರ

ನೀವೊಬ್ಬ ಫೈಟರ್​.. ಬೇಗ ಗುಣಮುಖರಾಗಿ ತಂಡ ಸೇರಿಕೊಳ್ಳುತ್ತೀರಿ.. ದ್ರಾವಿಡ್​ ಸೇರಿ ಕ್ರಿಕೆಟಿಗರ ಭಾವನಾತ್ಮಕ ನುಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.