ETV Bharat / sports

ರೋಹಿತ್​ಗೆ ಏಕದಿನ ನಾಯಕತ್ವ ವಹಿಸಿದ್ದು ಒಳ್ಳೆಯ ನಿರ್ಧಾರ: ರವಿಶಾಸ್ತ್ರಿ

author img

By

Published : Dec 27, 2021, 4:36 PM IST

Ravi Shastri speaks on Rohith captaincy: ವಿರಾಟ್​ ಕೊಹ್ಲಿ ಇದೀಗ ಕೇವಲ ರೆಡ್​ ಬಾಲ್​ ಕ್ರಿಕೆಟ್​ಗೆ ಮಾತ್ರ ನಾಯಕನಾಗಿ ಉಳಿದಿದ್ದಾರೆ. ಸೀಮಿತ ಓವರ್​ ಕ್ರಿಕೆಟ್​ನ ವಿಶ್ವ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ರೋಹಿತ್ ಶರ್ಮಾ ಭಾರತ ಟಿ-20 ಮತ್ತು ಏಕದಿನ ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ.

: Shastri backs split captaincy
ರವಿ ಶಾಸ್ತ್ರಿ ನಾಯಕತ್ವ ವಿಭಜನೆ

ಮುಂಬೈ: ಭಾರತ ತಂಡದ ಮಾಜಿ ಮುಖ್ಯ ಕೋಚ್​ ರವಿಶಾಸ್ತ್ರಿ ಇತ್ತೀಚೆಗೆ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿದ ರೋಹಿತ್​ ಶರ್ಮಾಗೆ ನಾಯಕತ್ವ ವಹಿಸಿದ ನಿರ್ಧಾರವನ್ನು ಒಳ್ಳೆಯದೇ ಎಂದು ಸಮರ್ಥಿಸಿಕೊಂಡಿದ್ದಾರೆ. ಇದರಿಂದ ವಿರಾಟ್​ ಕೊಹ್ಲಿ ಒತ್ತಡವಿಲ್ಲದೇ ಬ್ಯಾಟಿಂಗ್ ಮಾಡಬಹುದು ಎಂದು ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಇದೀಗ ಕೇವಲ ರೆಡ್​ ಬಾಲ್​ ಕ್ರಿಕೆಟ್​ಗೆ ಮಾತ್ರ ನಾಯಕನಾಗಿ ಉಳಿದಿದ್ದಾರೆ. ಸೀಮಿತ ಓವರ್​ ಕ್ರಿಕೆಟ್​ನ ವಿಶ್ವ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ರೋಹಿತ್ ಶರ್ಮಾ ಭಾರತ ಟಿ-20 ಮತ್ತು ಏಕದಿನ ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ.

"ಇದು(ನಾಯಕತ್ವ ವಿಭಜನೆ) ಸರಿಯಾದ ಮಾರ್ಗವೆಂದು ನಾನು ಭಾವಿಸುತ್ತೇನೆ. ಇದರಿಂದ ವಿರಾಟ್ ಮತ್ತು ರೋಹಿತ್‌ ಇಬ್ಬರಿಗೂ ಒಳ್ಳೆಯದಾಗಲಿದೆ. ಒಬ್ಬ ವ್ಯಕ್ತಿ ಈ ಕಠಿಣ ಸಂದರ್ಭದಲ್ಲಿ ಮೂರು ಮಾದರಿಯಲ್ಲೂ ನಾಯಕತ್ವ ನಿಭಾಯಿಸುವುದು ಸುಲಭವಲ್ಲ" ಎಂದು ಭಾರತದ ಮಾಜಿ ಆಲ್ ರೌಂಡರ್ ಶಾಸ್ತ್ರಿ ಸ್ಟಾರ್​ ಸ್ಪೋರ್ಟ್ಸ್​ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಕೊಹ್ಲಿ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿ, ನಾವಿಬ್ಬರು ಆಕ್ರಮಣಕಾರಿ ಮನೋಭಾವದವರು, ನಾವು ಗೆಲುವಿಗಾಗಿ ಆಡಲು ಬಯಸುತ್ತಿದ್ದೆವು. 20 ವಿಕೆಟ್ ಪಡೆದರೆ ನಾವು ಗೆಲ್ಲಬಹುದು ಎನ್ನುವುದನ್ನು ಬೇಗ ಅರಿತುಕೊಂಡೆವು. ಆದ್ದರಿಂದ ನಾವು ಆಕ್ರಮಣಕಾರಿಯಾಗಿ ಮತ್ತು ಭಯವಿಲ್ಲದೇ ಆಡಲು ಶುರುಮಾಡಿದೆವು ಎಂದು ಕಳೆದೆರಡು ವರ್ಷಗಳಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ವಿದೇಶದಲ್ಲೂ ಅವಿಸ್ಮರಣೀಯ ಗೆಲುವು ಸಾಧಿಸಲು ಇದೇ ಮನೋಭಾವ ಕಾರಣವಾಯಿತು ಎಂದು ಶಾಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ:ಮಯಾಂಕ್​-ರಾಹುಲ್ ದಾಖಲೆ: 11 ವರ್ಷಗಳ ಬಳಿಕ ದ.ಆಫ್ರಿಕಾ ನೆಲದಲ್ಲಿ ದಾಖಲೆ ಶತಕದ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.