ಬೆಂಗಳೂರು: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಪ್ರಶಸ್ತಿಗೆ ಪಡೆದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ಶ್ರೇಯಕ್ಕೆ ಪಾತ್ರರಾದರು.
ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಟಿ20 ಕ್ರಿಕೆಟ್ನಂತರ ಬ್ಯಾಟಿಂಗ್ ಮಾಡಿ 2 ಅರ್ಧಶತಕ ಸೇರಿದಂತೆ 3 ಇನ್ನಿಂಗ್ಸ್ಗಳಿಂದ 185 ರನ್ಗಳಿಸಿದ್ದರು. ಈ ಪ್ರದರ್ಶನಕ್ಕಾಗಿ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ದೊರೆಯಿತು.
24 ವರ್ಷದ ಯುವ ವಿಕೆಟ್ ಕೀಪರ್ ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದು, ಇನ್ನು ದಶಕದ ಕಾಲ ಕ್ರಿಕೆಟ್ ಆಡುವುದರಿಂದ ಇಂತಹ ಹಲವು ವಿಶೇಷ ದಾಖಲೆಗಳು ಅವರ ಪಾಲಾಗಲಿವೆ.
ಪ್ರಸ್ತುತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಆ್ಯಡಂ ಗಿಲ್ಕ್ರಿಸ್ಟ್ 3 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಏಕೈಕ ವಿಕೆಟ್ ಕೀಪರ್ ಆಗಿದ್ದಾರೆ. ಅವರು 2004/05ರಲ್ಲಿ ಟ್ರಾನ್ಸ್- ತಸ್ಮಾನ್ ಟ್ರೋಫಿ, 2005ರಲ್ಲಿ ಐಸಿಸಿ ಸೂಪರ್ ಸಿರೀಸ್ ಟೆಸ್ಟ್ ಮ್ಯಾಚ್ ಮತ್ತು 2001/02ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದೀಗ ಪಂತ್ ಮಹತ್ತರ ಪಟ್ಟಿಗೆ ಸೇರಿದ್ದಾರೆ.
ಇದನ್ನೂ ಓದಿ:ತವರಿನಲ್ಲಿ ಸತತ 15ನೇ ಟೆಸ್ಟ್ ಸರಣಿ ಜಯ.. ವಿಶ್ವದಾಖಲೆ ಮತ್ತಷ್ಟು ಬಲಿಷ್ಠಪಡಿಸಿಕೊಂಡ ಭಾರತ..