ETV Bharat / sports

ವಿಶ್ವಕಪ್ ತಂಡದ ಸ್ಥಾನಕ್ಕೆ ರಿಂಕು ಸ್ಪರ್ಧಿ, ಆದರೆ ಅವರಿಗೆ ಸ್ಥಾನ ಇದೆಯಾ: ಆಶಿಶ್ ನೆಹ್ರಾ ಪ್ರಶ್ನೆ

ರಿಂಕು ಸಿಂಗ್​ ಮುಂದಿನ ಟಿ20 ವಿಶ್ವಕಪ್​​ ತಂಡದ ಆಯ್ಕೆಗಾರರ ಕಣ್ಣು ತೆರೆಸಿದ್ದಾರೆ. ಆದರೆ ಅವರಿಗೆ ತಂಡದಲ್ಲಿ ಸ್ಥಾನ ಸಿಗುತ್ತಾ ಎಂಬುದು ಪ್ರಶ್ನೆಯಾಗಿದೆ ಎಂದು ಟೀಮ್​ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ಹೇಳಿದ್ದಾರೆ.

Rinku Singh
Rinku Singh
author img

By ETV Bharat Karnataka Team

Published : Dec 3, 2023, 7:32 PM IST

ಹೈದರಾಬಾದ್​​​: 16ನೇ ಆವೃತ್ತಿಯ ಐಪಿಎಲ್​ನಲ್ಲಿ ಹಲವಾರು ಹೊಸ ಪ್ರತಿಭೆಗಳು ಭಾರತ ಟಿ20 ತಂಡದ ಕಡ ತಟ್ಟುವಲ್ಲಿ ಯಶಸ್ವಿ ಆದರು. ಅದರಲ್ಲಿ ರಿಂಕು ಸಿಂಗ್​​ ಸಹ ಒಬ್ಬರು. ಭಾರತ ತಂಡದಲ್ಲಿ ಸಿಕ್ಕ ಸ್ಥಾನವನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಲ್ಲದೇ, ತಂಡಕ್ಕೆ ಸಮಯೋಚಿತ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಟಿ20 ವಿಶ್ವಕಪ್ ತಂಡದಲ್ಲಿ ಫಿನಿಶರ್ ಸ್ಥಾನದ ಸ್ಪರ್ಧಿ ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ. ಅದರ ಜೊತೆಗೆ ಆದರೆ ಭಾರತದ ಮಾಜಿ ವೇಗಿ ನೆಹ್ರಾ ರಿಂಕು ಈ ಸ್ಥಾನವನ್ನು ಪಡೆಯಲು ಹಲವು ಸವಾಲುಗಳನ್ನು ಎದುರಿಸಬೆಕಾಗುತ್ತದೆ ಎಂದಿದ್ದಾರೆ.

ಮುಂದಿನ ವರ್ಷ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಬಿಸಿಸಿಐ ಈ ವಿಶ್ವಕಪ್​ಗಾಗಿ ಆಟಗಾರರ ಶೋಧಕ್ಕೆ ಸಿದ್ಧವಾಗಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಗೆ ಹೊಸಬರಿಗೆ ಮಣೆಹಾಕಲಾಗಿದ್ದು, ವಿಶ್ವಕಪ್​ ತಂಡದಲ್ಲಿ ಇವರಲ್ಲಿ ಕೆಲವರು ಸ್ಥಾನ ಪಡೆಯುವುದಂತೂ ಖಚಿತ ಎಂಬಂತಾಗಿದೆ. ಸ್ಥಾನಕ್ಕಾಗಿ ರಿಂಕು ಸಿಂಗ್​ ಪ್ರಮುಖ ಸ್ಪರ್ಧಿ ಆಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ರಿಂಕು ಅಬ್ಬರದ ಫಾರ್ಮ್‌ನಲ್ಲಿದ್ದಾರೆ ಮತ್ತು ಶುಕ್ರವಾರ ರಾಯ್‌ಪುರದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ 29 ಎಸೆತಗಳಲ್ಲಿ ಅವರು ಗಳಿಸಿದ 46 ರನ್‌ಗಳು ಭಾರತದ ಸರಣಿಯನ್ನು 3-1 ರ ಅಂತರದಿಂದ ಗೆಲುವು ಸಾಧಿಸುವಲ್ಲಿ ಪ್ರಮುಖವಾಗಿದೆ.

