ETV Bharat / sports

ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಗಾಯಾಳು ರಿಷಬ್​ ಪಂತ್​ ಔಟ್​?: ರೇಸ್​ನಲ್ಲಿ ಉಪೇಂದ್ರ, ಭರತ್​ - ಅಪಘಾತದಲ್ಲಿ ಗಾಯಗೊಂಡ ರಿಷಬ್​ ಪಂತ್​

ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟಿಗ ರಿಷಬ್​ ಪಂತ್​ ಆಸ್ಟ್ರೇಲಿಯಾ ಟೆಸ್ಟ್​ ಸರಣಿ ತಪ್ಪಿಸಿಕೊಳ್ಳಲಿದ್ದಾರೆ. ಪಂತ್​ ಬದಲಿಗೆ ಕೋನ ಶ್ರೀಕರ್​ ಭರತ್​, ಉಪೇಂದ್ರ ಯಾದವ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

rishab-pant-miss-to-australia-test-series
ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಗಾಯಾಳು ರಿಷಬ್​ ಪಂತ್​ ಔಟ್​
author img

By

Published : Jan 1, 2023, 9:59 AM IST

ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಯುವ ಕ್ರಿಕೆಟಿಗ ರಿಷಬ್​ ಪಂತ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕೆಲವು ದಿನಗಳ ವಿಶ್ರಾಂತಿಯ ಅಗತ್ಯವಿದೆ. ಮುಂದಿನ ತಿಂಗಳು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಟೆಸ್ಟ್​ ಸರಣಿಯಿಂದ ಅವರು ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಪಂತ್​ ಬದಲಿಗೆ ಕೋನ ಶ್ರೀಕರ್​ ಭರತ್​ ಅಥವಾ ಭಾರತ ಎ ತಂಡದ ಕೀಪರ್​ ಆಗಿರುವ ಉಪೇಂದ್ರ ಯಾದವ್​ ಅವಕಾಶ ಪಡೆಯುವ ರೇಸ್​ನಲ್ಲಿದ್ದಾರೆ.

ಅಪಘಾತದಲ್ಲಿ ಪಂತ್​ ಹಣೆ, ಬೆನ್ನು, ಪಾದಕ್ಕೆ ಗಾಯವಾಗಿದೆ. ಡೆಹ್ರಾಡೂನ್​ನ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹಣೆಗೆ ಗಾಯವಾದ ಕಾರಣ ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಲಿದ್ದಾರೆ. ಅಲ್ಲದೇ, ಬೆನ್ನು ನೋವಿಗೂ ಶಸ್ತ್ರಚಿಕಿತ್ಸೆ ನಡೆಯಲಿದೆ. ಹೀಗಾಗಿ ದೀರ್ಘಕಾಲ ಪಂತ್​ ವಿಶ್ರಾಂತಿ ಪಡೆಯಲಿದ್ದು, ಆಸ್ಟ್ರೇಲಿಯಾ ಸರಣಿ ಅಲಭ್ಯರಾಗಲಿದ್ದಾರೆ.

ಬಿಸಿಸಿಐ ಮೂಲಗಳ ಪ್ರಕಾರ, ಆಸ್ಟ್ರೇಲಿಯಾ ಸರಣಿಯಿಂದ ಪಂತ್​ ಬಹುತೇಕ ಹೊರಬೀಳಲಿದ್ದು, ಅವರ ಬದಲಿಗೆ ಕೋನ ಭರತ್​, ಉಪೇಂದ್ರ ಯಾದವ್​ರನ್ನು ಪರಿಗಣಿಸಲಾಗುವುದು. ಡ್ಯಾಶಿಂಗ್​ ಬ್ಯಾಟರ್​ ಇಶಾನ್​ ಕಿಶನ್ ಕೂಡ ರೇಸ್​ನಲ್ಲಿದ್ದಾರೆ. ಏಕದಿನದಲ್ಲಿ ಸ್ಥಾನ ಪಡೆದಿರುವ ಸಂಜು ಸ್ಯಾಮ್ಸನ್​ ಟೆಸ್ಟ್​ಗೂ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇಶಾನ್​ ಕಿಶನ್​ ಮತ್ತು ಸಂಜು ಸ್ಯಾಮ್ಸನ್​ಗಿಂತಲೂ ಉಪೇಂದ್ರ ಯಾದವ್​ ಮೇಲೆ ಬಿಸಿಸಿಐ ಹೆಚ್ಚಿನ ಆಸ್ಥೆ ವಹಿಸಿದೆ ಎಂದು ವರದಿಯಾಗಿದೆ.

ನಾಗಪುರದಲ್ಲಿ ನಡೆಯುವ ಮೊದಲ ಟೆಸ್ಟ್​​ನಲ್ಲಿ ಉಪೇಂದ್ರ ಯಾದವ್​​ ಟೆಸ್ಟ್​ ಕ್ಯಾಪ್​ ಧರಿಸಿದರೂ ಅಚ್ಚರಿ ಇಲ್ಲ. ಕೀಪಿಂಗ್​ನಲ್ಲಿ ಉತ್ತಮ ಕೌಶಲ್ಯಗಳನ್ನು ಹೊಂದಿದ್ದರೆ, ಬ್ಯಾಟಿಂಗ್​ನಲ್ಲಿ ಹಿಟ್ಟರ್​ ಕೂಡ ಆಗಿದ್ದಾರೆ. 45 ರ ಸರಾಸರಿಯಲ್ಲಿ ಬ್ಯಾಟ್​ ಬೀಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಟೆಸ್ಟ್​ ಸರಣಿ ಫೆಬ್ರವರಿ 8 ರಿಂದ ಆರಂಭವಾಗಲಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಶುಭ ಸುದ್ದಿ.. ಸುಧಾರಿಸುತ್ತಿದೆ ರಿಷಭ್​ ಪಂತ್​ ಆರೋಗ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.