"ಭಾರತದ T20 ವಿಶ್ವಕಪ್ ತಂಡದಲ್ಲಿ ಸೇರ್ಪಡೆಗೊಳ್ಳಲು ರಿಂಕು ಸಿಂಗ್ ಸ್ಪರ್ಧಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ವಿಶ್ವಕಪ್ ಇನ್ನೂ ದೂರದಲ್ಲಿದೆ ಮತ್ತು ಅವರು ಸ್ಥಾನಕ್ಕಾಗಿ ಅನೇಕ ಸವಾಲುಗಳನ್ನು ಹೊಂದಿದ್ದಾರೆ. ನೀವು ಜಿತೇಶ್ ಶರ್ಮಾ (ವಿಕೆಟ್ ಕೀಪರ್-ಬ್ಯಾಟರ್) ಮತ್ತು ತಿಲಕ್ ವರ್ಮಾ ಅವರನ್ನು ನೋಡಬಹುದು. ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಆಡುವ ಸ್ಥಾನಗಳ ಬಗ್ಗೆ ನಾವು ಚರ್ಚಿಸಬೇಕಾಗಿದೆ" ಎಂದು ನೆಹ್ರಾ ಹೇಳಿದ್ದಾರೆ.

"ವಿಶ್ವಕಪ್​​ನ 15 ಜನ ಸದಸ್ಯರ ಬಳಗದ ಆಯ್ಕೆಗೆ ಇನ್ನೂ ಸಮಯ ಇದೆ. ಅದಕ್ಕೂ ಮುನ್ನ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಐಪಿಎಲ್​ ಪಂದ್ಯಗಳಲ್ಲಿ ಆಡಲಿದೆ. ರಿಂಕು ಸಿಂಗ್​ ತಮ್ಮ ಆಟದಿಂದ ಆಯ್ಕೆಗಾರರ ಕಣ್ಣನ್ನು ತೆರೆಸಿದ್ದಾರೆ. ಆದರೆ ಎಷ್ಟು ಸ್ಥಾನಗಳು ತಂಡದಲ್ಲಿ ಖಾಲಿ ಇವೆ ಎಂಬುದನ್ನು ಹೇಳುವುದು ಕಷ್ಟ" ಎಂದಿದ್ದಾರೆ ಮಾಜಿ ಎಡಗೈ ವೇಗಿ ನೆಹ್ರಾ.

2024ರ ವಿಶ್ವಕಪ್​ಗೆ ಇನ್ನೂ 7 ತಿಂಗಳು ಬಾಕಿ ಇದೆ. ಈಗಾಗಲೇ ಆಟಗಾರರ ಬಗ್ಗೆ ಲೆಕ್ಕಾಚಾರಗಳು ಆರಂಭವಾಗಿದ್ದು, ಹಿರಿಯ ಆಟಗಾರರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಮುಂದುವರೆಯುತ್ತಾರಾ ಇಲ್ಲ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್​ ರಾಹುಲ್​ ಮತ್ತು ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದರೆ ರಿಂಕು ಆಯ್ಕೆ ಯಾವ ಸ್ಥಾನಕ್ಕೆ ಆಗಲಿದೆ ಎಂಬುದು ಪ್ರಶ್ನಾರ್ಥಕವಾಗಿದೆ.

ಇದನ್ನೂ ಓದಿ: ಬೆಂಗಳೂರು ಟಿ20: ಟಾಸ್​ ಗೆದ್ದ ಆಸೀಸ್​​ ಬೌಲಿಂಗ್​ ಆಯ್ಕೆ; ದುಬೆ, ಸುಂದರ್​ಗಿಲ್ಲ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.